ಹಾವು ಕಡಿತವು ಮಾರಣಾಂತಿಕವಾಗಿರಬಹುದು ಎಂಬುದರಲ್ಲಿ ಸಂದೇಹವಿಲ್ಲ. ಕೆಲವೇ ಕೆಲವು ವಿಷಕಾರಿಯಲ್ಲದ ಹಾವುಗಳಿರಬಹುದು. ಆದರೆ, ಹಾವು ಎಂದರೆ ವಿಷ ಪದ ಜೋಡಣೆಯಾಗಿಯೇ ಬರುತ್ತದೆ.
ಇದೀಗ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಾವಿಗೆ ಸಂಬಂಧಪಟ್ಟ ಅಚ್ಚರಿಯ ವಿಡಿಯೊ ಹಂಚಿಕೊಂಡಿದ್ದು, ನೆಟ್ಟಿಗರನ್ನು ಬೆರಗುಗೊಳಿಸಿದೆ. ಹಾವಿನ ವಿಷ ಸಂಗ್ರಹಿಸಲು ಯಾವರೀತಿ ಹಾವಿನಿಂದ ವಿಷವನ್ನು ಹೊರತೆಗೆಯಲಾಗುತ್ತದೆ ಎಂಬುದನ್ನು ವಿಡಿಯೋ ತೋರಿಸುತ್ತದೆ.
ಈ ಪ್ರಕ್ರಿಯೆಯು ಹಾವುಗಳಿಗೆ ಹಾನಿಕಾರಕ ಎಂದು ಭಾವಿಸುವ ಮೊದಲು, ಹಾವಿನ ವಿಷವನ್ನು ಹೊರತೆಗೆಯಲು ಮತ್ತು ಔಷಧೀಯ ಉದ್ದೇಶಗಳಿಗಾಗಿ ಸರ್ಕಾರದಿಂದ ವಿಶೇಷ ಅನುಮತಿಯನ್ನು ಪಡೆದಿರುವ ಇರುಳ ಬುಡಕಟ್ಟು ಜನಾಂಗದವರ ಬಗ್ಗೆ ತಿಳಿಯಬೇಕಾಗುತ್ತದೆ. ಸಾಹು ಅವರ ಶೀರ್ಷಿಕೆಯ ಪ್ರಕಾರ, ಹಾವುಗಳಿಗೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಈ ಪ್ರಕ್ರಿಯೆಯನ್ನು ಮಾಡಲಾಗುತ್ತದೆ.
ಇರುಳ ಬುಡಕಟ್ಟು ಜನಾಂಗದವರು ಹಾವುಗಳಿಂದ ಹಾವಿನ ವಿಷವನ್ನು ಹೊರತೆಗೆಯುವುದು ಅಚ್ಚರಿ ತರುವುದಂತೂ ಪಕ್ಕಾ. ವಿಷ ನಿರೋಧಕ ಔಷಧ (ಆಂಟಿ ಸ್ನೇಕ್ ವೆನಮ್) ತಯಾರಿಸಲು ಹಾವಿನ ವಿಷವನ್ನು ಫಾರ್ಮಾ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ. 1978 ರಲ್ಲಿ ಸ್ಥಾಪಿಸಲಾದ ಇರುಲಾ ಸ್ನೇಕ್ ಕ್ಯಾಚರ್ಸ್ ಸೊಸೈಟಿಯು 300 ಸದಸ್ಯರನ್ನು ಹೊಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ವಿಡಿಯೋಗೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ನೆಟ್ಟಿಗರನೇಕರು ಈ ವಿಶಿಷ್ಟ ವೃತ್ತಿಯ ಬಗ್ಗೆ ವಿಚಾರಿಸಿದ್ದಾರೆ.
https://twitter.com/muraliraw/status/1571751350245150726?ref_src=twsrc%5Etfw%7Ctwcamp%5Etweetembed%7Ctwterm%5E1571751350245150726%7Ctwgr%5E443b4ed7cdf4d36fc1cec3e151d3b0ef27089d0b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fias-officer-shares-video-of-irula-tribe-member-extracting-snake-venom-watch-2002429-2022-09-20