alex Certify DL ಪಡೆದ ಭಾರತದ ಮೊದಲ ಕುಬ್ಜ ಎಂಬ ಹೆಗ್ಗಳಿಕೆಗೆ ಪಾತ್ರನಾದ ಹೈದರಾಬಾದ್ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

DL ಪಡೆದ ಭಾರತದ ಮೊದಲ ಕುಬ್ಜ ಎಂಬ ಹೆಗ್ಗಳಿಕೆಗೆ ಪಾತ್ರನಾದ ಹೈದರಾಬಾದ್ ವ್ಯಕ್ತಿ

ಹೈದರಾಬಾದ್: ಇಲ್ಲಿನ ಗಟ್ಟಿಪಲ್ಲಿ ಶಿವಪಾಲ್ ಎಂಬುವವರು ವಾಹನ ಚಾಲನಾ ಪರವಾನಗಿ ಪಡೆದ ದೇಶದ ಮೊದಲ ಕುಬ್ಜ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸುಮಾರು ಮೂರು ಅಡಿ ಎತ್ತರದ 42 ವರ್ಷದ ಗಟ್ಟಿಪಲ್ಲಿ ಶಿವಪಾಲ್ ಅವರು ತಮ್ಮೆಲ್ಲಾ ವಿಕಲಾಂಗತೆಗಳನ್ನು ಸೋಲಿಸಿದ್ದಾರೆ. ಸಾಧಿಸಲು ವಯಸ್ಸು, ಎತ್ತರದ ಅಗತ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇವರು ಕರೀಂನಗರ ಜಿಲ್ಲೆಯಲ್ಲಿ ವಿಶಿಷ್ಟಚೇತನರಲ್ಲಿ ಪದವಿ ಪೂರ್ಣಗೊಳಿಸಿದ ಮೊದಲಿಗರಾಗಿದ್ದಾರೆ. ಶಿವಪಾಲ್ 2004 ರಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ.

ಮುಂದಿನ ವರ್ಷದಿಂದ ದೈಹಿಕ ವಿಕಲಚೇತನರಿಗಾಗಿ ಡ್ರೈವಿಂಗ್ ಶಾಲೆಯನ್ನು ಪ್ರಾರಂಭಿಸಲು ಶಿವಪಾಲ್ ನಿರ್ಧರಿಸಿದ್ದಾರೆ. ಕುಳ್ಳಗೆ ಇರೋದ್ರಿಂದ ಜನರು ಇವರನ್ನು ಚುಡಾಯಿಸುತ್ತಿದ್ದರಂತೆ. ಯಾವುದಕ್ಕೂ ಧೃತಿಗೆಡದ ಇವರು, ಇಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿದಂತೆ ಇತರ ಅನೇಕ ಕಡೆಗಳಿಗೆ ನಾಮನಿರ್ದೇಶನಗೊಂಡಿರುವುದಾಗಿ ತಿಳಿಸಿದ್ದಾರೆ.

ಕೋಪ ಕಂಟ್ರೋಲ್ ಮಾಡುವುದು ಹೇಗೆ ಗೊತ್ತಾ…..? ಇಲ್ಲಿವೆ ಟಿಪ್ಸ್

ಶಿವಪಾಲ್ ಪ್ರಸ್ತುತ ಹೈದರಾಬಾದ್ ನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲಿಗೆ ಇವರು ಸಿನಿಮಾದಲ್ಲಿ ಬಣ್ಣಹಚ್ಚಿದ್ದರು. ಆದರೆ, ಇಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಿಲ್ಲ.

ಶಿವಪಾಲ್ ಗೆ ಯಾರೂ ಕೂಡ ಕೆಲಸ ನೀಡುತ್ತಿರಲಿಲ್ಲವಂತೆ. ಸ್ನೇಹಿತರೊಬ್ಬರ ಮೂಲಕ ಖಾಸಗಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಈಗ ಕಳೆದ 20 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಹೊರಗಡೆ ಪ್ರಯಾಣಿಸುವ ಕ್ಯಾಬ್ ಬುಕ್ ಮಾಡಿದ್ರೆ, ಚಾಲಕರು ರೈಡ್ ಅನ್ನು ರದ್ದುಗೊಳಿಸುತ್ತಿದ್ದರಂತೆ. ತಮ್ಮ ಹೆಂಡತಿಯೊಂದಿಗೆ ಹೊರಗೆ ಹೋದಾಗ ಜನರು ತಮಾಷೆ ಮಾಡುತ್ತಿದ್ದರಂತೆ. ಇದರಿಂದ ಬೇಸತ್ತ ಶಿವಪಾಲ್ ಸ್ವತಃ ಡ್ರೈವಿಂಗ್ ಕಲಿಯಲು ಮುಂದಾಗಿದ್ದಾರೆ.

ರೈತರು, ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಉಚಿತ ಚಿಕಿತ್ಸೆಯ ‘ಯಶಸ್ವಿನಿ’ ಯೋಜನೆ ಮರು ಜಾರಿ

ಡ್ರೈವಿಂಗ್ ಕಲಿಯಲು ಉತ್ಸುಕನಾಗಿದ್ದ ಶಿವಪಾಲ್ ಇಂಟರ್‌ನೆಟ್‌ನಲ್ಲಿ ಹುಡುಕಾಟ ನಡೆಸಿದ್ದಾರೆ.  ಯುಎಸ್‌ನಲ್ಲಿ ವ್ಯಕ್ತಿಯೊಬ್ಬರು ಅಪ್‌ಲೋಡ್ ಮಾಡಿದ ವಿಡಿಯೋವನ್ನು ನೋಡಿದ ಅವರಿಗೆ ತಾನು ಕೂಡ ಏನಾದ್ರೂ ಮಾಡಬೇಕು ಎಂಬ ತುಡಿತ ಉಂಟಾಗಿದೆ. ವಿಡಿಯೋದಲ್ಲಿ ವಾಹನದ ಆಸನ ಮತ್ತು ಇತರ ಸಲಕರಣೆಗಳನ್ನು ತನ್ನ ಎತ್ತರಕ್ಕೆ ಎತ್ತಲು ಕಾರಿನಲ್ಲಿ ಬೇಕಾದ ಮಾರ್ಪಾಡುಗಳನ್ನು ಮಾಡುವ ಬಗೆಗೆ ಅದರಲ್ಲಿ ವಿವರಿಸಲಾಗಿತ್ತು.

ಕಾರನ್ನು ತನಗೆ ಬೇಕಾದ ರೀತಿಯಲ್ಲಿ ಮಾರ್ಪಡು ಮಾಡಿದ ನಂತರ, ಶಿವಪಾಲ್ ತನ್ನ ಸ್ನೇಹಿತನಿಂದ ಕಾರ್ ಡ್ರೈವಿಂಗ್ ಕಲಿತಿದ್ದಾರೆ. ಆದರೆ, ಅವರ ಹೋರಾಟ ಇಲ್ಲಿಗೆ ಮುಗಿಯಲಿಲ್ಲ. ಸಾರಿಗೆ ಇಲಾಖೆಯು, ಎತ್ತರಕ್ಕೆ ಕೆಲವು ಮಾರ್ಗಸೂಚಿಗಳನ್ನು ಹೊಂದಿದ್ದರಿಂದ ಪರವಾನಗಿ ಪಡೆಯುವುದು ಮತ್ತೊಂದು ಸವಾಲಾಗಿ ಪರಿಣಮಿಸಿದೆ.

ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮೂರು ತಿಂಗಳ ಕಾಲ ಕಲಿಕಾ ಪರವಾನಿಗೆ ಪಡೆದು, ಅಧಿಕಾರಿಯೊಬ್ಬರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸೂಕ್ತ ಚಾಲನಾ ಪರೀಕ್ಷೆ ನಡೆಸಿ ಡ್ರೈವಿಂಗ್ ಲೈಸೆನ್ಸ್ ಪಡೆದಿರುವುದಾಗಿ ಶಿವಪಾಲ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...