alex Certify ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ಬೆಂಗಳೂರು ನಡುವಿನ ಈ ರೈಲುಗಳು ತಾತ್ಕಾಲಿಕ ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ಬೆಂಗಳೂರು ನಡುವಿನ ಈ ರೈಲುಗಳು ತಾತ್ಕಾಲಿಕ ರದ್ದು

ಬೆಂಗಳೂರು: ಹುಬ್ಬಳ್ಳಿ-ಬೆಂಗಳೂರು ನಡುವೆ ಸಂಚರಿಸುವ ಕೆಲ ರೈಲುಗಳನ್ನು 2 ದಿನಗಳ ಕಾಲ ರದ್ದುಗೊಳಿಸಲಾಗಿದೆ.

ನೈಋತ್ಯ ರೈಲ್ವೆ ಬೆಂಗಳೂರು ವಲಯದಲ್ಲಿ ಸುರಕ್ಷತಾ ಕಾಮಗಾರಿ ಕೈಗೊಂಡಿರುವ ಕಾರಣಕ್ಕೆ ಹುಬ್ಬಳ್ಳಿ-ಬೆಂಗಳೂರು ನಡುವೆ ಸಂಚರಿಸುವ ಕೆಲ ರೈಲುಗಳನ್ನು ರದ್ದು ಮಾಡಲಾಗಿದೆ.

ಏಪ್ರಿಲ್​ 6 ಮತ್ತು 7ನೇ ರಂದು – ರೈಲು ಸಂಖ್ಯೆ: 07339/07340 ಶ್ರೀ ಸಿದ್ಧಾರೂಢ ಸ್ವಾಮಿ (SSS) ಹುಬ್ಬಳ್ಳಿ – ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ಬೆಂಗಳೂರು ಮಧ್ಯೆ ಸಂಚರಿಸುವ ಎಸ್​ಎಸ್​ಎಸ್​ ಹುಬ್ಬಳ್ಳಿ ವಿಶೇಷ ರೈಲು ರದ್ದಾಗಿದೆ.

ಏಪ್ರಿಲ್ 7 ಮತ್ತು 8 ರಂದು – ರೈಲು ಸಂಖ್ಯೆ: 06255 ಕೆಎಸ್​ಆರ್​ ಬೆಂಗಳೂರು-ಮೈಸೂರು ಮೆಮು ವಿಶೇಷ ಮತ್ತು ರೈಲು ಸಂಖ್ಯೆ 06650 ಮೈಸೂರು KSR ಬೆಂಗಳೂರು ಮೆಮು ವಿಶೇಷ ರೈಲು ರದ್ದಾಗಿದೆ.

ಏಪ್ರಿಲ್​ 7, 8 ಮತ್ತು 9 ರಂದು – ರೈಲು ಸಂಖ್ಯೆ: 17391/17392 ಕೆಎಸ್ಆರ್ ಬೆಂಗಳೂರು ಮತ್ತು ಬೆಂಗಳೂರಿನ ಯಶವಂತಪುರ ನಡುವೆ ಸಂಚರಿಸುವ ರೈಲು ರದ್ದು

ಏಪ್ರಿಲ್ 7, 8 ಮತ್ತು 9 ರಂದು- ರೈಲು ಸಂಖ್ಯೆ: 06243 ಬೆಂಗಳೂರು ಹೊಸಪೇಟೆ ಮತ್ತು ರೈಲು ಸಂಖ್ಯೆ 06244 ಹೊಸಪೇಟೆ- ಬೆಂಗಳೂರು ರೈಲು ರದ್ದು

ಏಪ್ರಿಲ್​ 7 ಮತ್ತು 8 ರಂದು – ರೈಲು ಸಂಖ್ಯೆ: 16512 ಕೆಎಸ್​​ಆರ್​ ಬೆಂಗಳೂರು-ಕಣ್ಣೂರು ರೈಲು ಕೆಎಸ್​ಆರ್​ ಬೆಂಗಳೂರು ಮತ್ತು ಯಶವಂತಪುರ ನಡುವೆ ಸಂಚರಿಸುವ ರೈಲು ಭಾಗಶಃ ರದ್ದು

ಇನ್ನು ಕೆಲ ರೈಲುಗಳ ಸಮಯ ಬದಲಾವಣೆಯಾಗಿದೆ.

ರೈಲು ಸಂಖ್ಯೆ: 20661 ಕೆಎಸ್​ಆರ್​ ಬೆಂಗಳೂರು ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಏಪ್ರಿಲ್​ 8 ರಂದು ಕೆಎಸ್​ಆರ್​ ಬೆಂಗಳೂರಿನಿಂದ 30 ನಿಮಿಷಗಳ ಕಾಲ ಮರುಹೊಂದಿಸಲಾಗಿದೆ.

ರೈಲು ಸಂಖ್ಯೆ: 16591 ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಮೈಸೂರು ಹಂಪಿ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 8 ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ 90 ನಿಮಿಷಗಳ ಕಾಲ ಹಾಗೂ ರೈಲು ಸಂಖ್ಯೆ: 12079 ಕೆಎಸ್‌ಆರ್ ಬೆಂಗಳೂರು ನಿಂದ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ಏಪ್ರಿಲ್ 8 ಮತ್ತು 9 ರಂದು ಕ್ರಮವಾಗಿ ಕೆಎಸ್‌ಆರ್ ಬೆಂಗಳೂರಿನಿಂದ 30 ನಿಮಿಷ ಮತ್ತು 75 ನಿಮಿಷಗಳ ಕಾಲ ಮರುಹೊಂದಿಸಲಾಗಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...