ಮದುವೆ ಆಗಲು ನಿರಾಕರಿಸಿದಳು ಎಂಬ ಕಾರಣಕ್ಕೆ ಕೋಪಗೊಂಡ ಭಗ್ನಪ್ರೇಮಿ ತನ್ನ ಪ್ರಿಯತಮೆಗೆ 18 ಬಾರಿ ಇರಿದ ಶಾಕಿಂಗ್ ಘಟನೆಯು ಹೈದರಾಬಾದ್ನಲ್ಲಿ ನಡೆದಿದೆ.
ಯುವತಿಯನ್ನು ಶಿರಿಶಾ ಎಂದು ಗುರುತಿಸಲಾಗಿದ್ದು ಈಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಿಶಾ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಬಸವರಾಜ್ ಎಂದು ಗುರುತಿಸಲಾಗಿದೆ. ಹೈದರಾಬಾದ್ನ ಎಲ್ಬಿ ನಗರದ ರೂಮೊಂದರಲ್ಲಿ ಘಟನೆ ನಡೆದಿದೆ.
ಶಿರಿಶಾ ಬೇರೆ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಬಸವರಾಜ್ ಖಿನ್ನತೆಗೆ ಒಳಗಾಗಿದ್ದ. ಶಿರಿಶಾ ಎರಡು ತಿಂಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದಳು.
ಆರೋಪಿ ಹಾಗೂ ಯುವತಿ ಇಬ್ಬರೂ ವಿಕಾರಬಾದ್ ಜಿಲ್ಲೆಯ ದೌಲತಾಬಾದ್ ನಿವಾಸಿಗಳಾಗಿದ್ದಾರೆ. ಇವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ.