ಸಂತೋಷವೇ ಜೀವನದ ಅತ್ಯುತ್ತಮ ಮೇಕ್ಅಪ್ ಎಂದು ಹೇಳುತ್ತದೆಯಾದರೂ ಕೆಲವರಿಗೆ ಮೇಕಪ್ಪೇ ಜೀವನವಾಗಿರುತ್ತದೆ. ನೈಜ ಸೌಂದರ್ಯವನ್ನು ಮರೆಮಾಚಿ ಮೇಕಪ್ ಮಾಡಿಕೊಳ್ಳುವುದು ಎಂದರೆ ಕೆಲವರಿಗೆ ಅದೇನೋ ವ್ಯಾಮೋಹ. ಆದರೆ ಇಲ್ಲಿ ಹೇಳಹೊರಟಿರುವುದು ಮೇಕಪ್ ಬಗ್ಗೆಯಲ್ಲ, ಬದಲಿಗೆ ವರ್ಷದ ಬೆಸ್ಟ್ ಪತಿರಾಯ ಎಂದು ನೆಟ್ಟಿಗರು ಬಿರುದು ಕೊಟ್ಟಿರುವ ಪತಿಯೊಬ್ಬನ ಬಗ್ಗೆ!
ಹೌದು. ಈ ವೈರಲ್ ವಿಡಿಯೋ ನೋಡಿದರೆ ಸಾಕು, ಬರೆಯುವ ಅವಶ್ಯಕತೆ ಇಲ್ಲ…… ಎಲ್ಲವನ್ನೂ ಇದೇ ಹೇಳಿಬಿಡುತ್ತದೆ. ಸ್ಟೇಡಿಯಂವೊಂದರಲ್ಲಿ ಕ್ರಿಕೆಟ್ ವೀಕ್ಷಣೆ ಸಂದರ್ಭದಲ್ಲಿ ನಡೆದ ಹಾಸ್ಯಭರಿತ ಘಟನೆ ಇದಾಗಿದ್ದು, ಈ ಪತಿಯನ್ನು ವರ್ಷದ ಅತ್ಯುತ್ತಮ ಪತಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಈ ವೈರಲ್ ವಿಡಿಯೋದಲ್ಲಿ ಕ್ರಿಕೆಟ್ ವೀಕ್ಷಣೆ ಮಾಡುತ್ತಿದ್ದ ಪತಿಯೊಬ್ಬ ತನ್ನ ಪಕ್ಕದಲ್ಲಿ ಕುಳಿತಿದ್ದ ಪತ್ನಿಗೆ ಮೇಕಪ್ ಮಾಡಿಕೊಳ್ಳಲು ಮೊಬೈಲ್ ಹಿಡಿದಿರುವುದನ್ನು ಕಾಣಬಹುದಾಗಿದೆ. ಪತ್ನಿಗೆ ಮೇಕಪ್ ಮಾಡಿಕೊಳ್ಳಲು ಕನ್ನಡಿ ಇಲ್ಲದ ಕಾರಣ, ಪತಿರಾಯ ತನ್ನ ಮೊಬೈಲ್ ಹಿಡಿದು ಆಕೆಗೆ ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಪತಿಗೆ ಇದು ಇಷ್ಟವಿಲ್ಲ ಎಂಬುದು ಮುಖದಲ್ಲಿಯೇ ಕಾಣುತ್ತಿದ್ದರೂ, ಆತ ಅಸಹಾಕಯನಾಗಿದ್ದಾನೆ ಎಂದು ಹಲವರು ಕಮೆಂಟ್ ಮೂಲಕ ಹೇಳುತ್ತಿದ್ದಾರೆ!