alex Certify ದೂರದೂರಿಗೆ ಹೋಗಿದ್ದ ಗಂಡ, ತಡರಾತ್ರಿ ಮಲಗಿದ್ದ ಅತ್ತಿಗೆ ಬಳಿ ಬಂದ ಮೈದುನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೂರದೂರಿಗೆ ಹೋಗಿದ್ದ ಗಂಡ, ತಡರಾತ್ರಿ ಮಲಗಿದ್ದ ಅತ್ತಿಗೆ ಬಳಿ ಬಂದ ಮೈದುನ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ 28 ವರ್ಷದ ಮಹಿಳೆಗೆ ಆಕೆಯ ಮೈದುನ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಶನಿವಾರ ರಾತ್ರಿ ತನ್ನ ಪತಿ ಇಲ್ಲದಿದ್ದಾಗ ಮೈದುನ ಕಿರುಕುಳ ನೀಡಿರುವುದಾಗಿ ಮಹಿಳೆ ಆರೋಪಿಸಿ ದೂರು ನೀಡಿದ್ದಾಳೆ. ಪೊಲೀಸರ ಪ್ರಕಾರ, ದೂರುದಾರ ಮಹಿಳೆ ಸುಖಿ-ಸೆವಾನಿಯಾ ನಿವಾಸಿಯಾಗಿದ್ದು, ಶನಿವಾರ ರಾತ್ರಿ ವೃತ್ತಿಯಲ್ಲಿ ಚಾಲಕನಾಗಿರುವ ಪತಿ ಕೆಲಸದ ನಿಮಿತ್ತ ಊರ ಹೊರಗಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾಳೆ.

ಆಕೆಯ ಮೈದುನ ಪತಿಯನ್ನು ಭೇಟಿಯಾಗಲು ಅವರ ಮನೆಗೆ ಬಂದಿದ್ದ. ಚಾಲಕ ಪತಿ ಕೆಲಸದ ಬೇರೆ ಊರಿಗೆ ಹೋಗಿರುವುದಾಗಿ ಆಕೆ ಹೇಳಿದ್ದಳು. ಆಕೆಯ ಪತಿ ವಾಪಸ್ ಬರುವವರೆಗೂ ಇರಲು ಬಯಸುತ್ತೇನೆ ಎಂದು ಮೈದುನ ಹೇಳಿದ್ದಾನೆ.

ಮಹಿಳೆ ಮಲಗಿದ್ದಾಗ ಮೈದುನ ಆಕೆಯ ಕೊಠಡಿಯೊಳಗೆ ನುಗ್ಗಿದ್ದಲ್ಲದೇ ಆಕೆಯನ್ನು ಅನುಚಿತ ರೀತಿಯಲ್ಲಿ ಸ್ಪರ್ಶಿಸಿದ್ದಾನೆ. ಮಹಿಳೆ ಈ ಕೃತ್ಯದ ವಿರುದ್ಧ ಪ್ರತಿಭಟಿಸಿ ಕೂಗಾಡಿದಾಗ ಮೈದುನ ಪರಾರಿಯಾಗಿದ್ದಾನೆ.

ಇದರ ನಂತರ, ಮಹಿಳೆ ಸುಖಿ-ಸೆವಾನಿಯಾ ಪೊಲೀಸ್ ಠಾಣೆಗೆ ಆರೋಪಿಯ ವಿರುದ್ಧ ದೂರು ನೀಡಲು ಹೋದಳು. ಆಕೆಯ ದೂರಿನ ಆಧಾರದ ಮೇಲೆ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...