ನಿಮ್ಮ ಅಡುಗೆ ಮನೆಯ ಪಾತ್ರೆಗಳು ನಿತ್ಯ ಹೊಸದರಂತೆ ಹೊಳೆಯುತ್ತಿರಬೇಕೇ? ಹಾಗಿದ್ದರೆ ನೀವು ಈ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಿ.
ಮೊದಲಿಗೆ ತೊಳೆಯುವ ಪಾತ್ರೆಯಲ್ಲಿರುವ ಉಳಿದ ಆಹಾರವನ್ನು ಪ್ರತ್ಯೇಕಿಸಿ. ಅವುಗಳನ್ನು ಸಿಂಕ್ ನಲ್ಲಿ ಹಾಕದಿರಿ. ಬಳಿಕ ಸಿಂಕ್ ನ ನೀರು ಹೊರಹೋಗದಂತೆ ಮುಚ್ಚಿ. ಸಿಂಕ್ ಗೆ ಬೆಚ್ಚಗಿನ ನೀರು ತುಂಬಿ. ತೊಳೆಯಲಿರುವ ಪಾತ್ರೆಗಳನ್ನು ಅದರಲ್ಲಿ ಅದ್ದಿಡಿ. ಅದಕ್ಕೆ ಡಿಶ್ ವಾಶ್ ಲಿಕ್ವಿಡ್ ಹಾಕಿ.
ಬಳಿಕ ಪ್ರತಿಯೊಂದು ಪಾತ್ರೆಯನ್ನು ಉಜ್ಜಿ ತೊಳೆಯಿರಿ. ಇದರಿಂದ ಪಾತ್ರೆಯಲ್ಲಿರುವ ಜಿಡ್ಡಿನಂಶ ದೂರವಾಗುತ್ತದೆ. ಸ್ಕ್ರಬ್ ಮಾಡಿದ ಬಳಿಕ ತಣ್ಣೀರಿನಿಂದ ಮತ್ತೆ ಪಾತ್ರೆಯನ್ನು ತೊಳೆಯಿರಿ. ಅದರ ಸೋಪಿನ ಅಂಶ ದೂರವಾಗಿದೆ ಎಂಬುದನ್ನು ದೃಢಪಡಿಸಿಕೊಳ್ಳಿ.
ಕೊನೆಯ ಹಂತದಲ್ಲಿ ಕಿಚನ್ ಟವೆಲ್ ನೆರವಿನಿಂದ ಪಾತ್ರೆಗಳನ್ನು ಸರಿಯಾಗಿ ಒರೆಸಿ. ಒಣಗಲು ಹರಡಿ. ಬಳಿಕ ಆಯಾ ಸ್ಥಾನದಲ್ಲಿಡಿ. ಹೀಗೆ ಮಾಡುವುದರಿಂದ ಪಾತ್ರೆಯಲ್ಲಿ ನೀರಿನ ಕಲೆಗಳು ಉಳಿಯುವುದನ್ನು ತಪ್ಪಿಸಬಹುದು.