
ಥಾಯ್ಲೆಂಡ್‌ನ ದಕ್ಷಿಣ ಭಾಗದಲ್ಲಿರುವ ಚಲೆರ್ಮ್‌ಕಿಯಾಟ್ಪಟ್ಟಣ ಎಂಬ ಊರಿನಲ್ಲಿ ಪುಂಡಾನೆಯೊಂದು ಮನೆಯೊಂದರ ಅಡುಗೆ ಮನೆಗೆ ನುಗ್ಗಿದ್ದು, ಅಲ್ಲೇನಾದರೂ ತಿನ್ನಲು ಇದೆಯಾ ಎಂದು ನೋಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಗ್ರಾಮದ ನಿವಾಸಿ ರಚಾದವ್ ಪುಯೆಂಗ್‌ಪ್ರಸೊಪ್ಪೊನ್ ಆರಾಮವಾಗಿ ನಿದ್ರೆ ಮಾಡುತ್ತಿದ್ದ ವೇಳೆ ಆವರ ಮನೆಗೆ ನುಗ್ಗಿದ ಆನೆ ಮಾಡಿದ ಸದ್ದಿಗೆ ಬೆಚ್ಚಿ ಬಿದ್ದು ಅಡುಗೆ ಮನೆಗೆ ಹೋದಾಗ ಗಜರಾಜ ತನ್ನ ತಲೆಯನ್ನು ಅಡುಗೆ ಮನೆಯೊಳಗೆ ಹಾಕಿ, ಸೊಂಡಿಲಿನಿಂದ ತಿಂಡಿ ಹುಡುಕುತ್ತಿರುವುದನ್ನು ಕಂಡಿದ್ದಾರೆ.
ಸಂಜೆ ವೇಳೆ ಪ್ರಿಯಕರನ ಭೇಟಿಗೆ ಹೋದ ಹುಡುಗಿ, ಪ್ರೀತಿ ವಿಷ್ಯಕ್ಕೆ ನಡೀತಾ ಮರ್ಯಾದೆಗೇಡು ಹತ್ಯೆ…? ಕಲ್ಲಿನಿಂದ ಜಜ್ಜಿ ಪ್ರೇಮಿಗಳ ಭೀಕರ ಮರ್ಡರ್
ರಚದವನ್ ಅವರು ಗಜರಾಯನ ಈ ಚೇಷ್ಟೆಯ ವಿಡಿಯೋ ಮಾಡಿಕೊಂಡು ಶೇರ್ ಮಾಡಿದ್ದಾರೆ.