ಪ್ರಾನ್ಸ್ ಎಂದರೆ ಅನೇಕರಿಗೆ ಪಂಚಪ್ರಾಣ. ಅವುಗಳನ್ನು ಬಳಸಿ ನಾನಾ ವಿಧದ ಅಡುಗೆಯನ್ನು ಮಾಡಬಹುದು. ಅದರಲ್ಲಿ ಪ್ರಾನ್ಸ್ ಕರಿ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
½ ಕೆ.ಜಿ. ಪ್ರಾನ್ಸ್, ಸ್ವಲ್ಪ ಶುಂಠಿ, 2 ಈರುಳ್ಳಿ, 2 ಕಪ್ ತೆಂಗಿನ ಹಾಲು, 2 ಸ್ಪೂನ್ ಗರಂ ಮಸಾಲ ಪುಡಿ, 4 ಹಸಿರು ಏಲಕ್ಕಿ, 2 ಸ್ಪೂನ್ ಸಕ್ಕರೆ, 1 ಸ್ಪೂನ್ ಮೆಣಸಿನಕಾಯಿ ಪುಡಿ, ½ ಸ್ಪೂನ್ ಕರಿಮೆಣಸಿನ ಕಾಳು, 2 ಸ್ಪೂನ್ ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ:
ಪ್ರಾನ್ಸ್ ಗಳನ್ನು ಕ್ಲೀನ್ ಮಾಡಿಕೊಂಡು ಈರುಳ್ಳಿ ಮತ್ತು ಶುಂಠಿಯನ್ನು ರುಬ್ಬಿಕೊಳ್ಳಿ. 5 ಸ್ಪೂನ್ ಎಣ್ಣೆ ಕಾಯಿಸಿ ಅದರಲ್ಲಿ ರುಬ್ಬಿಕೊಂಡದ್ದನ್ನು ಕೆಂಪಗೆ ಆಗುವವರೆಗೆ ಹುರಿದುಕೊಳ್ಳಿ.
ನಂತರ ಪ್ರಾನ್ಸ್ ಹಾಕಿ ಕೆಂಪು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಬಳಿಕ ಎಲ್ಲಾ ಮಸಾಲೆಗಳನ್ನು, ತೆಂಗಿನ ಹಾಲನ್ನು ಹಾಕಿರಿ.
ಉಪ್ಪನ್ನು ಹಾಕಿ ಪ್ರಾನ್ಸ್ ಬೇಯುವವರೆಗೆ ಕುದಿಸಿರಿ. ಬೆಂದ ನಂತರ ಅದಕ್ಕೆ ಸಕ್ಕರೆಯ ಎಳೆಪಾಕ ತೆಗೆದು ಹಾಕಿ ಬಳಿಕ ಸ್ವಲ್ಪ ಹೊತ್ತು ಕುದಿಸಿರಿ. ಹೆಚ್ಚಿದ ಕೊತಂಬರಿ ಸೊಪ್ಪನ್ನು ಹಾಕಿ ಇಳಿಸಿ, ಬಿಸಿಯಾಗಿರುವಾಗಲೇ ಬಡಿಸಿ.