alex Certify ವ್ಯಕ್ತಿಯೊಬ್ಬನ ಮೂತ್ರಪಿಂಡದಿಂದ ದಾಖಲೆಯ 156 ಕಲ್ಲುಗಳನ್ನು ಹೊರತೆಗೆದ ವೈದ್ಯರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿಯೊಬ್ಬನ ಮೂತ್ರಪಿಂಡದಿಂದ ದಾಖಲೆಯ 156 ಕಲ್ಲುಗಳನ್ನು ಹೊರತೆಗೆದ ವೈದ್ಯರು..!

ಹೈದರಾಬಾದ್: ರೋಗಿಯೊಬ್ಬನ ಮೂತ್ರಪಿಂಡದಿಂದ ಬರೋಬ್ಬರಿ 156 ಕಲ್ಲುಗಳನ್ನು ಹೈದರಾಬಾದ್‌ನ ಪ್ರಮುಖ ಆಸ್ಪತ್ರೆಯ ವೈದ್ಯರು ತೆಗೆದುಹಾಕಿದ್ದಾರೆ. ಇದು ದೇಶದಲ್ಲೇ ಒಬ್ಬ ರೋಗಿಯಿಂದ ಇದುವರೆಗೆ ತೆಗೆದ ಅತಿ ಹೆಚ್ಚು ಮೂತ್ರಪಿಂಡದ ಕಲ್ಲುಗಳು ಎನ್ನಲಾಗಿದೆ.

50 ವರ್ಷದ ರೋಗಿಯ ಕೀಹೋಲ್ ತೆರೆಯುವ ಮೂಲಕ ದಾಖಲೆಯ 156 ಮೂತ್ರಪಿಂಡದ ಕಲ್ಲುಗಳನ್ನು ವೈದ್ಯರು ತೆಗೆದುಹಾಕಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸುವ ಬದಲು ಲ್ಯಾಪರೊಸ್ಕೋಪಿ ಮತ್ತು ಎಂಡೋಸ್ಕೋಪಿಯನ್ನು ಬಳಸಿಕೊಂಡು ಒಬ್ಬ ರೋಗಿಯಿಂದ ಅತಿ ಹೆಚ್ಚು ಕಲ್ಲುಗಳನ್ನು ತೆಗೆದುಹಾಕಲಾಗಿದೆ.

ಮೂರು ಗಂಟೆಗಳ ಕಾಲ ನಡೆದ ಕಾರ್ಯವಿಧಾನದ ನಂತರ ಕಲ್ಲುಗಳನ್ನು ಸಂಪೂರ್ಣವಾಗಿ ಹೊರತೆಗೆಯಲಾಗಿದೆ. ರೋಗಿಯು ಈಗ ಆರೋಗ್ಯವಾಗಿದ್ದಾರೆ ಮತ್ತು ಅವರ ಎಂದಿನ ದಿನಚರಿಗೆ ಮರಳಿದ್ದಾರೆ ಎಂದು ಪ್ರೀತಿ ಮೂತ್ರಶಾಸ್ತ್ರ ಮತ್ತು ಕಿಡ್ನಿ ವಿಭಾಗದ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಹುಬ್ಬಳ್ಳಿ ಮೂಲದ ವೃತ್ತಿಯಲ್ಲಿ ಶಾಲಾ ಶಿಕ್ಷಕರಾಗಿರುವ ಬಸವರಾಜ ಮಡಿವಾಳರ್ ಎಂಬುವವರ ಹೊಟ್ಟೆಯ ಬಳಿ ಹಠಾತ್ ನೋವು ಕಾಣಿಸಿಕೊಂಡಿದೆ. ಈ ವೇಳೆ ಅವರು ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ. ಸ್ಕ್ರೀನಿಂಗ್ ವೇಳೆ ಅನೇಕ ಮೂತ್ರಪಿಂಡದ ಕಲ್ಲುಗಳು ಇರುವುದು ಗೋಚರಿಸಿದೆ. ಸಾಮಾನ್ಯವಾಗಿ ಮೂತ್ರನಾಳದಲ್ಲಿ ಇರುವ ಬದಲು ಕಿಡ್ನಿ ಅವರ ಹೊಟ್ಟೆಯ ಸಮೀಪದಲ್ಲಿದೆ. ಅಸಹಜ ಸ್ಥಳದಲ್ಲಿ ಮೂತ್ರಪಿಂಡ ಇರುವುದು ಸಮಸ್ಯೆಗೆ ಕಾರಣವಲ್ಲದಿದ್ರೂ, ಅಸಹಜವಾಗಿ ಇರುವ ಮೂತ್ರಪಿಂಡದಿಂದ ಕಲ್ಲುಗಳನ್ನು ತೆಗೆದುಹಾಕುವುದು ಸವಾಲಿನ ಕೆಲಸವಾಗಿತ್ತು ಎಂದು ಆಸ್ಪತ್ರೆ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...