ವಿಟಮಿನ್ ಸಿ ನಮ್ಮ ದೇಹ, ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಆದರೆ ವಿಟಮಿನ್ ಸಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಹಾನಿಯಾಗುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳಿ.
-ದೇಹದಲ್ಲಿ ವಿಟಮಿನ್ ಸಿ ಅಧಿಕವಾದಾಗ ದೇಹದಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಾಗುತ್ತದೆ. ಈ ಕಾರಣದಿಂದ ದೇಹ ಅನಾರೋಗ್ಯಕ್ಕೆ ತುತ್ತಾಗುತ್ತದೆ.
-ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಮೂತ್ರಪಿಂಡ ಹಾಳಾಗುತ್ತದೆ. ವಿಟಮಿನ್ ಸಿ ಅತಿಯಾಗಿ ಸೇವಿಸುವುದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಬೆಳೆಯುವ ಅಪಾಯವು ಹೆಚ್ಚಾಗುತ್ತದೆ.
-ವಿಟಮಿನ್ ಸಿ ಹೊಟ್ಟೆಯನ್ನು ಸದೃಢವಾಗಿರಲು ಸಹಾಯ ಮಾಡುತ್ತದೆ. ಆದರೆ ವಿಟಮಿನ್ ಸಿ ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬಿಕೊಳ್ಳುತ್ತದೆ.
-ವಿಟಮಿನ್ ಸಿ ಅತಿಯಾಗಿ ಸೇವಿಸುವುದರಿಂದ ತಲೆನೋವು ಉಂಟಾಗುತ್ತದೆ. ಹಾಗಾಗಿ ಅದನ್ನು ಮಿತವಾಗಿ ಸೇವಿಸಿ.
*ವಿಟಮಿನ್ ಸಿ ಯ ಅತಿಯಾದ ಸೇವನೆಯು ನಿದ್ರಾಹೀನತೆಗೆ ಕಾರಣವಾಗುತ್ತದೆ.