ನ್ಯೂಯಾರ್ಕ್: 9/11 ಡಬ್ಲ್ಯೂಟಿಸಿ ಭಯೋತ್ಪಾದಕಾ ದಾಳಿ ನಡೆದು 20 ವರ್ಷವಾಗಿದೆ. ಆ ಕರಾಳ ದಿನದ ನೆನಪು ಇನ್ನೂ ಮಾಸಿಲ್ಲ. ದಾಳಿಯ ಒಂದು ದಿನದ ಮೊದಲು ತಾನು ವಿಶ್ವ ವ್ಯಾಪಾರ ಕೇಂದ್ರದಲ್ಲಿದ್ದೆ ಎಂದು ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ನೆನಪಿಸಿಕೊಂಡಿದ್ದಾರೆ.
ಈ ಭಯಾನಕ ದುರ್ಘಟನೆಯು ಯುಎಸ್ ಓಪನ್ 2001ರ ಮುಕ್ತಾಯದ ಎರಡು ದಿನಗಳ ನಂತರ ಸಂಭವಿಸಿದೆ. ಸ್ಟಾರ್ ಭಾರತೀಯ ಜೋಡಿ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಪಂದ್ಯಾವಳಿಯಿಂದ ಮೊದಲ ಸುತ್ತಿನ ನಿರ್ಗಮನ ಮಾಡಿದ್ದರು.
ಆದರೆ, ನ್ಯೂಯಾರ್ಕ್ ನಲ್ಲಿ ನಡೆಯಲಿದ್ದ ಡೇವಿಸ್ ಕಪ್ ಗಾಗಿ ಸಜ್ಜಾಗಿದ್ದರಂತೆ. ಭಯೋತ್ಪಾದಕ ದಾಳಿಗೆ ಒಂದು ದಿನ ಮುಂಚಿತವಾಗಿ ಡಬ್ಲ್ಯೂಟಿಸಿ ಯ ಟವರ್ 1ರಲ್ಲಿ ಲಿಯಾಂಡರ್ ಪೇಸ್ ಇದ್ದರು. ಆದರೆ, ದಾಳಿ ನಡೆದಾಗ ಅವರು ನ್ಯೂಯಾರ್ಕ್ ನಗರವನ್ನು ತೊರೆದು ಫ್ರಾಂಕ್ ಫರ್ಟ್ ತಲುಪಿದ್ದರಂತೆ.
BIG NEWS: ಪುರಾತನ ಹಿಂದೂ ದೇವಾಲಯಗಳ ತೆರವು; ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ಪೇಸ್ ಡಬಲ್ಸ್ ಪಾರ್ಟ್ನರ್ ಆಗಿರುವ ಮಹೇಶ್ ಭೂಪತಿ ಅವರು ಡಬ್ಲ್ಯೂಟಿಸಿ ಟವರ್ ನಿಂದ ಸುಮಾರು 72 ಬ್ಲಾಕ್ ಗಳ ದೂರದಲ್ಲಿದ್ದರಂತೆ. ದುರ್ಘಟನೆ ನೆನೆದ ಭೂಪತಿ, ಆರಂಭದಲ್ಲಿ ಇದು ವಿಮಾನ ಅಪಘಾತ ಎಂದೇ ಭಾವಿಸಿದ್ದೆವು. ನಂತರ 2ನೇ ವಿಮಾನ ಕಟ್ಟಡಕ್ಕೆ ಡಿಕ್ಕಿ ಹೊಡೆಯುವುದನ್ನು ನೋಡಿದೆವು ಎಂದು ಹೇಳಿದ್ದಾರೆ.