alex Certify ಈ ಸುಲಭ ಉಪಾಯಗಳಿಂದ ಹೊಟ್ಟೆ ಬೊಜ್ಜು ಕಡಿಮೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸುಲಭ ಉಪಾಯಗಳಿಂದ ಹೊಟ್ಟೆ ಬೊಜ್ಜು ಕಡಿಮೆ ಮಾಡಿ

ಬೊಜ್ಜು ಹೊಟ್ಟೆ ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಇದನ್ನು ಕಡಿಮೆ ಮಾಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತವೆ. ಆದ್ರೆ ಹೊಟ್ಟೆ ಮಾತ್ರ ಕಡಿಮೆಯಾಗೋದಿಲ್ಲ. ಹೊಟ್ಟೆ ಸಮಸ್ಯೆಯಿಂದ ನೀವೂ ಬಳಲುತ್ತಿದ್ದರೆ ಕೆಲ ಸುಲಭ ಉಪಾಯಗಳ ಮೂಲಕ ಅದನ್ನು ಕರಗಿಸಿಕೊಳ್ಳಬಹುದು.

ಬಿಸಿ ನೀರು ಸೇವನೆ ಬೊಜ್ಜು ಕರಗಿಸಿಕೊಳ್ಳಲು ಒಳ್ಳೆಯ ವಿಧಾನವಾಗಿದೆ. ಇದು ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಸೇವನೆ ಹೆಚ್ಚು ಪರಿಣಾಮಕಾರಿ. ಎರಡು ವಾರಗಳಲ್ಲಿಯೇ ಇದ್ರ ಪರಿಣಾಮ ನಿಮಗೆ ಕಾಣಿಸಲು ಶುರುವಾಗುತ್ತದೆ.

ಉಪ್ಪು-ಸಕ್ಕರೆ ಸೇವನೆ ಕೂಡ ಬೊಜ್ಜು ಹೆಚ್ಚಿಸುತ್ತದೆ. ಹಾಗಾಗಿ ಉಪ್ಪು ಹಾಗೂ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ. ಟೀ, ಕಾಫಿಗೆ ಸಕ್ಕರೆ ಬಳಸಬೇಡಿ.

ಚಳಿಗಾಲದಲ್ಲಿ ಹಸಿವು ಜಾಸ್ತಿ. ಕೆಲವರಿಗೆ ಎಲ್ಲ ಕಾಲದಲ್ಲಿಯೂ ಹೆಚ್ಚು ಹಸಿವಾಗುತ್ತದೆ. ಊಟದ ಮಧ್ಯದಲ್ಲಿ ಹಸಿವೆನಿಸಿದ್ರೆ ನೀರು ಕುಡಿಯಿರಿ. ಇದ್ರಿಂದ ನಿಮ್ಮ ತೂಕ ನಿಯಂತ್ರಣಕ್ಕೆ ಬರುತ್ತದೆ.

ಆಹಾರದಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸರಿಮಾಡುತ್ತದೆ. ಇದರಿಂದಾಗಿ ಬೊಜ್ಜು ಹೆಚ್ಚಾಗುವುದಿಲ್ಲ. ಆಮ್ಲೀಯತೆಯನ್ನು ಸಹ ನಿಯಂತ್ರಿಸಲಾಗುತ್ತದೆ. ಆದ್ದರಿಂದ ಫೈಬರ್ ಆಹಾರ ಸೇವನೆ ಮಾಡಿ. ಬಿಸ್ಕತ್ತುಗಳು ಮತ್ತು ಮೈದಾದಿಂದ ಮಾಡಿದ ಆಹಾರ ಸೇವನೆ ತಪ್ಪಿಸಿ. ನಿಯಮಿತವಾಗಿ ವ್ಯಾಯಾಮ ಮಾಡುವುದು ಬಹಳ ಮುಖ್ಯ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ವ್ಯಾಯಾಮ ಅಗತ್ಯ. ಹೊಟ್ಟೆ ಹಾಗೂ ಸೊಂಟದ ಬೊಜ್ಜು ಕಡಿಮೆ ಮಾಡುವ ವ್ಯಾಯಾಮಕ್ಕೆ ಆದ್ಯತೆ ನೀಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...