ಹೊಸ ಎಲ್ಪಿಜಿ ಸಿಲಿಂಡರ್ ತೆಗೆದುಕೊಳ್ಳುವುದು ಆನ್‌ಲೈನ್ ಶಾಪಿಂಗ್‌ನಂತೆಯೇ ಸುಲಭವಾಗಿದೆ. ಕುಟುಂಬದಲ್ಲಿ ಯಾರಾದರೂ ಎಲ್ಪಿಜಿ ಸಂಪರ್ಕವನ್ನು ಹೊಂದಿದ್ದರೂ, ಕುಟುಂಬದ ಇನ್ನೊಬ್ಬ ಸದಸ್ಯರು ಎಲ್ಪಿಜಿ ಸಿಲಿಂಡರ್ ಸಂಪರ್ಕ ಪಡೆಯುವುದು ಈಗ ಸುಲಭವಾಗಿದೆ.
ಇದಕ್ಕೆ ನೀವು ಹೊಸ ವಿಳಾಸ ಪುರಾವೆಗಳನ್ನು ಒದಗಿಸುವ ಅಗತ್ಯವಿಲ್ಲ. ತೈಲ ಕಂಪನಿಗಳು, ಗ್ರಾಹಕರಿಗೆ ಈ ಸೌಲಭ್ಯವನ್ನು ನೀಡಿವೆ. ಇದನ್ನು ಪ್ರಧಾನ್ ಮಂತ್ರಿ ಉಜ್ವಲಾ ಯೋಜನೆಯಡಿ ಕೂಡ ಪಡೆಯಬಹುದು.
ಈ ಸೌಲಭ್ಯದಡಿಯಲ್ಲಿ, ಪೋಷಕರು, ಒಡಹುಟ್ಟಿದವರು ಅಥವಾ ಕುಟುಂಬದ ಯಾವುದೇ ಸಂಬಂಧಿಕರ ಹೆಸರಿನಲ್ಲಿ ಈಗಾಗಲೇ ಗ್ಯಾಸ್ ಸಂಪರ್ಕವನ್ನು ತೆಗೆದುಕೊಂಡಿದ್ದರೂ ಇತರ ಕುಟುಂಬ ಸದಸ್ಯರ ಹೆಸರಿನಲ್ಲಿ ಇನ್ನೊಂದು ಸಿಲಿಂಡರ್ ಸಂಪರ್ಕ ಪಡೆಯಬಹುದು.
ಗ್ಯಾಸ್ ಏಜೆನ್ಸಿಗೆ ಹೋಗಿ, ಸಂಬಂಧಿಸಿದ ದಾಖಲೆಗಳನ್ನು ನೀಡಬೇಕಾಗುತ್ತದೆ. ದಾಖಲೆ ರೂಪದಲ್ಲಿ ಹಳೆ ಸಿಲಿಂಡರ್ ಸಂಪರ್ಕ ಪಡೆದ ವಿಳಾಸ ಮತ್ತು ಆಧಾರ್ ಕಾರ್ಡ್ ನೀಡಬೇಕು. ದಾಖಲೆ ಪರಿಶೀಲನೆಯ ನಂತರ, ಹೊಸ ಅನಿಲ ಸಂಪರ್ಕ ಸಿಗಲಿದೆ.
ಹಳೆ ಸಿಲಿಂಡರ್ ಗೆ ಸಿಗುವಂತೆ ಇದಕ್ಕೂ ಸಬ್ಸಿಡಿ ಲಭ್ಯವಿದೆ. ಇಂತಹ ಅನಿಲ ಸಂಪರ್ಕಗಳನ್ನು ಉಜ್ವಲಾ ಯೋಜನೆಯಡಿ ಸಹ ಪಡೆಯಬಹುದು. ಒಂದೇ ವಿಳಾಸದಲ್ಲಿ ಅನೇಕ ಅನಿಲ ಸಂಪರ್ಕಗಳನ್ನು ತೆಗೆದುಕೊಳ್ಳಬಹುದು. ಎಲ್ಲಾ ಅನಿಲ ಸಂಪರ್ಕಗಳು ಆಧಾರ್‌ಗೆ ಸಂಬಂಧಿಸಿರುವುದರಿಂದ ಯಾವುದೇ ರೀತಿಯ ವಂಚನೆಗೆ ಅವಕಾಶವಿರುವುದಿಲ್ಲ.