alex Certify ಹೃದಯಸ್ಪರ್ಶಿ ಟ್ವೀಟ್‌ ಮೂಲಕ ಎಬಿಡಿಗೆ ಕೊಹ್ಲಿಯಿಂದ ಭಾವಪೂರ್ಣ ಬೀಳ್ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಸ್ಪರ್ಶಿ ಟ್ವೀಟ್‌ ಮೂಲಕ ಎಬಿಡಿಗೆ ಕೊಹ್ಲಿಯಿಂದ ಭಾವಪೂರ್ಣ ಬೀಳ್ಕೊಡುಗೆ

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಎಬಿ ಡಿ ವಿಲಿಯರ್ಸ್ ಕ್ರಿಕೆಟ್‌ನ ಎಲ್ಲಾ ಮಾದರಿಗೂ ಗುಡ್‌ ಬೈ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾವಪೂರ್ಣ ಹೇಳಿಕೆಯೊಂದಿಗೆ ಅಭಿಮಾನಿಗಳ ಮೆಚ್ಚಿನ ಎಬಿಡಿ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ಮೆಚ್ಚಿನ ಆಟಗಾರನ ನಿವೃತ್ತಿಗೆ ಅಭಿಮಾನಿಗಳು ಹಾಗೂ ಸಹ ಆಟಗಾರರಿಂದ ಸಾಮಾಜಿಕ ಜಾಲತಾಣದಲ್ಲಿ ಭಾವಪೂರ್ಣವಾದ ಬೀಳ್ಕೊಡುಗೆಯ ಸಂದೇಶಗಳು ಹರಿದಾಡುತ್ತಿವೆ.

ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಸಹ ತಮ್ಮ ತಂಡದ ನಂ.1 ಆಟಗಾರನ ವಿದಾಯಕ್ಕೆ ನೋಟ್ ಒಂದನ್ನು ಟ್ವೀಟ್ ಮಾಡಿದ್ದಾರೆ.

“ನಮ್ಮ ಕಾಲದ ಶ್ರೇಷ್ಠ ಆಟಗಾರ ಹಾಗೂ ನಾನು ಭೇಟಿ ಮಾಡಿದ ಅತ್ಯಂತ ಸ್ಪೂರ್ತಿಯುತ ವ್ಯಕ್ತಿಗೆ, ನೀವು ಏನು ಮಾಡಿದ್ದೀರಿ ಹಾಗೂ ಆರ್‌ಸಿಬಿ ತಂಡಕ್ಕೆ ಏನೆಲ್ಲಾ ಕೊಟ್ಟಿದ್ದೀರಿ ಎಂಬುದಕ್ಕೆ ಹೆಮ್ಮೆ ಪಡಬಹುದು. ನಮ್ಮ ಬಾಂಧವ್ಯ ಆಟವನ್ನೂ ಮೀರಿದ್ದು ಹಾಗೂ ಅದು ಯಾವಾಗಲೂ ಹಾಗೇ ಇರಲಿದೆ,” ಎಂದು ಕೊಹ್ಲಿ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಇಲ್ಲಿ ಮನೆ ಹೊರಗೆ ಅಂಟಿಸಿದ್ದಾರೆ ರಹಸ್ಯಮಯ ‘ಬ್ಲೂ ಸ್ಟಿಕ್ಕರ್’

ಮತ್ತೊಂದು ಟ್ವೀಟ್‌ನಲ್ಲಿ, “ಇದು ನನ್ನ ಹೃದಯವನ್ನು ಗಾಯಗೊಳಿಸಿದೆ ಆದರೆ ಯಾವಾಗಲೂ ಮಾಡುವಂತೆ ನೀವು ನಿಮಗಾಗಿ ಹಾಗೂ ನಿಮ್ಮ ಕುಟುಂಬಕ್ಕಾಗಿ ಉತ್ತಮ ನಿರ್ಧಾರ ತೆಗೆದುಕೊಂಡಿದ್ದೀರಿ. ಐ ಲವ್‌ ಯೂ,” ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಎಬಿಡಿ, “ಲವ್‌ ಟೂ ಮೈ ಬ್ರದರ್‌ ,” ಎಂದಿದ್ದಾರೆ. ಆಧುನಿಕ ಕ್ರಿಕೆಟ್‌ನ ಇಬ್ಬರು ಶ್ರೇಷ್ಠ ಆಟಗಾರರ ನಡುವಿನ ಈ ಸಂವಹನವು ಅಭಿಮಾನಿಗಳ ಹೃದಯ ಗೆದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...