ದಾಂಪತ್ಯದಲ್ಲಿ ಪ್ರೀತಿ ಬಹಳ ಮುಖ್ಯ. ಪತಿ-ಪತ್ನಿ ಮಧ್ಯೆ ಪ್ರೀತಿಯ ವಿನಿಮಯ, ಚುಂಬನ ಅಗತ್ಯ. ಆದ್ರೆ ಪ್ರೀತಿಯಿಲ್ಲದ ಬದುಕು ನೀರಸವಾಗುತ್ತದೆ. ಯುನೈಟೆಡ್ ಕಿಂಗ್ಡಮ್ ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿ ತನ್ನ ಪತ್ನಿ ವಿರುದ್ಧ ಅಸಮಾಧಾನಗೊಂಡಿದ್ದಾನೆ. ಪತ್ನಿ ಪ್ರೀತಿಯನ್ನು ಕಡಿಮೆ ಮಾಡುತ್ತಿದ್ದಾಳೆಂದು ಆತ ಆರೋಪ ಮಾಡಿದ್ದಾನೆ. ವರ್ಷಕ್ಕೆ 3 ಬಾರಿ ಮಾತ್ರ ಪತ್ನಿ ಸಂಭೋಗ ನಡೆಸಲು ಅನುಮತಿ ನೀಡ್ತಿದ್ದಾಳಂತೆ.
ತನ್ನ ಹುಟ್ಟು ಹಬ್ಬದಲ್ಲಿ, ಮದುವೆ ವಾರ್ಷಿಕೋತ್ಸವ ಸೇರಿದಂತೆ ಕೆಲವೇ ವಿಶೇಷ ಸಂದರ್ಭಗಳಲ್ಲಿ ಸಂಭೋಗ ನಡೆಸಲು ಪತ್ನಿ ಅನುಮತಿ ನೀಡಿದ್ದಾಳಂತೆ. ಪತ್ನಿ ಏಕೆ ತನ್ನ ಜೊತೆ ಹೀಗೆ ವರ್ತಿಸುತ್ತಿದ್ದಾಳೆಂಬುದು ಆತನಿಗೆ ಅರ್ಥವಾಗ್ತಿಲ್ಲವಂತೆ.
ಈ ವರ್ಷ ಕೇವಲ ಒಂದು ಬಾರಿ ಮಾತ್ರ ಆತ ಪತ್ನಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಾನಂತೆ. ಇನ್ನು ಎರಡು ಬಾರಿ ಮಾತ್ರ ನನಗೆ ಅವಕಾಶವಿದೆ ಎನ್ನುತ್ತಾನೆ ಆತ.
ಪತ್ನಿ ವಿರುದ್ಧ ಆರೋಪಿಸುತ್ತಿರುವ ವ್ಯಕ್ತಿ ವಯಸ್ಸು 37 ವರ್ಷ. ಪತ್ನಿ ವಯಸ್ಸು 34 ವರ್ಷ. ಮದುವೆಯಾಗಿ 7 ವರ್ಷಗಳಾಗಿವೆ. ಅವರಿಗೆ 6 ವರ್ಷದ ಮಗಳಿದ್ದಾಳೆ. ಆದರೆ ಅವರ ನಡುವೆ ಯಾವುದೂ ಸರಿಯಿಲ್ಲ. ಸೆಕ್ಸ್ ಬಗ್ಗೆ ಮಾತನಾಡಿದ್ರೆ ಪತ್ನಿ ಮುನಿಸಿಕೊಳ್ತಾಳಂತೆ. ಇದು ನನ್ನ ದೊಡ್ಡ ಚಿಂತೆಗೆ ಕಾರಣವಾಗಿದೆ ಎಂದು ಎಲ್ಲರ ಮುಂದೆ ಪತಿ ಅಳಲು ತೋಡಿಕೊಂಡಿದ್ದಾನೆ. ಮನೆಯಲ್ಲಿ ಇಬ್ಬರ ಮಧ್ಯೆ ಮಾತು ಕೂಡ ತುಂಬಾ ಕಡಿಮೆ. ವಿಚ್ಛೇದನ ನೀಡಲು ಮನಸ್ಸಿಲ್ಲ. ಮಗಳ ಭವಿಷ್ಯ ಮುಖ್ಯವೆಂದು ಆತ ಹೇಳಿದ್ದಾನೆ.