alex Certify ಹಾವಿನ ವಿಷ ತೆಗೆಯುವುದು ಹೇಗೆ ಗೊತ್ತಾ ? ಇಲ್ಲಿದೆ ಬೆರಗುಗೊಳಿಸುವ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವಿನ ವಿಷ ತೆಗೆಯುವುದು ಹೇಗೆ ಗೊತ್ತಾ ? ಇಲ್ಲಿದೆ ಬೆರಗುಗೊಳಿಸುವ ವಿಡಿಯೋ

ಹಾವು ಕಡಿತವು ಮಾರಣಾಂತಿಕವಾಗಿರಬಹುದು ಎಂಬುದರಲ್ಲಿ ಸಂದೇಹವಿಲ್ಲ. ಕೆಲವೇ ಕೆಲವು ವಿಷಕಾರಿಯಲ್ಲದ ಹಾವುಗಳಿರಬಹುದು. ಆದರೆ, ಹಾವು ಎಂದರೆ ವಿಷ ಪದ ಜೋಡಣೆಯಾಗಿಯೇ ಬರುತ್ತದೆ.

ಇದೀಗ ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು ಹಾವಿಗೆ ಸಂಬಂಧಪಟ್ಟ ಅಚ್ಚರಿಯ ವಿಡಿಯೊ ಹಂಚಿಕೊಂಡಿದ್ದು, ನೆಟ್ಟಿಗರನ್ನು ಬೆರಗುಗೊಳಿಸಿದೆ. ಹಾವಿನ ವಿಷ ಸಂಗ್ರಹಿಸಲು ಯಾವರೀತಿ ಹಾವಿನಿಂದ ವಿಷವನ್ನು ಹೊರತೆಗೆಯಲಾಗುತ್ತದೆ ಎಂಬುದನ್ನು ವಿಡಿಯೋ ತೋರಿಸುತ್ತದೆ.

ಈ ಪ್ರಕ್ರಿಯೆಯು ಹಾವುಗಳಿಗೆ ಹಾನಿಕಾರಕ ಎಂದು ಭಾವಿಸುವ ಮೊದಲು, ಹಾವಿನ ವಿಷವನ್ನು ಹೊರತೆಗೆಯಲು ಮತ್ತು ಔಷಧೀಯ ಉದ್ದೇಶಗಳಿಗಾಗಿ ಸರ್ಕಾರದಿಂದ ವಿಶೇಷ ಅನುಮತಿಯನ್ನು ಪಡೆದಿರುವ ಇರುಳ ಬುಡಕಟ್ಟು ಜನಾಂಗದವರ ಬಗ್ಗೆ ತಿಳಿಯಬೇಕಾಗುತ್ತದೆ. ಸಾಹು ಅವರ ಶೀರ್ಷಿಕೆಯ ಪ್ರಕಾರ, ಹಾವುಗಳಿಗೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಈ ಪ್ರಕ್ರಿಯೆಯನ್ನು ಮಾಡಲಾಗುತ್ತದೆ.

ಇರುಳ ಬುಡಕಟ್ಟು ಜನಾಂಗದವರು ಹಾವುಗಳಿಂದ ಹಾವಿನ ವಿಷವನ್ನು ಹೊರತೆಗೆಯುವುದು ಅಚ್ಚರಿ ತರುವುದಂತೂ ಪಕ್ಕಾ. ವಿಷ ನಿರೋಧಕ ಔಷಧ (ಆಂಟಿ ಸ್ನೇಕ್​ ವೆನಮ್​) ತಯಾರಿಸಲು ಹಾವಿನ ವಿಷವನ್ನು ಫಾರ್ಮಾ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ. 1978 ರಲ್ಲಿ ಸ್ಥಾಪಿಸಲಾದ ಇರುಲಾ ಸ್ನೇಕ್​ ಕ್ಯಾಚರ್ಸ್​ ಸೊಸೈಟಿಯು 300 ಸದಸ್ಯರನ್ನು ಹೊಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ವಿಡಿಯೋಗೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ನೆಟ್ಟಿಗರನೇಕರು ಈ ವಿಶಿಷ್ಟ ವೃತ್ತಿಯ ಬಗ್ಗೆ ವಿಚಾರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...