ಚಾನೆಲ್ಗಳ ಮೂಲಕ ಅಡ್ಮಿನ್ಗಳು ಫೋಟೋ, ವಿಡಿಯೋ, ಸ್ಟಿಕರ್ ಹಾಗೂ ಸಮೀಕ್ಷೆಗಳನ್ನು ಪ್ರಸಾರ ಮಾಡಬಹುದಾಗಿದೆ. ವಾಟ್ಸಾಪ್ ಅಪ್ಡೇಟ್ ಮಾಡುವ ಮೂಲಕ ನೀವು ಈ ಹೊಸ ವೈಶಿಷ್ಟ್ಯವನ್ನು ಕಾಣಬಹುದಾಗಿದೆ. ನೀವು ಸೇವ್ ಮಾಡಿರುವ ನಂಬರ್, ನೀವಿರುವ ವಾಟ್ಸಾಪ್ ಗ್ರೂಪ್ಗಳನ್ನು ಹೊರತುಪಡಿಸಿಯೂ ನೀವು ಈ ವಾಟ್ಸಾಪ್ ಚಾನೆಲ್ ಮೂಲಕ ಮನರಂಜನೆಯನ್ನು ಪಡೆದುಕೊಳ್ಳಬಹುದಾಗಿದೆ.
ಭಾರತದಲ್ಲಿ ವಾಟ್ಸಾಪ್ ಚಾನೆಲ್ ಲಾಂಚ್ ಆಗುತ್ತಿದ್ದಂತೆಯೇ ಮೆಟಾ ಕಂಪನಿಯು, ಬಿಸಿಸಿಐ ಕೂಡ ವಾಟ್ಸಾಪ್ ಚಾನೆಲ್ನಲ್ಲಿದೆ ಎಂದು ಘೋಷಣೆ ಮಾಡಿತ್ತು.
ಇಂಡಿಯನ್ ಕ್ರಿಕೆಟ್ ಟೀಂ ಎಂಬ ಹೆಸರಲ್ಲಿ ಬಿಸಿಸಿಐ ತನ್ನ ಹೊಸ ಚಾನೆಲ್ ಆರಂಭಿಸಿದೆ. ನೀವು ಕೂಡ ಈ ಚಾನೆಲ್ ಸೇರಿಕೊಳ್ಳುವ ಮೂಲಕ ಅಕ್ಟೋಬರ್ನಲ್ಲಿ ನಡೆಯಲಿರುವ ವಿಶ್ವಕಪ್ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೇರವಾಗಿ ಬಿಸಿಸಿಐ ಮೂಲಕವೇ ಪಡೆದುಕೊಳ್ಳಬಹುದಾಗಿದೆ.
ನೀವು ಬಿಸಿಸಿಐನ ಈ ಚಾನೆಲ್ನ್ನು ಫಾಲೋ ಮಾಡಬೇಕು ಎಂದುಕೊಂಡಿದ್ದರೆ ಈ ಕೆಳಗಿನ ಹಂತಗಳನ್ನು ಫಾಲೋ ಮಾಡಬಹುದಾಗಿದೆ.
1. ಮೊದಲು ವಾಟ್ಸಾಪ್ ಅಪ್ಡೇಟ್ ಮಾಡಿ.
2. ಅಪ್ಡೇಟ್ ಆದ ಬಳಿಕ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ವಾಟ್ಸಾಪ್ ಓಪನ್ ಮಾಡಿ.
3. ಈಗ ನಿಮಗೆ ಚಾಟ್ಸ್ ಟ್ಯಾಬ್ ಪಕ್ಕದಲ್ಲೇ ನಿಮಗೆ ಹೊಸ ಅಪ್ಡೇಟ್ ಬಂದಿರುವುದು ಕಾಣಲಿದೆ.
4. ಈಗ ಅಪ್ಡೆಟ್ ಟ್ಯಾಬ್ ಕ್ಲಿಕ್ ಮಾಡಿ.
5. ಇಷ್ಟು ದಿನ ನಿಮ್ಮ ಸ್ನೇಹಿತರ ಸ್ಟೇಟಸ್ಗಳನ್ನು ನೋಡುತ್ತಿದ್ದ ಜಾಗದಲ್ಲಿಯೇ ನಿಮಗೆ ಚಾನೆಲ್ ಆಯ್ಕೆ ಕೂಡ ಕಾಣಲಿದೆ.
6. ಫೈಂಡ್ ಚಾನೆಲ್ ಆಯ್ಕೆಯಲ್ಲಿ ನೀವು ಇಂಡಿಯನ್ ಕ್ರಿಕೆಟ್ ಟೀಂ ಸರ್ಚ್ ಮಾಡಿ.
7. ಈಗ ನಿಮಗೆ ಇಂಡಿಯನ್ ಕ್ರಿಕೆಟ್ ಟೀಂ ವಾಟ್ಸಾಪ್ ಚಾನೆಲ್ ಕಾಣಸಿಗಲಿದೆ. ಇಲ್ಲಿ ನೀವು ಫಾಲೋ ಬಟನ್ ಕ್ಲಿಕ್ ಮಾಡೋ ಮೂಲಕ ಬಿಸಿಸಿಐನ ಹೊಸ ಹೊಸ ಅಪ್ಡೇಟ್ಗಳು ನೇರವಾಗಿ ನಿಮ್ಮ ವಾಟ್ಸಾಪ್ಗೆ ಬರಲಿದೆ.