
ಟ್ವಿಟರ್ ಬಳಕೆದಾರರಾದ ಮೀರಾ ಸಂಘಮಿತ್ರಾ ಎಂಬವರು ಈ ಬ್ಯಾನರ್ನ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಹೈದಬಾದ್ನ ಇಂದಿರಾ ಪಾರ್ಕ್ ಎಂಜಿಎಂಟಿಯಲ್ಲಿ ನೈತಿಕ ಪೊಲೀಸ್ಗಿರಿ..! ಸಾರ್ವಜನಿಕ ಪಾರ್ಕ್ ಎಲ್ಲಾ ಮಾದರಿಯ ಜನರಿಗೆ ಎಂದು ಮೀಸಲಾದ ಪ್ರದೇಶವಾಗಿದೆ. ಇಲ್ಲಿ ಲಿಂಗ ಅಥವಾ ಇನ್ಯಾವುದೇ ರೀತಿಯ ತಾರತಮ್ಯ ಸಲ್ಲದು. ಮದುವೆ ಅನ್ನೋದು ಪಾರ್ಕ್ ಪ್ರವೇಶಕ್ಕೆ ಮಾನದಂಡವನ್ನಾಗಿಸೋದು ಎಷ್ಟರ ಮಟ್ಟಿಗೆ ಸರಿ..? ಎಂದು ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ ಇದೊಂದು ಜನ ವಿರೋಧಿ ಕ್ರಮವಾಗಿದೆ. ಇಂದಿರಾ ಪಾರ್ಕ್ಗೆ ಬರುವ ಜೋಡಿಗಳು ಮಧ್ಯಮ ವರ್ಗ ಹಾಗೂ ಕಡಿಮೆ ಆದಾಯ ಹೊಂದಿದವರಾಗಿದ್ದಾರೆ. ಇವರಿಗೆ ಹೈ ಫೈ ಪಬ್ ಇಲ್ಲವೇ ದುಬಾರಿ ಸ್ಥಳಗಳಿಗೆ ತೆರಳಲು ಸಾಧ್ಯವಿಲ್ಲ. ಅವರೂ ಸಹ ಈ ಪಾರ್ಕ್ ಪ್ರವೇಶಿಸುವ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ. ಹೀಗಾಗಿ ಇಂತಹ ಹಾಸ್ಯಾಸ್ಪದ ನಿರ್ಬಂಧಗಳನ್ನು ಮೊದಲು ತೆಗೆದು ಹಾಕಿ ಎಂದು ಮೀರಾ ಟ್ವಿಟರ್ನಲ್ಲಿ ಆಗ್ರಹಿಸಿದ್ದಾರೆ.
ವಿಚಿತ್ರ ನಿಯಮಾವಳಿಯನ್ನು ಜಾರಿಗೆ ತಂದ ಪಾರ್ಕ್ನ ನಿರ್ವಹಣಾ ಮಂಡಳಿ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕ ಸ್ಥಳಕ್ಕೆ ತೆರಳಲು ಮದುವೆ ಪ್ರಮಾಣ ಪತ್ರ ಬೇಕೇ..? ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ತೆರಳುವಾಗ ಫೋಟೋ ಐಡಿ ಬದಲು ಮದುವೆ ಪ್ರಮಾಣ ಪತ್ರ ಹಿಡಿದುಕೊಂಡು ತಿರುಗುವ ಕಾಲ ಸದ್ಯದಲ್ಲೇ ಬರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಅನೇಕರು ಮದುವೆ ಆಯ್ತು ಜಾತಿ ಮಾನದಂಡವನ್ನೂ ವಿಧಿಸಿಬಿಡಿ ಎಂದು ವ್ಯಂಗ್ಯವಾಡಿದ್ದಾರೆ.