alex Certify ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋದು ಹೇಗೆ…? ಇಲ್ಲಿದೆ ಉಪಯುಕ್ತ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋದು ಹೇಗೆ…? ಇಲ್ಲಿದೆ ಉಪಯುಕ್ತ ಟಿಪ್ಸ್

ಇತ್ತೀಚಿನ ಐದಾರು ವರ್ಷಗಳಲ್ಲಿ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಹೆಚ್ಚಾಗಿದೆ. ಸ್ಟಾಕ್ ಅಥವಾ ಷೇರು ಮಾರುಕಟ್ಟೆಯು, ಷೇರುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವವರ ಒಂದು ನೆಟ್ವರ್ಕ್ ಆಗಿದೆ.  ಭಾರತದಲ್ಲಿ ಎರಡು ಪ್ರಮುಖ ಷೇರು ಮಾರುಕಟ್ಟೆ ಇದೆ. ನ್ಯಾಶನಲ್ ಸ್ಟಾಕ್ ಎಕ್ಸ್ಚೇಂಜ್ ಹಾಗೂ ಬಾಂಬೆ ಸ್ಟಾಕ್ ಎಕ್ಸ್ಚೇಂಜ್. ಇದರಲ್ಲಿ ಬ್ಯಾಂಕ್, ಆಟೋಮೊಬೈಲ್, ಐ.ಟಿ, ಫಾರ್ಮಾಸಿಟಿಕಲ್ ಹೀಗೆ ಎಲ್ಲಾ ತರಹದ ಕಂಪನಿಗಳೂ ಇರುತ್ತವೆ.

ಷೇರು ಮಾರುಕಟ್ಟೆಯಲ್ಲಿ ಯಾರು ಬೇಕಾದರೂ ಹೂಡಿಕೆ ಮಾಡಬಹುದಾಗಿದೆ. ಹೂಡಿಕೆ ಮಾಡಲು ನಿಮಗೊಂದು ಡಿ ಮ್ಯಾಟ್ ಅಕೌಂಟ್ ಅಗತ್ಯವಿರುತ್ತದೆ. ನೇರವಾಗಿ ಯಾವುದೇ ಬ್ರೋಕರ್ ಅಥವಾ ಆನ್ಲೈನ್ ಮುಖಾಂತರ ಹೂಡಿಕೆ ಮಾಡಬಹುದು.

ಮೊದಲಿಗೆ ನಿಮ್ಮ ಆದಾಯದ ಸ್ವಲ್ಪ ಮಾತ್ರ ಹೂಡಿಕೆ ಮಾಡಬೇಕು ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಮಾರುಕಟ್ಟೆಯಲ್ಲಿ ಉತ್ತಮ ಪ್ಲಾನ್ ನೊಂದಿಗೆ ಹೂಡಿಕೆ ಮಾಡಬೇಕು. ನೀವು ಇನ್ನೂ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡದಿದ್ದರೆ, ಹೂಡಿಕೆ ಶುರು ಮಾಡಲು ಉತ್ತಮ ಅವಕಾಶ.

ಮಾರುಕಟ್ಟೆಯಲ್ಲಿ ಬೆಲೆ ಯಾವಾಗ ಏರುತ್ತದೆ ಅಥವಾ ಬೀಳುತ್ತದೆ ಎಂದು ಊಹಿಸುವುದು ಕಷ್ಟ. ಹಾಗಾಗಿ ನೀವು ದಿನದ ಟ್ರೇಡಿಂಗ್ ಬದಲು ದೀರ್ಘಾವಧಿಗೆ ಹೂಡಿಕೆ ಮಾಡುವುದು ಉತ್ತಮ.

ನಿಯಮಿತ ಹೂಡಿಕೆ ಅಥವಾ ಎಸ್ಐಪಿಯಲ್ಲಿ ಹೂಡಿಕೆ ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಷೇರಿನ ಬೆಲೆಯು ಸರಿಯಾದ ದರದಲ್ಲಿ ಇರುತ್ತದೆ. ನಷ್ಟ ಆಗುವ ಸಾಧ್ಯತೆ ಕಡಿಮೆ.

ಯಾವುದೇ ಒಂದು ಷೇರಿನಲ್ಲಿ ಪೂರ್ಣ ಹಣವನ್ನು ಹೂಡಿಕೆ ಮಾಡುವ ಬದಲು ವಿವಿಧ ಕ್ಷೇತ್ರಗಳ ಉತ್ತಮ ಕಂಪನಿಗಳ ಷೇರು ಖರೀದಿಸಿ.  ಇಂತಹ ಷೇರುಗಳ ಬೆಲೆ ಸ್ವಲ್ಪ ಸಮಯದವರೆಗೆ ಕುಸಿದರೂ ನಂತರ ಚೇತರಿಸಿಕೊಳ್ಳುತ್ತವೆ.

ಆದಷ್ಟು ಬೇಗ ಮಾರುಕಟ್ಟೆಯಲ್ಲಿ ಹಣ ಗಳಿಸುವ ಆಸೆ ಬೇಡ. ನೀವು ಹೆಚ್ಚು ಹಣವನ್ನು ಹೂಡಿಕೆ ಮಾಡಲು ಅಥವಾ ದೀರ್ಘಕಾಲ ಹೂಡಿಕೆ ಮಾಡಲು ಬಯಸಿದರೆ ಷೇರು ಮಾರುಕಟ್ಟೆ ತಜ್ಞರ  ಸಲಹೆಯನ್ನು ಪಡೆದು ಇನ್ವೆಸ್ಟ್ ಮಾಡಿ. ಸ್ನೇಹಿತ ಅಥವಾ ಸಂಬಂಧಿಕರ ಸಲಹೆಗಳನ್ನು ಪಡೆಯುವ ಬದಲಿಗೆ ಪ್ರಮಾಣೀಕೃತ ಬ್ರೋಕರ್ ಅಥವಾ ತಜ್ಞರ ಸಲಹೆ ಉತ್ತಮ ಫಲಿತಾಂಶ ನೀಡುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...