ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಸಹಾಯವಾಣಿಯೊಂದನ್ನ ತೆರೆದಿದೆ. ಅಂದರೆ ಇನ್ಮೇಲೆ ನೀವು ಇದೊಂದು ಸಹಾಯವಾಣಿ ಸಹಾಯದಿಂದ ನೀವು ರೈಲ್ವೆ ಸೇವೆ ಸಂಬಂಧಿ ಎಲ್ಲಾ ಗೊಂದಲಗಳನ್ನ ನಿವಾರಿಸಿಕೊಳ್ಳಬಹುದಾಗಿದೆ. ರೈಲ್ವೆ ಇಲಾಖೆ ತನ್ನ ಸಹಾಯವಾಣಿ ಸಂಖ್ಯೆ 182 ಹಾಗೂ 138ಯನ್ನ ಸೇರಿಸಿ ಇಂಟಿಗ್ರೇಟೆಡ್ ಸಿಂಗರ್ ಹೆಲ್ಪ್ಲೈನ್ ಸಂಖ್ಯೆ 139ನ್ನು ಜಾರಿ ಮಾಡಿದೆ.
ರೈಲ್ವೆ ಸಚಿವಾಲಯ ಟ್ವೀಟ್ ಮಾಡುವ ಮೂಲಕ ಈ ಸಹಾಯವಾಣಿ ಸಂಖ್ಯೆಯ ಬಗ್ಗೆ ಮಾಹಿತಿ ನೀಡಿದೆ. ಈ ಟ್ವೀಟ್ನಲ್ಲಿ ಭಾರತೀಯ ರೈಲ್ವೆ ಸಚಿವಾಲಯ, 138 ಹಾಗೈ 182 ಸಂಖ್ಯೆಯನ್ನ ಮರ್ಜ್ ಮಾಡಿ ಒಂದೇ ಸಹಾಯವಾಣಿಯನ್ನ ತಂದಿದ್ದೇವೆ. ಇನ್ಮುಂದೆ ರೈಲ್ವೆ ಇಲಾಖೆಯ ಯಾವುದೇ ಗೊಂದಲ ಪರಿಹಾರಕ್ಕಾಗಿ 139 ಸಂಖ್ಯೆಗೆ ಕರೆ ಮಾಡಿ ಎಂದು ಬರೆದುಕೊಂಡಿದೆ.