alex Certify ರೈಲು ಪ್ರಯಾಣಿಕರೇ ಗಮನಿಸಿ: ಇನ್ಮುಂದೆ ಇದೊಂದೆ ಸಹಾಯವಾಣಿ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಪ್ರಯಾಣಿಕರೇ ಗಮನಿಸಿ: ಇನ್ಮುಂದೆ ಇದೊಂದೆ ಸಹಾಯವಾಣಿ ಸಂಖ್ಯೆ

ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಸಹಾಯವಾಣಿಯೊಂದನ್ನ ತೆರೆದಿದೆ. ಅಂದರೆ ಇನ್ಮೇಲೆ ನೀವು ಇದೊಂದು ಸಹಾಯವಾಣಿ ಸಹಾಯದಿಂದ ನೀವು ರೈಲ್ವೆ ಸೇವೆ ಸಂಬಂಧಿ ಎಲ್ಲಾ ಗೊಂದಲಗಳನ್ನ ನಿವಾರಿಸಿಕೊಳ್ಳಬಹುದಾಗಿದೆ. ರೈಲ್ವೆ ಇಲಾಖೆ ತನ್ನ ಸಹಾಯವಾಣಿ ಸಂಖ್ಯೆ 182 ಹಾಗೂ 138ಯನ್ನ ಸೇರಿಸಿ ಇಂಟಿಗ್ರೇಟೆಡ್​ ಸಿಂಗರ್​ ಹೆಲ್ಪ್​ಲೈನ್​ ಸಂಖ್ಯೆ 139ನ್ನು ಜಾರಿ ಮಾಡಿದೆ.

ರೈಲ್ವೆ ಸಚಿವಾಲಯ ಟ್ವೀಟ್​ ಮಾಡುವ ಮೂಲಕ ಈ ಸಹಾಯವಾಣಿ ಸಂಖ್ಯೆಯ ಬಗ್ಗೆ ಮಾಹಿತಿ ನೀಡಿದೆ. ಈ ಟ್ವೀಟ್​ನಲ್ಲಿ ಭಾರತೀಯ ರೈಲ್ವೆ ಸಚಿವಾಲಯ, 138 ಹಾಗೈ 182 ಸಂಖ್ಯೆಯನ್ನ ಮರ್ಜ್​ ಮಾಡಿ ಒಂದೇ ಸಹಾಯವಾಣಿಯನ್ನ ತಂದಿದ್ದೇವೆ. ಇನ್ಮುಂದೆ ರೈಲ್ವೆ ಇಲಾಖೆಯ ಯಾವುದೇ ಗೊಂದಲ ಪರಿಹಾರಕ್ಕಾಗಿ 139 ಸಂಖ್ಯೆಗೆ ಕರೆ ಮಾಡಿ ಎಂದು ಬರೆದುಕೊಂಡಿದೆ.

139 ಸಹಾಯವಾಣಿಗೆ ಕರೆ ಮಾಡಿ ನೀವು ಈ ಕೆಳಗಿನ ವಿಚಾರಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ :
ರೈಲ್ವೆ ಸೇವೆ ಸಂಬಂಧಿ ದೂರು
ಸಾಮಾನ್ಯ ವಿಚಾರಣೆ
ಪಾರ್ಸಲ್​ ವಿಚಾರಣೆ
ಅಪಘಾತ ವಿಚಾರಣೆ
ಮೆಡಿಕಲ್ ಅಸಿಸ್ಟಂಟ್​
ಸ್ಟೇಷನ್​ ಕಂಪ್ಲೇಂಟ್​
ಯಾವ ಸಂಖ್ಯೆಗಳಲ್ಲಿ ಯಾವ ಸೇವೆ ಲಭ್ಯವಿದೆ..?
ಸಂಖ್ಯೆ 1ನ್ನ ಪ್ರೆಸ್​ ಮಾಡುವ ಮೂಲಕ ವೈದ್ಯಕೀಯ ಮಾಹಿತಿ ಪಡೆಯಬಹುದಾಗಿದೆ.
ನಂಬರ್​2ನ್ನ ಆಯ್ಕೆ ಮಾಡುವ ಮೂಲಕ ಪಿಎನ್​ಆರ್,  ಹಾಗೂ ಟಿಕೆಟ್​ ಬುಕ್ಕಿಂಗ್​ ಬಗ್ಗೆ ಮಾಹಿತಿ ಪಡೆಯಬಹುದು.
ನಂಬರ್​ 3ನ್ನು ಆಯ್ಕೆ ಮಾಡುವ ಮೂಲಕ ಕೇಟರಿಂಗ್​ ಸಂಬಂಧಿ ದೂರನ್ನ ನೀಡಬಹುದು
ನಂಬರ್​4ರಲ್ಲಿ ಸಾಮಾನ್ಯ ದೂರನ್ನ ನೀಡಬಹುದು
5ನ್ನು ಆಯ್ಕೆ ಮಾಡುವ ಮೂಲಕ ರೈಲ್ವೆ ಇಲಾಖೆಯಲ್ಲಿನ ಭ್ರಷ್ಟಾಚಾರ ಸಂಬಂಧಿ ದೂರನ್ನ ನೀಡುವುದು
ನಂಬರ್​ 6ರಲ್ಲಿ ರೈಲು ದುರಂತ ಸಂಬಂಧಿ ಸೂಚನೆಗಳು
ನಂಬರ್​ 9ರಲ್ಲಿ ನೀವು ನೀಡಿದ ದೂರಿನ ಸಂಬಂಧಿ ಮಾಹಿತಿ ಪಡೆಯಬಹುದು
* ಸಹಾಯವಾಣಿ ಸಿಬ್ಬಂದಿಯೊಂದಿಗೆ ಮಾತನಾಡವುದು

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...