alex Certify ಆಧಾರ್, ಡಿಎಲ್ ಸೇರಿ ಗುರುತಿನ ಚೀಟಿ ಇಲ್ಲದವರಿಗೂ ಗುಡ್ ನ್ಯೂಸ್, ಲಸಿಕೆಗೆ ಬೇಕಿಲ್ಲ ಐಡಿ ಕಾರ್ಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್, ಡಿಎಲ್ ಸೇರಿ ಗುರುತಿನ ಚೀಟಿ ಇಲ್ಲದವರಿಗೂ ಗುಡ್ ನ್ಯೂಸ್, ಲಸಿಕೆಗೆ ಬೇಕಿಲ್ಲ ಐಡಿ ಕಾರ್ಡ್

ಬೆಂಗಳೂರು: ಕೊರೋನಾ ಲಸಿಕೆ ಪಡೆಯಲು ಗುರುತಿನ ಚೀಟಿ ಬೇಕಿಲ್ಲ. ಗುರುತಿನ ಚೀಟಿ ಇಲ್ಲದವರಿಗೆ ಕೂಡ ಲಸಿಕೆ ನೀಡುವಂತೆ ಸರ್ಕಾರ ಸೂಚಿಸಿದೆ.

ಕೊರೋನಾ ಲಸಿಕೆ ಪಡೆಯಲು ಆಧಾರ್, ಪಾನ್ ಕಾರ್ಡ್, ವೋಟರ್ ಐಡಿ, ಪಾಸ್ಪೋರ್ಟ್ ಸೇರಿದಂತೆ ಯಾವುದಾದರೊಂದು ಗುರುತಿನ ಚೀಟಿ ಕಡ್ಡಾಯ ಕೊಡಬೇಕಿತ್ತು. ಆದರೆ, ಈಗಾಗಲೇ ಲಸಿಕೆ ಪಡೆದುಕೊಳ್ಳುತ್ತಿರುವ ಮುಂಚೂಣಿ ಕಾರ್ಯಕರ್ತರ ಬಳಿ ದಾಖಲೆ ಇಲ್ಲದಿದ್ದರೂ ಕೂಡ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದಕ್ಕಾಗಿಯೇ ಕೋ -ವಿನ್ ತಂತ್ರಾಂಶದಲ್ಲಿ ಪ್ರತ್ಯೇಕ ಆಯ್ಕೆ ನೀಡಲಾಗಿದೆ.

ರಾಜ್ಯದಲ್ಲಿ ಇದೇ ಮಾದರಿಯನ್ನು ಬಳಸಿಕೊಂಡು ಗುರುತಿನ ಚೀಟಿ ಇಲ್ಲದ ಮುಂಚೂಣಿ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ಲಸಿಕೆ ನೀಡಬೇಕು ಎಂದು ತಿಳಿಸಲಾಗಿದೆ. ಲಸಿಕೆ ಅಭಿಯಾನದ ಮುಖ್ಯಸ್ಥರು ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾದ ಡಾ. ಅರುಂಧತಿ ಚಂದ್ರಶೇಖರ್ ಅವರು ಈ ಕುರಿತಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...