alex Certify ಮನುಷ್ಯನ ನಿರ್ಲಕ್ಷ್ಯಕ್ಕೆ ಪ್ರಾಣಿಗಳ ಬಲಿ: ಪ್ಲಾಸ್ಟಿಕ್​ ತಿನ್ನುತ್ತಿರುವ ಆನೆ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನುಷ್ಯನ ನಿರ್ಲಕ್ಷ್ಯಕ್ಕೆ ಪ್ರಾಣಿಗಳ ಬಲಿ: ಪ್ಲಾಸ್ಟಿಕ್​ ತಿನ್ನುತ್ತಿರುವ ಆನೆ ವಿಡಿಯೋ ವೈರಲ್​

ಪ್ಲಾಸ್ಟಿಕ್ ನಮ್ಮ ಜೀವನದ ಒಂದು ಭಾಗವಾಗಿದೆ. ಪ್ಲಾಸ್ಟಿಕ್‌ನಿಂದ ಮಾಡಿದ ಟೂತ್‌ಬ್ರಶ್‌ನಿಂದ ನಮ್ಮ ದಿನವನ್ನು ಪ್ರಾರಂಭಿಸುವುದರಿಂದ ಹಿಡಿದು ಕುಡಿಯುವ ನೀರಿಗೆ ಬಳಸುವ ಟಂಬ್ಲರ್‌ಗಳವರೆಗೆ, ಎಲ್ಲದ್ದಕ್ಕೂ ಇದನ್ನೇ ಬಳಸುತ್ತಿದ್ದೇವೆ. ಆದರೆ ಎಲ್ಲೆಂದರೆಲ್ಲಿ ಬೀಸಾಡುವ ಪ್ಲಾಸ್ಟಿಕ್​ ಪ್ರಾಣಿಗಳ ಜೀವಕ್ಕೆ ಹೇಗೆಲ್ಲಾ ಕುತ್ತು ತರುತ್ತವೆ ಎಂಬ ಬಗ್ಗೆ ಇದಾಗಲೇ ಹಲವಾರು ಸುದ್ದಿ, ವಿಡಿಯೋಗಳು ಬಂದಿವೆ.

ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಹಸುಗಳು ಪ್ಲಾಸ್ಟಿಕ್​ ತಿಂದು ಜೀವ ಕಳೆದುಕೊಂಡಿರುವ ಉದಾಹರಣೆಗಳಂತೆಯೇ ಆನೆಯೊಂದು ಪ್ಲಾಸ್ಟಿಕ್​ ತಿನ್ನುತ್ತಿರುವ ವಿಡಿಯೋ ಇದಾಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ.

ಸುಪ್ರಿಯಾ ಸಾಹು ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಆನೆ ಪ್ಲಾಸ್ಟಿಕ್ ಜಗಿಯುತ್ತಿರುವುದನ್ನು ತೋರಿಸುತ್ತದೆ. ವೀಡಿಯೊ ಸಂಪೂರ್ಣವಾಗಿ ಹೃದಯ ವಿದ್ರಾವಕವಾಗಿದೆ. ನಾವು ಪ್ಲಾಸ್ಟಿಕ್ ಬಳಸಿ ಹೇಗೆ ನಿರ್ಲಕ್ಷ್ಯದಿಂದ ಅವುಗಳನ್ನು ಬೀಸಾಡುತ್ತಾ ಪ್ರಾಣಿಗಳ ಜೀವಕ್ಕೆ ಕುತ್ತು ತರುತ್ತಿದ್ದೇವೆ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ.

“ಮಾನವರು ಪ್ಲಾಸ್ಟಿಕ್‌ನ ದಾಸರಾದಾಗ ಅದಕ್ಕೆ ಬಲಿಯಾಗುವುದು ಪ್ರಾಣಿಗಳು. ಇದು ಇಂದಿನ ದುರಂತ“ ಎಂದು ಶೀರ್ಷಿಕೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...