alex Certify ಪತ್ನಿ ಸ್ನಾನ ಮಾಡ್ತಿದ್ದಾಗ ಪತಿ ಮಾಡ್ತಿದ್ದ ಈ ಕೆಲಸ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಸ್ನಾನ ಮಾಡ್ತಿದ್ದಾಗ ಪತಿ ಮಾಡ್ತಿದ್ದ ಈ ಕೆಲಸ….!

ಪತಿ-ಪತ್ನಿ ಮಧ್ಯೆ ಗಲಾಟೆ ನಡೆಯೋದು ಸಾಮಾನ್ಯ. ಸಣ್ಣ ಗಲಾಟೆ, ದೊಡ್ಡದಾಗಿ ಕೆಲವರು ವಿಚ್ಛೇದನ ಪಡೆಯುತ್ತಾರೆ. ಮತ್ತೆ ಕೆಲವರು ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ತನ್ನ ಗಂಡ ಮಾಡಿದ ಕೆಲಸವೊಂದನ್ನು ಹೇಳಿಕೊಂಡಿದ್ದಾಳೆ. ಹಾಗೆ ಮುಂದೇನು ಮಾಡ್ಬೇಕೆಂದು ಸಲಹೆ ಕೇಳಿದ್ದಾಳೆ.

ಮಹಿಳೆ ಇಬ್ಬರು ಮಕ್ಕಳ ತಾಯಿ. ಆಕೆ ಪತಿ, ಮನೆಯಲ್ಲಿ ಕೆಲಸ ಮಾಡ್ತಿದ್ದಾರಂತೆ. ಒಂದು ದಿನ ಮಹಿಳೆ ಮಕ್ಕಳನ್ನು ಪತಿ ಜೊತೆ ಬಿಟ್ಟು ಮಹಡಿ ಮೇಲಿದ್ದ ಬಾತ್ ರೂಮಿಗೆ ಸ್ನಾನಕ್ಕೆ ಹೋಗಿದ್ದಳಂತೆ. ಸ್ನಾನ ಮಾಡಿದ ನಂತ್ರ ಆಕೆ ಕಣ್ಣಿಗೆ ನೀಲಿ ಬಣ್ಣದ ವಸ್ತು ಸಿಕ್ಕಿದೆ. ಅದನ್ನು ಕೈನಲ್ಲಿ ಹಿಡಿದಾಗ ಅದು ಕ್ಯಾಮರಾ ಎಂಬುದು ಗೊತ್ತಾಗಿದೆ. ಮಹಿಳೆ ದಂಗಾಗಿದ್ದಾಳೆ.

ಪತಿ ಬಳಿ ಬಂದು ವಿಚಾರಿಸಿದ್ದಾಳೆ. ಈ ಹಿಂದೆ ಯಾವುದೋ ಕಾರಣ ಹೇಳಿ ಕ್ಯಾಮರಾ ತರಿಸಿದ್ದಾಗಿ ಪತಿ ಹೇಳಿದ್ದನಂತೆ. ಈಗ ಕ್ಯಾಮರಾ ತಾನೇ ಇಟ್ಟಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಆದ್ರೆ ಪತ್ನಿ ಮೇಲೆ ಕಣ್ಣಿಡಲು ಹೀಗೆ ಮಾಡಿಲ್ಲ. ಕ್ಯಾಮರಾ ಪರೀಕ್ಷೆಗೆ ಹೀಗೆ ಮಾಡಿದ್ದೆ ಎಂದಿದ್ದಾನೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಹಿಳೆ, ಮುಂದೇನು ಮಾಡಬೇಕೆಂದು ಪ್ರಶ್ನೆ ಕೇಳಿದ್ದಾಳೆ. ಪತ್ನಿಯ ಪೋರ್ನ್ ವಿಡಿಯೋವನ್ನು ಪತಿ ಪೋರ್ನ್ ಸೈಟ್ ನಲ್ಲಿ ಮಾರಾಟ ಮಾಡ್ತಿರಬಹುದು. ಹಾಗಾಗಿ ಪೊಲೀಸರಿಗೆ ದೂರು ನೀಡಿ ಎಂದು ಬಳಕೆದಾರರು ಸಲಹೆ ನೀಡ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...