alex Certify ಕಲಾವಿದನ ಪಿಯಾನೋ ವಾದನಕ್ಕೆ ಮನಸೋತಿರುವ ಅಮ್ಮ- ಮರಿ ಆನೆ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲಾವಿದನ ಪಿಯಾನೋ ವಾದನಕ್ಕೆ ಮನಸೋತಿರುವ ಅಮ್ಮ- ಮರಿ ಆನೆ: ವಿಡಿಯೋ ವೈರಲ್

ಆನೆಗಳ ಬಗ್ಗೆ ಹೇಳಿದಷ್ಟೂ ಕಡಿಮೆಯೇ. ಅವುಗಳ ಆಟ, ತುಂಟಾಟ, ತನ್ನಮಾಲೀಕ ಹೇಳಿದಂತೆ ಕೇಳುವುದು ಎಲ್ಲವೂ ಒಂದು ರೀತಿಯಲ್ಲಿ ಕುತೂಹಲ ಮೂಡಿಸುತ್ತದೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಇದನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತಾಯಿ ಮತ್ತು ಮರಿ ಆನೆಗಾಗಿ ಪಿಯಾನೋ ನುಡಿಸುತ್ತಿರುವುದನ್ನು ನೋಡಬಹುದಾಗಿದೆ. ವಿಡಿಯೋವನ್ನು ಇದಾಗಲೇ 4 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಆನೆಗಳ ಕ್ಯೂಟ್​ ಪ್ರೀತಿಗೆ ಮನಸೋತಿದ್ದಾರೆ.

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಪಿಯಾನೋದೊಂದಿಗೆ ಕಾಡಿನಲ್ಲಿ ಕುಳಿತಿರುವುದನ್ನು ನೋಡಬಹುದು. ಆತನ ಹಿಂದೆ ತಾಯಿ ಮತ್ತು ಮರಿ ಆನೆ ಇದೆ. ತಾನು ಈ ಆನೆಗಳಿಗಾಗಿ ಪಿಯಾನೋ ನುಡಿಸುತ್ತಿರುವುದಾಗಿ ಈತ ಕೇಳಿದ್ದಾನೆ. ಆನೆ ಮತ್ತು ಮರಿ ಎರಡೂ ಸಂಗೀತವನ್ನು ಆಸ್ವಾದಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈತ ಥಾಯ್ಲೆಂಡ್‌ನಿಂದ ಪಿಯಾನೋ ವಾದಕ ಪಾಲ್ ಬಾರ್ಟನ್ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...