
ಈ ವಿಚಾರವಾಗಿ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, 2028ರ ಲಾಸ್ ಏಂಜಲೀಸ್ ಒಲಂಪಿಕ್ ನಲ್ಲಿ ಕ್ರಿಕೆಟ್ ಸೇರ್ಪಡೆ ಮಾಡಿದಲ್ಲಿ ಟೀಂ ಇಂಡಿಯಾ ಕೂಡ ಸ್ಪರ್ಧೆಗೆ ಇಳಿಯಲಿದೆ ಎಂದು ಹೇಳಿದ್ರು. ಈ ಮೊದಲು ಬಿಸಿಸಿಐ ಒಲಂಪಿಕ್ನಲ್ಲಿ ಸೇರ್ಪಡೆಯಾಗಲು ಮನಸ್ಸು ಮಾಡಿರಲಿಲ್ಲ. ಆದರೆ ಜಯ್ ಶಾ ಅಧಿಕಾರ ವಹಿಸಿಕೊಂಡಾಗಿನಿಂದ ಈ ನಿಲುವು ಬದಲಾಗಿದೆ.
ಐಸಿಸಿ ಈಗಾಗಲೇ ವರ್ಕಿಂಗ್ ಗ್ರೂಪ್ನ್ನು ರಚನೆ ಮಾಡಿದೆ. ಇದು 2028ರಿಂದ ಆರಂಭವಾಗಲಿರುವ ಒಲಂಪಿಕ್ ನ ಪರವಾಗಿ ಕೆಲಸ ಮಾಡಲಿದೆ. ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಬೋರ್ಡ್ ಮುಖ್ಯಸ್ಥ ಇಯಾನ್ ವಾಟ್ಮೋರ್ ಐಸಿಸಿ ಒಲಂಪಿಕ್ ವರ್ಕಿಂಗ್ ಗ್ರೂಪ್ನ್ನು ಮುನ್ನಡೆಸಲಿದ್ದಾರೆ. ಐಸಿಸಿ ಸ್ವತಂತ್ರ ನಿರ್ದೇಶಕ ಇಂದ್ರ ನೂಯಿ, ಜಿಂಬಾಬ್ವೆ ಕ್ರಿಕೆಟ್ ಮುಖ್ಯಸ್ಥ ತವೆಂಗ್ವಾ ಮುಕುಹ್ಲಾನಿ, ಐಸಿಸಿ ಅಸೋಸಿಯೇಟ್ ಸದಸ್ಯ ನಿರ್ದೇಶಕ ಮಹಿಂದಾ ವಲ್ಲಿಪುರಂ ಈ ಗ್ರೂಪ್ನಲ್ಲಿ ಇದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಐಸಿಸಿ ಚೇರ್ಮನ್ ಗ್ರೇಗ್ ಬಾಕ್ರ್ಲೆ, ಈ ಬಿಡ್ನ ಹಿಂದೆ ಕ್ರಿಕೆಟ್ ಕುಟುಂಬ ಒಗ್ಗಟ್ಟಾಗಿದೆ, ನಾವು ಒಲಂಪಿಕ್ ನಲ್ಲಿ ಕ್ರಿಕೆಟ್ನ ಭವಿಷ್ಯವನ್ನು ನೋಡುತ್ತಿದ್ದೇವೆ. ಕ್ರಿಕೆಟ್ ಜಾಗತಿಕವಾಗಿ ಶತಕೋಟಿ ಅಧಿಕ ಅಭಿಮಾನಿಗಳನ್ನು ಹೊಂದಿದೆ. ಜಗತ್ತಿನಲ್ಲಿ 90 ಪ್ರತಿಶತ ಜನರು ಒಲಂಪಿಕ್ ನಲ್ಲಿ ಕ್ರಿಕೆಟ್ನ್ನು ನೋಡಬಯಸುತ್ತಾರೆ. ಕ್ರಿಕೆಟ್ ಭಾವನಾತ್ಮಕ ಅಭಿಮಾನಿಗಳನ್ನು ಹೊಂದಿದೆ. ದಕ್ಷಿಣ ಏಷಿಯಾದಲ್ಲಿ 92 ಪ್ರತಿಶತ ಮಂದಿ ಕ್ರಿಕೆಟ್ ಅಭಿಮಾನಿಗಳೇ ಆಗಿದ್ದಾರೆ. ಅಮೆರಿಕದಲ್ಲಿ 30 ಮಿಲಿಯನ್ ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಇವರೆಲ್ಲರೂ ಒಲಂಪಿಕ್ ನಲ್ಲಿ ಕ್ರಿಕೆಟ್ನ್ನು ನೋಡಬಯಸುತ್ತಾರೆ ಎಂದು ಹೇಳಿದ್ದಾರೆ.
ಒಲಂಪಿಕ್ ನಲ್ಲಿ ಕ್ರಿಕೆಟ್ ಸೇರ್ಪಡೆ ಮಾಡುವುದು ಉತ್ತಮ ನಿರ್ಧಾರವಾಗಿದೆ ಎಂದು ನಾವು ನಂಬಿದ್ದೇವೆ. ಆದರೆ ಇದೇ ರೀತಿ ಅನೇಕ ಕ್ರೀಡೆಗಳು ಸಹ ಇದೇ ಬಯಕೆಯನ್ನು ಹೊಂದಿರೋದ್ರಿಂದ ಈ ದಾರಿ ಸುಲಭವಾದುದಲ್ಲ ಎಂಬುದು ನಮಗೂ ತಿಳಿದಿದೆ. ಆದರೆ ಕ್ರಿಕೆಟ್ನ್ನು ಒಲಂಪಿಕ್ ಗೆ ಸೇರ್ಪಡೆ ಮಾಡುವ ಪ್ರಯತ್ನಕ್ಕೆ ಮುನ್ನಡಿ ಇಡಲು ಇದು ಸೂಕ್ತ ಸಮಯವಾಗಿದೆ ಎಂದು ನಾವು ನಂಬಿದ್ದೇವೆ ಎಂದು ಹೇಳಿದ್ರು.