
ಆನೆಗಳ ಬಗ್ಗೆ ಹೇಳಿದಷ್ಟೂ ಕಡಿಮೆಯೇ. ಅವುಗಳ ಆಟ, ತುಂಟಾಟ, ತನ್ನಮಾಲೀಕ ಹೇಳಿದಂತೆ ಕೇಳುವುದು ಎಲ್ಲವೂ ಒಂದು ರೀತಿಯಲ್ಲಿ ಕುತೂಹಲ ಮೂಡಿಸುತ್ತದೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಇದನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತಾಯಿ ಮತ್ತು ಮರಿ ಆನೆಗಾಗಿ ಪಿಯಾನೋ ನುಡಿಸುತ್ತಿರುವುದನ್ನು ನೋಡಬಹುದಾಗಿದೆ. ವಿಡಿಯೋವನ್ನು ಇದಾಗಲೇ 4 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಆನೆಗಳ ಕ್ಯೂಟ್ ಪ್ರೀತಿಗೆ ಮನಸೋತಿದ್ದಾರೆ.
ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಪಿಯಾನೋದೊಂದಿಗೆ ಕಾಡಿನಲ್ಲಿ ಕುಳಿತಿರುವುದನ್ನು ನೋಡಬಹುದು. ಆತನ ಹಿಂದೆ ತಾಯಿ ಮತ್ತು ಮರಿ ಆನೆ ಇದೆ. ತಾನು ಈ ಆನೆಗಳಿಗಾಗಿ ಪಿಯಾನೋ ನುಡಿಸುತ್ತಿರುವುದಾಗಿ ಈತ ಕೇಳಿದ್ದಾನೆ. ಆನೆ ಮತ್ತು ಮರಿ ಎರಡೂ ಸಂಗೀತವನ್ನು ಆಸ್ವಾದಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈತ ಥಾಯ್ಲೆಂಡ್‌ನಿಂದ ಪಿಯಾನೋ ವಾದಕ ಪಾಲ್ ಬಾರ್ಟನ್ ಎಂದು ಹೇಳಲಾಗಿದೆ.
https://twitter.com/ShwetaS13970606/status/1594355598979911684?ref_src=twsrc%5Etfw%7Ctwcamp%5Etweete