alex Certify 19 ವರ್ಷಗಳ ಹಿಂದೆ ತನ್ನ ಸಂಬಳ ಎಷ್ಟಿತ್ತು ಎಂಬುದನ್ನು ಬಹಿರಂಗಪಡಿಸಿದ ವೈದ್ಯ; ನೆಟ್ಟಿಗರಿಗೆ ಅಚ್ಚರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

19 ವರ್ಷಗಳ ಹಿಂದೆ ತನ್ನ ಸಂಬಳ ಎಷ್ಟಿತ್ತು ಎಂಬುದನ್ನು ಬಹಿರಂಗಪಡಿಸಿದ ವೈದ್ಯ; ನೆಟ್ಟಿಗರಿಗೆ ಅಚ್ಚರಿ

ವೈದ್ಯೋ ನಾರಾಯಣ ಹರಿ ಅನ್ನೋ ಮಾತಿದೆ. ವೈದ್ಯರು ತಮ್ಮಿಂದಾದಷ್ಟು ಸೇವೆಯನ್ನು ಮಾಡಿ ಹಲವಾರು ಜೀವಗಳನ್ನು ಉಳಿಸುತ್ತಾರೆ. ಆದರೆ, ಉತ್ತಮ ಹಣದ ಆದಾಯವನ್ನು ನಿರೀಕ್ಷಿಸದೆ ಈ ವೃತ್ತಿಯನ್ನು ಉದಾತ್ತ ಕಾರಣವಾಗಿ ಪರಿಗಣಿಸುವುದು ಸುಲಭವೇ? ನಾಲ್ಕು ವರ್ಷಗಳಿಂದ ಕೆಲಸ ಮಾಡಿದರೂ ತಿಂಗಳಿಗೆ ಕೇವಲ 9 ಸಾವಿರ ರೂಪಾಯಿ ಗಳಿಸುತ್ತಿದ್ದ ಸಮಯವನ್ನು ನೆನಪಿಸಿಕೊಂಡ ಹೈದರಾಬಾದ್ ಮೂಲದ ವೈದ್ಯರ ಟ್ವೀಟ್ ಇದೀಗ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.

ಖಾಸಗಿ ಆಸ್ಪತ್ರೆಯೊಂದರಲ್ಲಿ ನರವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ, ಎಂಬಿಬಿಎಸ್, ಎಂಡಿ ಮತ್ತು ಡಿಎಂ ನ್ಯೂರಾಲಜಿಯಲ್ಲಿ ಪದವಿ ಹೊಂದಿರುವ ಡಾ. ಸುಧೀರ್ ಕುಮಾರ್ ಅವರು ತಮ್ಮ ಟ್ವೀಟ್‌ನಲ್ಲಿ ವೈದ್ಯರ ಜೀವನವು ಮಿತವ್ಯಯವಾಗಿರುತ್ತದೆ ಎಂದು ಹೇಳಿದ್ದಾರೆ.

ಟ್ವಿಟ್ಟರ್ ಬಳಕೆದಾರರೊಬ್ಬರು ಯುವ ವೈದ್ಯರೊಬ್ಬರು ವೃತ್ತಿಯ ಸಾಮಾಜಿಕ ಸೇವೆಯ ಕುಶಲತೆಯ ಸಂದಿಗ್ಧತೆಯ ಬಗ್ಗೆ ಹಂಚಿಕೊಂಡರು. ತನ್ನನ್ನು ತಾನೇ ಪೂರೈಸಿಕೊಳ್ಳಲು ಹೆಣಗಾಡುತ್ತಿರುವಾಗ ಸಮಾಜ ಸೇವೆ ಮಾಡುವುದು ಅಷ್ಟು ಸುಲಭವಲ್ಲ. ನಿಮ್ಮ ತಲೆಮಾರಿನವರಿಗೆ ಹಾಗೆ ಹೇಳುವುದು ಸುಲಭ ಎಂಬ ಮಾತಿಗೆ ಡಾ. ಸುಧೀರ್ ಕುಮಾರ್ ಈ ಉತ್ತರ ನೀಡಿದ್ದಾರೆ.

ನಾನು ಕೂಡ 20 ವರ್ಷಗಳ ಹಿಂದೆ ಯುವ ಅಭ್ಯಾಸಿಯಾಗಿದ್ದೆ. 2004ರ ನಂತರ ನಾಲ್ಕು ವರ್ಷಗಳು ನನ್ನ ಸಂಬಳ ತಿಂಗಳಿಗೆ ಕೇವಲ ರೂ.9000 ಮಾತ್ರವಾಗಿತ್ತು. ವೆಲ್ಲೂರಿನಲ್ಲಿ, ನನ್ನ ಪ್ರಾಧ್ಯಾಪಕರನ್ನು ಗಮನಿಸುವುದರ ಮೂಲಕ, ವೈದ್ಯರ ಜೀವನವು ಮಿತವ್ಯಯವಾಗಿರಬೇಕು ಮತ್ತು ಕನಿಷ್ಠವಾಗಿ ಬದುಕಲು ಕಲಿಯಬೇಕು ಎಂದು ನಾನು ಅರಿತುಕೊಂಡೆ ಎಂದು ಹೇಳಿದ್ದಾರೆ.

ವೈದ್ಯರು ತಮ್ಮ ಸಂಬಳವನ್ನು ಬಹಿರಂಗಪಡಿಸಿದ ಬಳಿಕ ಸಾಮಾಜಿಕ ಮಾಧ್ಯಮ ಬಳಕೆದಾರರು ಸಾಕಷ್ಟು ದಿಗ್ಭ್ರಮೆಗೊಂಡಿದ್ದಾರೆ. ಅದೇ ವೃತ್ತಿಯ ಅನೇಕರು ತಮ್ಮ ಅನುಭವವನ್ನು ಹಂಚಿಕೊಂಡರು. ಮೂಲ ಟ್ವೀಟ್‌ಗೆ ಪ್ರತ್ಯುತ್ತರವಾಗಿ ಡಾ.ಸುಧೀರ್ ಕುಮಾರ್ ಅವರು ವೆಲ್ಲೂರಿನ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದು ತೃಪ್ತಿ ತಂದಿದೆ. ಆದರೆ, ತನ್ನ ಸಂಬಳದ ಬಗ್ಗೆ ತಾಯಿಗೆ ಮಾತ್ರ ಸಮಾಧಾನವಿರಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...