alex Certify ಮಗಳನ್ನ ಕಟ್ಟಿಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ NGO ಸದಸ್ಯರು; ಅವಮಾನ ತಾಳದೆ ನೇಣಿಗೆ ಶರಣಾಯ್ತು ಇಡೀ ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳನ್ನ ಕಟ್ಟಿಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ NGO ಸದಸ್ಯರು; ಅವಮಾನ ತಾಳದೆ ನೇಣಿಗೆ ಶರಣಾಯ್ತು ಇಡೀ ಕುಟುಂಬ

ಅವಮಾನ ತಾಳಲಾರದೆ ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯ ಬಕ್ಖಾಲಿಯ ಕುಟುಂಬದ ಮೂವರು ಸದಸ್ಯರು ನೇಣಿಗೆ ಶರಣಾಗಿದ್ದಾರೆ. ಜನವರಿ 8ರಂದು ಈ ಘಟನೆ ನಡೆದಿದ್ದು, ಗ್ರಾಮದ ಕಾಡಿನಲ್ಲಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಅಲ್ಲದೇ ಈ ಹೃದಯ ವಿದ್ರಾವಕ ಕೃತ್ಯವನ್ನ ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮ್ ಕೂಡ ಮಾಡಿದ್ದಾರೆ.

ಮೃತರನ್ನು ಅಶೋಕ್ ನಾಸ್ಕರ್, ಅವರ ಪತ್ನಿ ರೀಟಾ ಮತ್ತು ಅವರ ಮಗ ಅಭಿಷೇಕ್ ಎಂದು ಗುರುತಿಸಲಾಗಿದೆ. ಈ ವೀಡಿಯೊವನ್ನು ಅಭಿಷೇಕ್ ಅವರು ಲೈವ್-ಸ್ಟ್ರೀಮ್ ಮಾಡಿದ್ದಾರೆ. ನನ್ನ ಸಹೋದರಿ ಕೆಲಸ ಮಾಡುತ್ತಿದ್ದ ಸ್ವಸಹಾಯ ಗುಂಪಿನ ಸದಸ್ಯರೆ ನಮ್ಮ ಸಾವಿಗೆ ಕಾರಣ ಎಂದು ಲೈವ್ ನಲ್ಲಿ ಹೇಳಿದ್ದಾರೆ.

ಮೃತ ಅಭಿಷೇಕ್, ಸಹೋದರಿ ಪೂನಂ ಅವರು ಎನ್ಜಿಒ ಗೆ ಸೇರಿದ 14 ಲಕ್ಷ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸ್ವಸಹಾಯ ಗುಂಪು ಆರೋಪಿಸಿದೆ. ಎಸ್‌ಎಚ್‌ಜಿಯ ಮಹಿಳೆಯರು ಜನವರಿ 8 ರಂದು ಅಶೋಕ್ ನಾಸ್ಕರ್‌ ಮನೆಯ ಹೊರಗೆ ಜಮಾಯಿಸಿ ಅವರನ್ನು ದುಡ್ಡಿನ ವಿಷಯವಾಗಿ ಅವಮಾನಿಸಿದ್ದಾರೆ.

ಮಹಿಳೆಯರು ಮೊದಲು ಕುಟುಂಬದ ನಾಲ್ಕು ಸದಸ್ಯರನ್ನು ಅವರ ಮನೆಯಿಂದ ಹೊರಹಾಕಿ, ಮನೆಗೆ ಬೀಗ ಹಾಕಿದ್ದಾರೆ. ನಂತರ ತಮ್ಮೊಂದಿಗೆ ಪೂನಂ ಅವರನ್ನು ಕರೆದುಕೊಂಡು ಹೋಗಿದ್ದಾರೆ. ದುಡ್ಡು ಕಳೆದುಕೊಂಡ ಕೋಪದಲ್ಲಿ ಪೂನಂ ಮತ್ತು ಆಕೆಯ ಪತಿಯನ್ನು ಕಟ್ಟಿಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿ, ಅಲ್ಲಿದ್ದ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮದ ಜನರ ಮುಂದೆ ಇಷ್ಟೆಲ್ಲಾ ಅವಮಾನವಾಗಿದ್ದರಿಂದ ಅಶೋಕ್ ರೀಟಾ ಮತ್ತು ಅಭಿಷೇಕ್ ಕಾಡಿಗೆ ಹೋಗಿ ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಧ್ಯ ಪೂನಂ ಅವರನ್ನು ಪೊಲೀಸರು ರಕ್ಷಿಸಿದ್ದಾರೆ. ಇದೇ ವೇಳೆ ಐವರು ಮಹಿಳೆಯರನ್ನು ಡೈಮಂಡ್ ಹಾರ್ಬರ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...