
ಸಾಮಾಜಿಕ ಜಾಲತಾಣದಲ್ಲಿ ಭಾವಪೂರ್ಣ ಹೇಳಿಕೆಯೊಂದಿಗೆ ಅಭಿಮಾನಿಗಳ ಮೆಚ್ಚಿನ ಎಬಿಡಿ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ಮೆಚ್ಚಿನ ಆಟಗಾರನ ನಿವೃತ್ತಿಗೆ ಅಭಿಮಾನಿಗಳು ಹಾಗೂ ಸಹ ಆಟಗಾರರಿಂದ ಸಾಮಾಜಿಕ ಜಾಲತಾಣದಲ್ಲಿ ಭಾವಪೂರ್ಣವಾದ ಬೀಳ್ಕೊಡುಗೆಯ ಸಂದೇಶಗಳು ಹರಿದಾಡುತ್ತಿವೆ.
ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಸಹ ತಮ್ಮ ತಂಡದ ನಂ.1 ಆಟಗಾರನ ವಿದಾಯಕ್ಕೆ ನೋಟ್ ಒಂದನ್ನು ಟ್ವೀಟ್ ಮಾಡಿದ್ದಾರೆ.
“ನಮ್ಮ ಕಾಲದ ಶ್ರೇಷ್ಠ ಆಟಗಾರ ಹಾಗೂ ನಾನು ಭೇಟಿ ಮಾಡಿದ ಅತ್ಯಂತ ಸ್ಪೂರ್ತಿಯುತ ವ್ಯಕ್ತಿಗೆ, ನೀವು ಏನು ಮಾಡಿದ್ದೀರಿ ಹಾಗೂ ಆರ್‌ಸಿಬಿ ತಂಡಕ್ಕೆ ಏನೆಲ್ಲಾ ಕೊಟ್ಟಿದ್ದೀರಿ ಎಂಬುದಕ್ಕೆ ಹೆಮ್ಮೆ ಪಡಬಹುದು. ನಮ್ಮ ಬಾಂಧವ್ಯ ಆಟವನ್ನೂ ಮೀರಿದ್ದು ಹಾಗೂ ಅದು ಯಾವಾಗಲೂ ಹಾಗೇ ಇರಲಿದೆ,” ಎಂದು ಕೊಹ್ಲಿ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಇಲ್ಲಿ ಮನೆ ಹೊರಗೆ ಅಂಟಿಸಿದ್ದಾರೆ ರಹಸ್ಯಮಯ ‘ಬ್ಲೂ ಸ್ಟಿಕ್ಕರ್’
ಮತ್ತೊಂದು ಟ್ವೀಟ್‌ನಲ್ಲಿ, “ಇದು ನನ್ನ ಹೃದಯವನ್ನು ಗಾಯಗೊಳಿಸಿದೆ ಆದರೆ ಯಾವಾಗಲೂ ಮಾಡುವಂತೆ ನೀವು ನಿಮಗಾಗಿ ಹಾಗೂ ನಿಮ್ಮ ಕುಟುಂಬಕ್ಕಾಗಿ ಉತ್ತಮ ನಿರ್ಧಾರ ತೆಗೆದುಕೊಂಡಿದ್ದೀರಿ. ಐ ಲವ್ ಯೂ,” ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಎಬಿಡಿ, “ಲವ್ ಟೂ ಮೈ ಬ್ರದರ್ ,” ಎಂದಿದ್ದಾರೆ. ಆಧುನಿಕ ಕ್ರಿಕೆಟ್‌ನ ಇಬ್ಬರು ಶ್ರೇಷ್ಠ ಆಟಗಾರರ ನಡುವಿನ ಈ ಸಂವಹನವು ಅಭಿಮಾನಿಗಳ ಹೃದಯ ಗೆದ್ದಿದೆ.