ತಾಯಿಹಾಲು ಅಮೃತ ಅನ್ನೋ ಮಾತಿದೆ. ಕೆಲ ಮಹಿಳೆಯರು ಮಗುವಿಗೆ ಕೇವಲ ಎದೆ ಹಾಲನ್ನೊಂದೇ ನೀಡ್ತಾರೆ. ಇನ್ನು ಕೆಲವರು ಮಗುವಿಗೆ ಬಾಟಲಿ ಹಾಲನ್ನ ಕುಡಿಸುತ್ತಾರೆ. ನೀವು ಯಾವುದೇ ವಿಧಾನವನ್ನ ಅನುಸರಿಸಿದ್ದರೂ ಸಹ ಮಗುವಿಗೆ ಸರಿಯಾದ ಪ್ರಮಾಣದಲ್ಲಿ ಹಾಲನ್ನ ನೀಡಬೇಕಾಗುತ್ತದೆ.
ಹಸುಗೂಸುಗಳಿಗೆ ಹೇಗೆ ಹಸಿವಾಗಿದೆ ಅನ್ನೋದನ್ನ ಬಾಯಲ್ಲಿ ಹೇಳೋಕೆ ಆಗಲ್ವೋ ಅದೇ ರೀತಿ ಹೊಟ್ಟೆ ತುಂಬಿದೆ ಅಂತಾನೂ ಹೇಳೋಕೆ ಬರಲ್ಲ. ಹೀಗಾಗಿ ಈ ಲಕ್ಷಣಗಳು ನಿಮ್ಮ ಮಗುವಿನಲ್ಲಿ ಕಾಣಿಸಿಕೊಳ್ತು ಅಂದರೆ ನೀವು ಅದಕ್ಕೆ ಅಗತ್ಯಕ್ಕಿಂತ ಹೆಚ್ಚು ಹಾಲುಣಿಸಿದ್ದೀರಿ ಎಂದರ್ಥ.
ಕಂದಮ್ಮಗಳು ಸಾಮಾನ್ಯವಾಗಿ ಬಾಯಿಯಿಂದ ಉಗುಳನ್ನ ಹೊರಹಾಕ್ತಾವೆ. ಆದರೆ ಪದೇ ಪದೇ ಉಗುಳನ್ನ ಹೊರ ಹಾಕುತ್ತಿವೆ ಎಂದರೆ ನೀವು ಅತಿಯಾಗಿ ಹಾಲುಣಿಸಿದ್ದೀರಿ ಎಂದು ಅರ್ಥ ಮಾಡಿಕೊಳ್ಳಿ.
ಬಾಟಲಿ ಹಾಲಿನಲ್ಲಿ ಮಗುವಿಗೆ ಹಾಲುಣಿಸುತ್ತಿದ್ದರೆ ಅತಿಯಾದ ಹಾಲನ್ನ ನೀಡೋದ್ರಿಂದ ಮಗುವಿಗೆ ಹೊಟ್ಟೆ ಉಬ್ಬರವಾಗುತ್ತೆ. ಹೀಗಾಗಿ ಮಗುವಿನ ಹೊಟ್ಟೆ ಉಬ್ಬರಿಸಿದೆ ಅಂದರೆ ನೀವು ಜಾಸ್ತಿ ಹಾಲುಣಿಸಿದ್ದೀರಿ ಎಂದೇ ಅರ್ಥ.
ನಿಮ್ಮ ಮಕ್ಕಳಿಗೆ ಹೆಚ್ಚು ಹಾಲು ನೀಡಬಾರದು ಅಂದರೆ ಕೆಲವೊಂದು ಕ್ರಮಗಳನ್ನ ನೀವು ಅನುಸರಿಸಬೇಕಾಗುತ್ತದೆ. ಎದೆ ಹಾಲುಣಿಸುವ ಮುನ್ನ ಕೆಲ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಬೇಕು.
ಬಾಟಲಿ ಹಾಲಿನ ಬದಲು ಆದಷ್ಟು ಎದೆಹಾಲನ್ನೇ ನೀಡಿ. ಯಾಕಂದ್ರೆ ಮಗುಗೆ ಎದೆ ಹಾಲು ಬೇಡ ಅಂದರೆ ಕುಡಿಯೋದನ್ನ ನಿಲ್ಲಿಸುತ್ತೆ. ಮಗುವಿಗೆ ಹಾಲು ಕುಡಿಸಲು ಸಮಯ ನಿಗದಿ ಮಾಡಿ. ಇದರಿಂದಲೂ ಅತಿಯಾಗಿ ಹಾಲುಣಿಸೋದನ್ನ ನಿಯಂತ್ರಿಸಬಹುದಾಗಿದೆ.