ಬೀದರ್: ರಾಜ್ಯದ ವಿವಿಧ ಜಿಲ್ಲೆಗಳ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಮುಂದುವರೆದಿದ್ದು, ಯಾದಗಿರಿ, ಬಳ್ಳಾರಿ, ಶಿವಮೊಗ್ಗ, ಬೆಳಗಾವಿ ಸೇರಿದಂತೆ ಹಲವೆಡೆಗಳಲ್ಲಿ ಹಿಜಾಬ್ ಗಾಗಿ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.
ಈ ನಡುವೆ ಬಳ್ಳಾರಿ ಸರಳಾದೇವಿ ಕಾಲೇಜಿನಲ್ಲಿ ಗ್ರಂಥಪಾಲಕಿಯೊಬ್ಬರು ಹಿಜಾಬ್ ಧರಿಸಲು ಅವಕಾಶ ನಿಡುವಂತೆ ಕೋರಿ ಕಾಲೇಜು ಆವರಣದಲ್ಲಿ ಕಣ್ಣೀರಿಟ್ಟ ಘಟನೆ ನಡೆದಿದೆ.
ವಾಹನ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: 650 cc ಬೈಕ್ ಪರಿಚಯಿಸಲು ರಾಯಲ್ ಎನ್‌ಫೀಲ್ಡ್ ಸಿದ್ಧತೆ..!
ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ ಗ್ರಂಥಪಾಲಕಿಗೆ ಕಾಲೇಜು ಸಿಬ್ಬಂದಿಗಳು ಹಾಗೂ ಪೊಲೀಸರು ತಡೆದಿದ್ದು, ಹಿಜಾಬ್ ತೆಗೆಯುವಂತೆ ಸೂಚಿಸಿದ್ದಾರೆ. ಇದಕ್ಕೆ ಕಾಲೇಜು ಆವರಣದಲ್ಲಿಯೇ ಬಿಕ್ಕಿಬಿಕ್ಕಿ ಅಳಲು ಆರಂಭಿಸಿದ ಗ್ರಂಥಪಾಲಕಿ, ಹಿಜಾಬ್ ತೆಗೆಯುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ಮಹಿಳಾ ಪೊಲೀಸರು ಗ್ರಂಥಪಾಲಕಿಗೆ ಮನವೊಲಿಸಲು ಯತ್ನಿಸಿದ್ದಾರೆ. ಆದಾಗ್ಯೂ ಪಟ್ಟು ಸಡಿಲಿಸದ ಗ್ರಂಥಪಾಲಕಿ ಗಳಗಳನೆ ಅತ್ತಿದ್ದಾರೆ. ಗ್ರಂಥಪಾಲಕಿ ವರ್ತನೆಗೆ ಪೊಲೀಸರೇ ಅವಾಕ್ಕಾಗಿದ್ದಾರೆ.
ಈ ನಡುವೆ ಬಳ್ಳಾರಿ ಮಹಿಳಾ ಕಾಲೇಜಿನಲ್ಲಿಯೂ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕಾಲೇಜಿಗೆ ಧಾರ್ಮಿಕ ಗುರುತು ಧರಿಸಿ ಹೋಗುವಂತಿಲ್ಲ ಎನ್ನುವುದಾದರೆ ಹಿಂದೂ ವಿದ್ಯಾರ್ಥಿನಿಯರು ಕುಂಕುಮ, ಸಿಂಧೂರ ತೆಗೆದು ಬರಲಿ. ಅವರಿಗೆ ಮಾತ್ರ ಯಾಕೆ ಅವಕಾಶ ಎಂದು ಪ್ರಶ್ನಿಸಿದ್ದಾರೆ.