alex Certify ಪತ್ನಿ ಆಸೆ ಈಡೇರಿಸಿದ ಸ್ನೇಹಿತೆಯನ್ನು ಮನೆಗೆ ಕರೆ ತಂದ ಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಆಸೆ ಈಡೇರಿಸಿದ ಸ್ನೇಹಿತೆಯನ್ನು ಮನೆಗೆ ಕರೆ ತಂದ ಪತಿ…!

Husband and wife in 'Throuple' with his best mate | America: जी हां, पति की  सबसे खास दोस्‍त से बीवी को हुआ इश्‍क, Throuple बन तीनों रहने लगे संग |  Hindi News,

ಪತಿ-ಪತ್ನಿ ಸಂಬಂಧ ಏಳೇಳು ಜನ್ಮದ್ದು ಎನ್ನಲಾಗುತ್ತದೆ. ಪತಿ-ಪತ್ನಿ ಸ್ನೇಹಿತರಂತಿರಬೇಕೆಂದು ಸಲಹೆ ನೀಡಲಾಗುತ್ತದೆ. ಅಮೆರಿಕಾದ ಪತಿಯೊಬ್ಬ ತಾನು ಗಂಡ ಮಾತ್ರ ಅಲ್ಲ ಸ್ನೇಹಿತನೂ ಹೌದು ಎಂಬುದನ್ನು ಸಾಭೀತುಪಡಿಸಿದ್ದಾನೆ. ಮದುವೆ ನಂತ್ರ ಪತ್ನಿ ದ್ವಿಲಿಂಗಿ ಎಂಬುದು ಗೊತ್ತಾಗ್ತಿದ್ದಂತೆ ಪತಿ, ಪತ್ನಿಗೆ ಆಕೆಯ ಪ್ರೀತಿಯನ್ನು ಉಡುಗೊರೆಯಾಗಿ ನೀಡಿದ್ದಾನೆ. ಈಗ ಮೂವರೂ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ.

ದಂಪತಿ ಕಾಲೇಜಿನಲ್ಲಿ ಪ್ರೀತಿಗೆ ಬಿದ್ದಿದ್ದರು. ಪತಿ ಜಸ್ಟಿನ್ ವೃತ್ತಿಯಲ್ಲಿ ಹಾಸ್ಯನಟ. 2006ರಲ್ಲಿ ಕಾಮಿಡಿ ಶೋ ಒಂದರಲ್ಲಿ ಪತ್ನಿ ಕ್ಯಾಂಟಿ ರೂಪಲ್ ಭೇಟಿಯಾಗಿತ್ತಂತೆ. ಅನೇಕ ವರ್ಷ ಡೇಟಿಂಗ್ ನಲ್ಲಿದ್ದವರು ನಂತ್ರ ಮದುವೆಯಾಗಿದ್ದರು. 2013ರಲ್ಲಿ ಇಬ್ಬರೂ ಮದುವೆಯಾಗಿದ್ದರು. ಮದುವೆಯಾದ ಕೆಲ ದಿನಗಳ ನಂತ್ರ ತಾನು ದ್ವಿಲಿಂಗಿ ಎಂದು ಪತ್ನಿ ಹೇಳಿದ್ದಳಂತೆ. ಇದ್ರಿಂದ ಶಾಕ್ ಆಗಿದ್ದ ಜಸ್ಟಿನ್ ಗೆ ಪತ್ನಿ ಮತ್ತೊಂದು ಶಾಕ್ ನೀಡಿದ್ದಳಂತೆ. ತಾನು ಪ್ರೀತಿಯಲ್ಲಿ ಬಿದ್ದಿರುವ ಹುಡುಗಿ ಬೇರೆ ಯಾರೂ ಅಲ್ಲ ಜಸ್ಟಿನ್ ಸ್ನೇಹಿತೆ ಕ್ಲೇರ್ ಎಂದು.

ಈ ವಿಷ್ಯವನ್ನು ಜಸ್ಟಿನ್ ತನ್ನ ಸ್ನೇಹಿತೆ ಕ್ಲೇರ್ ಗೆ ಹೇಳಿದ್ದನಂತೆ. ಇದನ್ನು ಕೇಳಿದ ಕ್ಲೇರ್ ಕೂಡ ಅಚ್ಚರಿಗೊಂಡಿದ್ದಳಂತೆ. ಹುಡುಗ-ಹುಡುಗಿ ಇಬ್ಬರಲ್ಲೂ ಆಸಕ್ತಿ ಹೊಂದಿದ್ದ ಕ್ಲೇರ್, ಕ್ಯಾಂಟಿ ಜೊತೆ ವಾಸಿಸಲು ಒಪ್ಪಿಕೊಂಡಿದ್ದಳಂತೆ. ನಂತ್ರ ಮೂವರೂ ಒಟ್ಟಿಗೆ ವಾಸಿಸಲು ಶುರು ಮಾಡಿದ್ದಾರೆ. ಒಬ್ಬರಿಗೆ ಸಮಸ್ಯೆ ಬಂದ್ರೂ ಎಲ್ಲರೂ ಸೇರಿ ಬಗೆಹರಿಸುತ್ತೇವೆಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...