alex Certify ಬೇಯಿಸಿದ ಮೊಟ್ಟೆ ಸಿಪ್ಪೆ ತೆಗೆಯುವುದು ಹೇಗೆ…? ಯೂಟ್ಯೂಬರ್‌ ಹೊಸ ಟ್ರಿಕ್ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಯಿಸಿದ ಮೊಟ್ಟೆ ಸಿಪ್ಪೆ ತೆಗೆಯುವುದು ಹೇಗೆ…? ಯೂಟ್ಯೂಬರ್‌ ಹೊಸ ಟ್ರಿಕ್ ವೈರಲ್

ಮೊಟ್ಟೆಯ ಸಿಪ್ಪೆ ಸುಲಿಯಲು ಕಷ್ಟವೇ? ಯೂಟ್ಯೂಬರ್ ಮತ್ತು ಸೋಷಿಯಲ್ ಮೀಡಿಯ ಇನ್ ಫ್ಲುಯೆನ್ಸರ್ ಮ್ಯಾಕ್ಸ್ ಕ್ಲೈಮೆಂಕೊ ಅವರ ಹೊಸ ಟ್ರಿಕ್ ತಿಳಿಸಿಕೊಡುತ್ತಿದ್ದಾರೆ.

ಕ್ಲೈಮೆಂಕೊ ಪ್ರಕಾರ, ಮೊಟ್ಟೆಯ ಸಿಪ್ಪೆ ತೆಗೆಯುವ ಅಗತ್ಯವಿಲ್ಲ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಆನ್‌ಲೈನ್ ಫಾಲೋಯರ್‌ಗಳ ಪ್ರಕ್ರಿಯೆಯನ್ನು ವಿವರಿಸಲು ರೀಲ್ಸ್ ಅನ್ನು ಸಹ ರಚಿಸಿದ್ದಾರೆ.

ಒಂದು ಕೈಯಲ್ಲಿ ಬೇಯಿಸಿದ ಮೊಟ್ಟೆಯನ್ನು ಹಿಡಿದಿದ್ದು ಇನ್ನೊಂದು ಕೈಯಲ್ಲಿ ಚಾಲ್ ಸ್ಟಿಕ್ ಹಿಡಿದು ಮೊಟ್ಟೆಯಲ್ಲಿ ಎರಡು ರಂಧ್ರಗಳನ್ನು ಮಾಡಿ ಮುಂದುವರಿಯುತ್ತಾನೆ. ರಂಧ್ರ ಕೆಳಭಾಗದಲ್ಲಿ ದೊಡ್ಡದಾಗಿದ್ದು, ಮೇಲೆ ಚಿಕ್ಕದಾಗಿದೆ.

ನಂತರ ಚಿಕ್ಕ ರಂಧ್ರವನ್ನು ಮೇಲಕ್ಕೆ ಮಾಡಿ ಕೊನೆಯದಾಗಿ ರಂಧ್ರದ ಒಂದು ಬದಿಯಲ್ಲಿ ಗಾಳಿಯನ್ನು ಊದುತ್ತಾನೆ. ಗಾಳಿಯ ರಭಸಕ್ಕೆ ಮೊಟ್ಟೆ ಅದರ ಚಿಪ್ಪಿನಿಂದ ಸುಲಭವಾಗಿ ಹೊರಗೆ ಬರುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೊ ಇದುವರೆಗೆ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಅದರೆ ಹೆಚ್ಚಿನ ಬಳಕೆದಾರರು ಇದನ್ನು ಇಷ್ಟಪಟ್ಟಿಲ್ಲ. ಈ ರೀತಿ ಮಾಡಿ ನೀವು ಅದನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ನೀಡುತ್ತೀರಾ? ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಈ ರೀತಿ ಅನೇಕರು ತಮಾಷೆ ಅಭಿಪ್ರಾಯ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...