ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು ಗ್ರಾಮೀಣ ಬ್ಯಾಂಕುಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಹುದ್ದೆಗೆ ibps.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಐಬಿಪಿಎಸ್ ಜೂನ್ 28ರವರೆಗೆ ಅವಕಾಶ ನೀಡಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರಾಥಮಿಕ, ಮುಖ್ಯ ಪರೀಕ್ಷೆ ಹಾಗೂ ಕೊನೆಯಲ್ಲಿ ಸಂದರ್ಶನ ಇರಲಿದೆ. ಕಚೇರಿ ಸಹಾಯಕ ಹಾಗೂ ಆಫೀಸರ್ ಸ್ಕೇಲ್ 1, 2 ಹಾಗೂ 3ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಆಗಸ್ಟ್ ತಿಂಗಳಲ್ಲಿ ಪ್ರಾಥಮಿಕ ಹಂತದ ಪರೀಕ್ಷೆ ನಡೆಯಲಿದೆ. ಆಗಸ್ಟ್ 1ನೇ ತಾರೀಖು ಪರೀಕ್ಷೆ ನಡೆಯುತ್ತೆ ಎಂದು ಈ ಹಿಂದೆ ಐಬಿಪಿಎಸ್ ಹೇಳಿತ್ತು. ಆದರೆ ಪರಿಷ್ಕೃತ ದಿನಾಂಕವನ್ನ ಐಬಿಪಿಎಸ್ ಇನ್ನೂ ಪ್ರಕಟಿಸಿಲ್ಲ.
ಡಿಗ್ರಿ ಪದವೀಧರರು, ಎಂಬಿಎ ಹಾಗೂ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಈ ಕೆಳಗಿನ ಅರ್ಹತೆ ಹೊಂದಿರೋದು ಅನಿವಾರ್ಯವಾಗಿದೆ:
ಅಭ್ಯರ್ಥಿಗಳು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಹಾಗೂ 30 ವರ್ಷಕ್ಕಿಂತ ಕೆಳಗಿನವರಾಗಿರಬೇಕು. ಆಫೀಸರ್ 1, 2 ಹಾಗೂ 3ಕ್ಕೆ 32 ಹಾಗೂ 40 ವರ್ಷದ ಮಿತಿಯನ್ನ ನಿಗದಿಪಡಿಸಲಾಗಿದೆ.
ಪ್ರಾಥಮಿಕ ಹಂತದ ಪರೀಕ್ಷೆ : ಆಗಸ್ಟ್ 2021
ಪ್ರಾಥಮಿಕ ಹಂತದ ಪರೀಕ್ಷೆ ಫಲಿತಾಂಶ : ಸೆಪ್ಟೆಂಬರ್ 2021
ಮುಖ್ಯ ಪರೀಕ್ಷೆ : ಸೆಪ್ಟೆಂಬರ್ /ಅಕ್ಟೋಬರ್ 2021
ಸಂದರ್ಶನ : ಅಕ್ಟೋಬರ್/ನವೆಂಬರ್ 2021
ಎಸ್/ ಎಸ್ಟಿ ಹಾಗೂ ಪಿಡಬ್ಲುಬಿಡಿ ಅಭ್ಯರ್ಥಿಗಳಿಗೆ 175 ರೂಪಾಯಿ ಹಾಗೂ ಉಳಿದವರಿಗೆ 850 ರೂಪಾಯಿ ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿದೆ.