ಬ್ರೊಕೊಲಿ ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆಯಲ್ಲಿ ಬ್ರೊಕೊಲಿ ಸೂಪ್ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭವಿದೆ.
ಬ್ರೊಕೊಲಿ ಸೂಪ್ ಮಾಡಲು ಬೇಕಾಗುವ ಪದಾರ್ಥ :
ಬ್ರೊಕೊಲಿ – 250 ಗ್ರಾಂ
ಈರುಳ್ಳಿ – 1
ಬೆಳ್ಳುಳ್ಳಿ- 2
ಲವಂಗ – 2 (ನುಣ್ಣಗೆ ಕತ್ತರಿಸಿದ)
ಜಾಯಿಕಾಯಿ ಪುಡಿ – 1 ಚಿಟಕಿ
ತರಕಾರಿ – 2 ಕಪ್
ಹಾಲು – 2 ಕಪ್
ಮೈದಾ – 2 ಚಮಚ
ಬೆಣ್ಣೆ – 2 ಚಮಚ
ಕರಿಮೆಣಸಿನ ಪುಡಿ – ರುಚಿಗೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಬ್ರೊಕೊಲಿ ಸೂಪ್ ಮಾಡುವ ವಿಧಾನ :
ಮೊದಲು ಬ್ರೊಕೊಲಿಯನ್ನು ಸಣ್ಣಕ್ಕೆ ಕತ್ತರಿಸಿಕೊಳ್ಳಿ. ನಂತ್ರ ಒಂದು ಪಾತ್ರೆಗೆ ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಕುದಿಸಿ. ಅದಕ್ಕೆ ಬ್ರೊಕೊಲಿ ಹಾಕಿ. 30 ಸೆಕೆಂಡಿನ ನಂತ್ರ ಬ್ರೊಕೊಲಿಯಲ್ಲಿರುವ ನೀರನ್ನು ಬಸಿದುಕೊಳ್ಳಿ. ಇನ್ನೊಂದು ಪಾತ್ರೆಗೆ ಬೆಣ್ಣೆ ಹಾಕಿ ಒಲೆ ಮೇಲಿಟ್ಟು ಬಿಸಿ ಮಾಡಿ. ಇದಕ್ಕೆ ಕತ್ತರಿಸಿದ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಹಾಕಿ ಹುರಿದುಕೊಳ್ಳಿ. ಇದಕ್ಕೆ ಮೈದಾ ಹಾಕಿ. ಎರಡು ನಿಮಿಷ ಕೈ ಆಡಿಸಿ. ಇದಕ್ಕೆ ಬ್ರೊಕೊಲಿ ಹಾಕಿ ಕೈ ಆಡಿಸಿ ನಂತ್ರ ನೀರನ್ನು ಹಾಕಿ. ಎರಡು ನಿಮಿಷದ ನಂತ್ರ ಇದಕ್ಕೆ ಕತ್ತರಿಸಿದ ತರಕಾರಿನ್ನು ಹಾಕಿ. 10 ನಿಮಿಷದಲ್ಲಿ ಇದು ಸಿದ್ಧವಾಗುತ್ತದೆ.
ತಣ್ಣಗಾದ್ಮೇಲೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ನಂತ್ರ ಈ ಮಿಶ್ರಣಕ್ಕೆ ಬಿಸಿ ಹಾಲನ್ನು ಹಾಕಿ ಕುದಿಸಿ. ನಂತ್ರ ಉಪ್ಪು, ಕರಿ ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ. ಬಿಸಿಯಿರುವಾಗ್ಲೇ ಸೂಪ್ ಸರ್ವ್ ಮಾಡಿ.