ಮಕ್ಕಳಲ್ಲಿ ಸ್ಥೂಲಕಾಯ ಬಾರದಂತೆ ನೋಡಿಕೊಳ್ಳಲು ಯಾವೆಲ್ಲಾ ಕ್ರಮಗಳನ್ನು ಹೆತ್ತವರು ತೆಗೆದುಕೊಳ್ಳಬೇಕೆಂದು ಲಂಡನ್‌ನ ಯೂನಿವರ್ಸಿಟಿ ಕಾಲೇಜು ಅಧ್ಯಯನ ನಡೆಸಿ ವರದಿ ಕೊಟ್ಟಿದೆ.
ಸುಮಾರು 8000 ಪೋಷಕರನ್ನು ಸಮೀಕ್ಷೆಗೆ ಒಳಪಡಿಸಿದ ಯುಸಿಎಲ್, 10 ವರ್ಷಕ್ಕೆಲ್ಲಾ ದಢೂತಿ ಆಗಿರುವ ಮಕ್ಕಳಲ್ಲಿ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ 25% ಹೆಚ್ಚಿರುತ್ತದೆ ಎಂದು ಕಂಡುಕೊಂಡಿದೆ.
ಆಸ್ಪತ್ರೆ ಬಿಲ್ ಗೆ ಹೆದರಿ ಅಂಬುಲೆನ್ಸ್ ನಿಂದಲೇ ರೋಗಿ ಪರಾರಿ…!
ಹೀಗೆ ಚಿಕ್ಕ ವಯಸ್ಸಿಗೇ ಸ್ಥೂಲಕಾಯರಾದ 1.44 ಕೋಟಿ ಮಕ್ಕಳನ್ನು ಹೊಂದಿರುವ ಭಾರತದಲ್ಲೂ ಸಹ ಈ ಸಮಸ್ಯೆ ದೊಡ್ಡದಿದೆ ಎಂದು ನಾರಾಯಣ ಹೆಲ್ತ್ ಸಮೂಹ ತಿಳಿಸುತ್ತದೆ. ಆರ್ಥಿಕ ಸ್ಥಿತಿಗತಿಗಳು ಚೆನ್ನಾಗಿ ಆಗುತ್ತಲೇ ಕೊಬ್ಬು ಹಾಗೂ ಸಕ್ಕರೆ ಪ್ರಮಾಣ ಹೆಚ್ಚಿರುವ ’ಆಧುನಿಕ ಆಹಾರ’ಗಳ ಸೇವನೆ ಹೆಚ್ಚಾಗಿರುವುದು, ಜೊತೆಗೆ ದೈಹಿಕ ಚಟುವಟಿಕೆ ಕಡಿಮೆಯಾಗಿರುವುದು ಇದಕ್ಕೆ ಕಾರಣವೆಂದು ತಿಳಿದು ಬಂದಿದೆ.
ಮಕ್ಕಳಲ್ಲಿ ಸ್ಥೂಲಕಾಯ ಬಾರದಂತೆ ನೋಡಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳು:
1. ಮಗುವಿಗೆ ತೂಕ ಹೆಚ್ಚಾಗಿದ್ದಲ್ಲಿ ಮಕ್ಕಳ ತಜ್ಞರನ್ನು ಭೇಟಿ ಮಾಡಿ ತೂಕ ಇಳಿಸಲು ಸೂಚನೆಗಳನ್ನು ಕೇಳುವುದು.
2. ಮಕ್ಕಳ ಪಥ್ಯದಲ್ಲಿ ಹಣ್ಣು-ತರಕಾರಿ ಪ್ರಮಾಣ ಹೆಚ್ಚಿಸುವುದು.
3. ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗಿಯಾಗಲು ಪ್ರೋತ್ಸಾಹ ನೀಡುವುದು.
4. ಟಿವಿ ನೋಡುವ ಸಮಯ ತಗ್ಗಿಸುವುದು.
5. ಟಿವಿ ನೋಡುವ ವೇಳೆ ಕುರುಕಲು ತಿಂಡಿ ತಿನ್ನುವುದನ್ನು ತಪ್ಪಿಸುವುದು.
6. ವಾರಾಂತ್ಯಗಳಲ್ಲಿ ಕುಟುಂಬಗಳೊಂದಿಗೆ ಹೊರಗೆ ಪ್ರವಾಸಕ್ಕೆ ಹೋಗುವುದು.
7. ಮಕ್ಕಳಲ್ಲಿ ಆರೋಗ್ಯಯುತ ಪಥ್ಯಕ್ಕೆ ಪ್ರೇರಣೆ ನೀಡಲು ದೊಡ್ಡವರು ಖುದ್ದು ಉದಾಹರಣೆಯಾಗುವುದು.