alex Certify ನಟ ಹೃತಿಕ್ ರೋಶನ್‌‌ ಜೊತೆಗಿನ ಸಂಬಂಧವನ್ನು ಬಹಿರಂಗಪಡಿಸಿದ ಸಬಾ ಆಜಾದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ಹೃತಿಕ್ ರೋಶನ್‌‌ ಜೊತೆಗಿನ ಸಂಬಂಧವನ್ನು ಬಹಿರಂಗಪಡಿಸಿದ ಸಬಾ ಆಜಾದ್

ಬಾಲಿವುಡ್ ನಟ ಹೃತಿಕ್ ರೋಶನ್, ನಟನೆಯಲ್ಲಿ ಪರ್ಫೆಕ್ಟ್. ನೋಡೋದಕ್ಕೂ ಗುಡ್ ಲುಕ್ಕಿಂಗ್. ಎಷ್ಟೋ ಹುಡುಗಿಯರು ತಮ್ಮ ಕನಸಿನ ರಾಜಕುಮಾರ ಇದ್ದರೆ, ಹೃತಿಕ್ ರೋಶನ್ ಹಾಗೆ ಇರಬೇಕು ಅಂತಾ ಹೇಳ್ತಾರೆ. ಇದೇ ನಟ ಹೃತಿಕ್ ರೋಶನ್ ಹೆಸರು ಕಳೆದ ಕೆಲವು ತಿಂಗಳಿನಿಂದ ನಟಿ ಹಾಗೂ ಗಾಯಕಿ ಸಬಾ ಅಜಾದ್ ಜೊತೆ ಕೇಳಿ ಬರ್ತಾ ಇತ್ತು. ಸಿನೆಮಾ ನಟರು ಅಂದ ಮೇಲೆ ಅಲ್ಲಿ ವದಂತಿ ಇದ್ದೇ ಇರುತ್ತೆ. ಹಾಗಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಇತ್ತಿಚೆಗೆ ಸಬಾ ಆಜಾದ್ ಈ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಇತ್ತೀಚೆಗೆ ಸಬಾ ಆಜಾದ್ ಹೊಸ ಪ್ರಾಜೆಕ್ಟ್‌ ಒಂದನ್ನ ಒಪ್ಪಿಕೊಂಡಿದ್ದಾರೆ. ಅದನ್ನ ಸಬಾ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ಲ್ಲಿ ಬರೆದುಕೊಂಡಿದ್ದಾರೆ. ಅದಕ್ಕೆ ನಟ ಹೃತಿಕ್ ರೋಶನ್ ಶುಭಾಶಯ ಹೇಳಿರೋದು ವಿಶೇಷ. ಸಬಾ ಈಗ ಆರಂಭಿಸಲಿರೋ ಹೊಸ ಸಿನೆಮಾ ಪ್ರಾಜೆಕ್ಟ್ ಹೆಸರು ‘ಮಿನಿಮಮ್‘ ಇದು ವಿದೇಶದಲ್ಲಿ ವಾಸಿಸೋ ಭಾರತೀಯರು ಎದುರಿಸೋ ಸಮಸ್ಯೆಗಳ ಕುರಿತಾದ ಸಿನೆಮಾ. ಸಬಾ ಇದರ ಬಗ್ಗೆ ಇನ್ಸ್ಟಾಗ್ರಾಮ್‌ ಪೋಸ್ಟ್ ಹಾಕ್ತಿದ್ದ ಹಾಗೆನೇ ನಟ ಹೃತಿಕ್ ರೋಶನ್ ‘ನೀನು ಇದರಲ್ಲಿ ಅದ್ಭುತವಾಗಿ ಕಾಣಿಸಿಕೊಳ್ಳಲಿದ್ದಿಯಾ ಊಯಿ, ಊಯಿ‘ ಅಂತ ತಮಾಷೆ ಮಾಡಿದ್ದಾರೆ. ಇದಕ್ಕೆ ಸಬಾ ರಿಪ್ಲೈ ಕೊಟ್ಟಿದ್ದು ಹೇಗೆಂದ್ರೆ ‘ಹೌದೌದು….. ಫಿಂಗರ್ ಕ್ರಾಸ್ಡ್ ಮೊನ್ ಅಮ್ಯೊರ್ ಅಂತ.

ವಿದ್ಯಾರ್ಥಿಗಳೇ ಗಮನಿಸಿ: ನಿಗದಿಯಂತೆ ಮೇ 16 ರಂದು ಆರಂಭವಾಗಲಿದೆ ಶಾಲೆ

ಈ ಮೆಸೇಜ್ ಓದಿದಾಕ್ಷಣ ಯಾರಿಗೂ ಅರ್ಥ ಆಗೋದಿಲ್ಲ. ಅಸಲಿಗೆ ಸಬಾ ಮೊನ್‌ ಅಮ್ಯೊರ್‌ ಅಂತ ಬರೆದಿದ್ದು, ಫ್ರೆಂಚ್‌ ಭಾಷೆಯಲ್ಲಿ ಮೊನ್‌ ಅಮ್ಯೊರ್‌ ಅಂದರೆ ಮೈ ಲವ್ ಅಂತ ಅರ್ಥ. ಅಲ್ಲಿಗೆ ಇವರಿಬ್ಬರ ನಡುವೆ ಕುಚ್‌ ಕುಚ್‌ ನಡೀತಾ ಇತ್ತು ಅನ್ನೊದು ಈಗ ಕನ್ಫರ್ಮ್. ಈಗ ಸಿನಿ ಪ್ರೇಮಿಗಳಿಗೆ ಇರೋ ಕುತೂಹಲ ಏನಂದ್ರೆ ಇವರಿಬ್ಬರ ಮದುವೆ ಯಾವಾಗ ಅಂತ.

Hrithik Roshan

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...