alex Certify ಮನಸ್ಸೊಂದಿದ್ದರೆ ಮಾರ್ಗವೂ ಸಿಗುತ್ತದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ: ಹಳ್ಳಿಗಳ ಚಿತ್ರಣ ಸೆರೆ ಹಿಡಿದು ಕೈತುಂಬಾ ಹಣ ಗಳಿಸುತ್ತಿರುವ ಯೂಟ್ಯೂಬರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸ್ಸೊಂದಿದ್ದರೆ ಮಾರ್ಗವೂ ಸಿಗುತ್ತದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ: ಹಳ್ಳಿಗಳ ಚಿತ್ರಣ ಸೆರೆ ಹಿಡಿದು ಕೈತುಂಬಾ ಹಣ ಗಳಿಸುತ್ತಿರುವ ಯೂಟ್ಯೂಬರ್…!

ಕೋವಿಡ್​ ಕಾರಣದಿಂದಾಗಿ ಎಷ್ಟೋ ಮಂದಿ ಕೆಲಸ ಕಳೆದುಕೊಂಡರೆ, ಇನ್ನು ಹಲವರು ಇದರ ಪ್ರಯೋಜನ ಪಡೆದು, ಲಾಭವನ್ನೂ ಮಾಡಿಕೊಂಡಿದ್ದಾರೆ. ಇದೇ ಸಮಯದಲ್ಲಿ ಯುಟ್ಯೂಬ್​ ಚಾನೆಲ್​ಗಳ ಸಂಖ್ಯೆಯೂ ಹೆಚ್ಚಿ ಅದರಲ್ಲಿ ಲಾಭ ಮಾಡಿಕೊಳ್ಳುತ್ತಿರುವ ದೊಡ್ಡ ವರ್ಗವೇ ಇದೆ.

ಅಂಥವರಲ್ಲಿ ಒಬ್ಬರು ಜ್ಞಾನೇಂದ್ರ ಶುಕ್ಲಾ ಮತ್ತು ಜೈ ವರ್ಮಾ. ಕೋವಿಡ್​ ಬರುವ ಮುಂಚೆಯೇ Being Chhattisgarhiya ಎಂಬ ಯುಟ್ಯೂಬ್​ ಚಾನೆಲ್​ ಶುರು ಮಾಡಿದ್ದರೂ ಅದರ ಬಗ್ಗೆ ಗಮನ ಹರಿಸದಿದ್ದ ಈ ಜೋಡಿ, ಕೋವಿಡ್​ನಿಂದ ಕೆಲಸ ಕಳೆದುಕೊಂಡ ಮೇಲೆ ವಿಧವಿಧವಾದ ವಿಷಯಗಳೊಂದಿಗೆ ಯುಟ್ಯೂಬ್​ಗೆ ಹೊಸ ರೂಪ ನೀಡಿದ್ದಾರೆ. ಉದ್ಯೋಗದಿಂದ ತಾವು ಗಳಿಸುತ್ತಿರುವ ಸಂಬಳಕ್ಕಿಂತಲೂ ಹೆಚ್ಚಿನ ಆದಾಯವನ್ನು ಇವರೀಗ ಗಳಿಸುತ್ತಿದ್ದಾರೆ. ಯುಟ್ಯೂಬ್​ನಲ್ಲಿ ಇವರ ನಟನೆಯನ್ನು ಮೆಚ್ಚುತ್ತಿದ್ದಾರೆ ಹಲವರು. ಈಗ ಬಾಲಿವುಡ್​ ಸೇರುವ ಆಸೆ ಈ ಜೋಡಿಯದ್ದು.

ಸುಮಾರು 1.20 ಲಕ್ಷ ಚಂದಾದಾರರನ್ನು ಹೊಂದಿರುವ ಇವರ ಯೂಟ್ಯೂಬ್​ ಚಾನೆಲ್​ನಲ್ಲಿ ಇದಾಗಲೇ 200 ಕ್ಕೂ ಹೆಚ್ಚು ವಿಡಿಯೋಗಳು ಅಪ್​ಲೋಡ್​ ಆಗಿವೆ. ಇದರ ವಿಶೇಷತೆ ಏನೆಂದರೆ ಇವರ ವಿಡಿಯೋ ಸಂಪೂರ್ಣ ಹಳ್ಳಿಮಯವಾಗಿದೆ. ಎತ್ತಿನ ಬಂಡಿಯ ಮೇಲೆ ಕುಳಿತು ಹಳ್ಳಿ ಹಳ್ಳಿಗಳನ್ನು ತಿರುಗಿ ಅಲ್ಲಿನ ಜನಜೀವನವನ್ನು ಕಲೆ ಹಾಕಿ, ಅಲ್ಲಿರುವ ವಿಶೇಷತೆಗಳನ್ನು ಹೊರಕ್ಕೆ ತಂದು ಅದನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡುತ್ತಿದ್ದಾರೆ. ಹಳ್ಳಿಗಳ ಚಿತ್ರಣ ನೆಟ್ಟಿಗರ ಗಮನ ಸೆಳೆಯುತ್ತಿವೆ. ಇದರಿಂದಾಗಿ ದಿನದಿಂದ ದಿನಕ್ಕೆ ಇವರ ಯೂಟ್ಯೂಬ್​ ವ್ಯೂಸ್​ ಹೆಚ್ಚುತ್ತಲೇ ಸಾಗಿದೆ.

ಅವರು ಈಗ ತಿಂಗಳಿಗೆ ಎರಡರಿಂದ ಮೂರು ವೀಡಿಯೊಗಳನ್ನು ತಯಾರಿಸುತ್ತಾರೆ, ಇದರ ಪರಿಣಾಮವಾಗಿ, ಅವರು ತಿಂಗಳಿಗೆ ಸುಮಾರು 40 ಸಾವಿರ ರೂಪಾಯಿಗಳನ್ನು ($483.93) ಗಳಿಸುತ್ತಿದ್ದಾರೆ. ಇದು ಆರಂಭಿಕ ಆದಾಯವಷ್ಟೇ. ಇನ್ನೂ ಹೆಚ್ಚಿನ ಗಳಿಕೆ ಸಾಧ್ಯ ಎನ್ನುತ್ತದೆ ಈ ಜೋಡಿ. ತಾವು ಪಡೆಯುತ್ತಿದ್ದ ಸಂಬಳಕ್ಕಿಂತ ಇದು 15 ಸಾವಿರ ರೂ. ಹೆಚ್ಚಾಗಿದೆ ಎನ್ನುತ್ತಾರೆ ಅವರು. ಮನಸ್ಸೊಂದಿದ್ದರೆ ಏನು ಬೇಕಾದರೂ ಮಾಡಬಹುದು, ಯಾವ ವಿಷಯದರಲ್ಲಾದರೂ ಪರಿಣತಿ ಪಡೆದು ಸಂಪಾದಿಸಬಹುದು ಎಂಬ ಕಿವಿ ಮಾತು ಹೇಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...