
ವಿಮಾನದೊಳಗೆ ಗುಟ್ಕಾ ಉಗುಳಿದ ಫೋಟೋ ವೈರಲ್ ಆಗಿದೆ. ಫೋಟೋ ಹಂಚಿಕೊಂಡ ಐಎಎಸ್ ಅಧಿಕಾರಿ ಅವನೀಶ್ ಶರಣ್ ಯಾರೋ ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ವಿಮಾನದ ಕಿಟಕಿ ಕೆಳಗೆ ಕಂಡು ಬಂದ ಗುಟ್ಕಾ ಕಲೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿ ಯಾರೋ ಇಲ್ಲಿ ತಮ್ಮ ಗುರುತು ಬಿಟ್ಟಿದ್ದಾರೆ ಎಂದು ಬರೆದಿದ್ದಾರೆ.
ಅವರ ಈ ಪೋಸ್ಟ್ ವೈರಲ್ ಆಗಿದ್ದು, 12k ಲೈಕ್ ಗಳು ಮತ್ತು ಭಾರೀ ರೀಟ್ವೀಟ್ ಗಳು ಮತ್ತು ಕಾಮೆಂಟ್ ಗಳು ಬಂದಿವೆ.
ಜನ ಸ್ವಚ್ಛತೆಗೆ ಒತ್ತು ನೀಡುವುದಿಲ್ಲ ಎಂಬುದನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರ ಈ ಪೋಸ್ಟ್ ಮತ್ತೆ ಸಾಬೀತುಪಡಿಸುವಂತಿದೆ ಎಂದೆಲ್ಲ ಹೇಳಲಾಗಿದೆ.