alex Certify ‌ʼಇ- ಆಧಾರ್ʼ​ ಡೌನ್ಲೋಡ್​ ಮಾಡಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಇ- ಆಧಾರ್ʼ​ ಡೌನ್ಲೋಡ್​ ಮಾಡಲು ಇಲ್ಲಿದೆ ಟಿಪ್ಸ್

ಆಧಾರ್​ ಈಗ ದೇಶದ ಪ್ರಮುಖ ಗುರುತಿನ ದಾಖಲೆ ಎಂದು ಪರಿಗಣಿತವಾಗುತ್ತಿದೆ. ಇದು ವಿಳಾಸದ ಪುರಾವೆಯಾಗಿ, ಸರ್ಕಾರವು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅನಿವಾರ್ಯವಾಗುತ್ತಿದೆ. ಇದರ ಜೊತೆಗೆ ಪಾಸ್ ​ಪೋರ್ಟ್​ ಮತ್ತು ಬ್ಯಾಂಕ್​ ಲಾಕರ್ ​ನಂತಹ ಇತರ ದಾಖಲೆಗಳು ಮತ್ತು ಸೇವೆಗಳನ್ನು ಪಡೆಯಲೂ ಸಹ ಅಗತ್ಯವಾಗಿದೆ.

ಇ -ಆಧಾರ್​ ಕಾರ್ಡ್,​ ಆಧಾರ್ ​ನ ಪಾಸ್​ವರ್ಡ್​ ಸಂರಕ್ಷಿತ ಎಲೆಕ್ಟ್ರಾನಿಕ್​ ಪ್ರತಿಯಾಗಿದ್ದು ಅದು ಯುಐಡಿಐನಿಂದ ಡಿಜಿಟಲ್​ ಸಹಿ ಮಾಡಲ್ಪಟ್ಟಿದೆ, ಇದು ಕಾರ್ಡ್​ನ ದೃಢೀಕರಣವನ್ನು ಖಚಿತಪಡಿಸುತ್ತದೆ. ಇದನ್ನು ಯುಐಡಿಎಐ ಅಧಿಕೃತ ವೆಬ್​ಸೈಟ್​ನಿಂದ ಮೂರು ವಿಧಾನಗಳ ಮೂಲಕ ಡೌನ್​ಲೋಡ್​ ಮಾಡಬಹುದು. ನಿಮ್ಮ ಆಧಾರ್​ ಸಂಖ್ಯೆಯನ್ನು ಬಳಸಿ, ನಿಮ್ಮ ನೋಂದಣಿ ಸಂಖ್ಯೆ ಬಳಸಿ ಅಥವಾ ಜನ್ಮ ದಿನಾಂಕವನ್ನು ಬಳಸಿ ಡೌನ್​ಲೋಡ್​ ಮಾಡಬಹುದು. ಹಾಗಿದ್ದರೆ ಡೌನ್​ಲೋಡ್​ ಮಾಡುವ ವಿಧಾನ ಹೇಗೆಂದು ತಿಳಿಯೋಣ ಬನ್ನಿ.

ಆಧಾರ್​ ಸಂಖ್ಯೆಯನ್ನು ಬಳಸಿ ಇ&-ಆಧಾರ್​ ಕಾರ್ಡ್​ಅನ್ನು ಡೌನ್​ಲೋಡ್​ ಮಾಡುವುದು ಹೇಗೆ ?

ಹಂತ 1: ಆಧಾರ್​ ಅಧಿಕೃತ ವೆಬ್​ಸೈಟ್​ ಅಥವಾ https://myaadhaar.uidai.gov.in/genricDownloadAadhaar ಲಿಂಕ್​ ಪ್ರವೇಶ ಮಾಡುವುದು.

ಹಂತ 2: ಆಧಾರ್​ ಸಂಖ್ಯೆ ಆಯ್ಕೆಯನ್ನು ಕ್ಲಿಕ್ಕಿಸುವುದು.

ಹಂತ 3: ಮುಂದೆ, 12-ಅಂಕಿಯ ಆಧಾರ್​ ಸಂಖ್ಯೆ, ಭದ್ರತಾ ಕೋಡ್​ ಅನ್ನು ನಮೂದಿಸಿ ನಂತರ ನೋಂದಾಯಿತ ಮೊಬೈಲ್​ ಸಂಖ್ಯೆಯಲ್ಲಿ ಒನ್​ ಟೈಮ್​ ಪಾಸ್​ವರ್ಡ್​ ಪಡೆಯಲು ‘ಸೆಂಡ್​ ಒಟಿಪಿ’ ಆಯ್ಕೆಯನ್ನು ಕ್ಲಿಕ್​ ಮಾಡಿ.

ಹಂತ 4: ಸ್ವೀಕರಿಸಿದ ಒಟಿಪಿ ನಮೂದಿಸಿ ಮತ್ತು ನಂತರ ‘ಪರಿಶೀಲಿಸಿ ಮತ್ತು ಡೌನ್​ಲೋಡ್ʼ​ ಆಯ್ಕೆಯನ್ನು ಕ್ಲಿಕ್​ ಮಾಡುವುದು.

ಹಂತ 5: ಪರಿಶೀಲನೆ ಮುಗಿದ ನಂತರ, ಡೌನ್​ಲೋಡ್​ ಫೋಲ್ಡರ್​ನಲ್ಲಿ ಆಧಾರ್​ ಕಾರ್ಡ್​ನ ಪಾಸ್​ವರ್ಡ್​-ರಕ್ಷಿತ ಪಿಡಿಎ ಫೈಲ್​ ಸಿಗಲಿದೆ.‌ ಫೈಲ್​ ತೆರೆಯಲು, ಎಂಟು ಅಕ್ಷರಗಳ ಪಾಸ್​ವರ್ಡ್​ ಅನ್ನು ನಮೂದಿಸಬೇಕಾಗುತ್ತದೆ. ಪಾಸ್ವರ್ಡ್​ ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ದೊಡ್ಡ ಅಕ್ಷರಗಳಲ್ಲಿ ಮತ್ತು ಹುಟ್ಟಿದ ವರ್ಷ ನಮೂದಿಸಬೇಕು.

ಹುಟ್ಟಿದ ದಿನಾಂಕವನ್ನು ಬಳಸಿಕೊಂಡು ಇ& -ಆಧಾರ್​ ಕಾರ್ಡ್​ ಡೌನ್​ಲೋಡ್​ ಮಾಡುವುದು ಹೇಗೆ ?

ಹಂತ 1: ಆಧಾರ್​ ವೆಬ್​ಸೈಟ್​ ಅಥವಾ https://myaadhaar.uidai.gov.in/retrieve-eid-uid ಗೆ ಭೇಟಿ ನೀಡಿ.

ಹಂತ 2: ರ್ಪೂಣ ಹೆಸರು ನಮೂದಿಸಿ. ನಂತರ ನೋಂದಾಯಿತ ಇಮೇಲ್​ ಐಡಿ ಅಥವಾ ಮೊಬೈಲ್​ ಸಂಖ್ಯೆಯನ್ನು ಸೇರಿಸಿ. ನಂತರ ಭದ್ರತಾ ಕೋಡ್​ ಸೇರಿಸಿ.

ಹಂತ 3: ಸೆಂಡ್​ ಒಟಿಪಿ ಆಯ್ಕೆಯನ್ನು ಕ್ಲಿಕ್​ ಮಾಡಿ.

ಹಂತ 4: ನಂತರ ನೋಂದಾಯಿತ ಮೊಬೈಲ್​ ಸಂಖ್ಯೆಗೆ ಬಂದ ಒಟಿಪಿಯನ್ನು ನಮೂದಿಸಿ ಮತ್ತು ವೆರಿಫೈ ಒಟಿಪಿ ಆಯ್ಕೆಯನ್ನು ಕ್ಲಿಕ್​ ಮಾಡಿ.

ಹಂತ 5: ಆಧಾರ್​ ಸಂಖ್ಯೆಯನ್ನು ನಿಮ್ಮ ನೋಂದಾಯಿತ ಮೊಬೈಲ್​ ಸಂಖ್ಯೆಗೆ ಕಳುಹಿಸಲಾಗಿದೆ ಎಂದು ತಿಳಿಸುವ ಸಂದೇಶವನ್ನು ಪಡೆಯುತ್ತೀರಿ.

ಹಂತ 6: ಅಧಿಕೃತ ಯುಐಡಿಐ ವೆಬ್​ಸೈಟ್​ನಲ್ಲಿ ಇ – ಆಧಾರ್​ ಪುಟವನ್ನು ತೆರೆಯಿರಿ.

ಹಂತ 7: ನಿಮ್ಮ ನೋಂದಾಯಿತ ಮೊಬೈಲ್​ ಸಂಖ್ಯೆಯಲ್ಲಿ, ನಿಮ್ಮ 28-ಅಂಕಿಯ ದಾಖಲಾತಿ ಐಡಿ ಅಥವಾ 12-ಅಂಕಿಯ ಆಧಾರ್​ ಸಂಖ್ಯೆ, ಭದ್ರತಾ ಕೋಡ್​ ಅನ್ನು ನಮೂದಿಸಿ ಮತ್ತು ‘ಒಟಿಪಿ ಕಳುಹಿಸಿ’ ಆಯ್ಕೆಯನ್ನು ಟ್ಯಾಪ್​ ಮಾಡಿ.

ಹಂತ 8: ನಿಮ್ಮ ನೋಂದಾಯಿತ ಮೊಬೈಲ್​ ಸಂಖ್ಯೆಯಲ್ಲಿ ನೀವು ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ ಮತ್ತು ನಿಮ್ಮ ಇ-ಆಧಾರ್​ ಕಾರ್ಡ್​ ಅನ್ನು ಡೌನ್​ಲೋಡ್​ ಮಾಡಲು ವೆರಿಫೈ ಮತ್ತು ಡೌನ್​ಲೋಡ್​ ಆಯ್ಕೆಯನ್ನು ಕ್ಲಿಕ್​ ಮಾಡಿ.

ನೋಂದಣಿ ಸಂಖ್ಯೆಯನ್ನು ಬಳಸಿ ಇ- ಆಧಾರ್​ ಕಾರ್ಡ್​ಡೌನ್​ಲೋಡ್​ ಮಾಡುವುದು ಹೇಗೆ ?

ಹಂತ 1: ಅಧಿಕೃತ ಯುಐಡಿಐ ವೆಬ್​ಸೈಟ್​ ಅಥವಾ https://myaadhaar.uidai.gov.in/retrieve-eid-uidಗೆ ಭೇಟಿ ನೀಡಿ.

ಹಂತ 2: ಈಗ ಡೌನ್​ಲೋಡ್​ ಆಧಾರ್​ ಆಯ್ಕೆಯನ್ನು ಕ್ಲಿಕ್​ ಮಾಡಿ ನಂತರ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ.

ಹಂತ 3: ಇಲ್ಲಿ ನಿಮ್ಮ 28-ಅಂಕಿಯ ದಾಖಲಾತಿ ಐಡಿ ಮತ್ತು ಭದ್ರತಾ ಕೋಡ್​ ಅನ್ನು ನಮೂದಿಸಿ. ಮತ್ತು ಒಟಿಪಿ ಅನ್ನು ರಚಿಸಲು ‘ಸೆಂಡ್​ ಒಟಿಪಿ’ ಆಯ್ಕೆಯನ್ನು ಕ್ಲಿಕ್​ ಮಾಡಿ.

ಹಂತ 4: ಈಗ ನಿಮ್ಮ ನೋಂದಾಯಿತ ಮೊಬೈಲ್​ ಸಂಖ್ಯೆಯಲ್ಲಿ ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ ಮತ್ತು ‘ವೆರಿಫೈ ಮತ್ತು ಡೌನ್​ಲೋಡ್​’ ಆಯ್ಕೆಯನ್ನು ಕ್ಲಿಕ್​ ಮಾಡಿ. ಇ- ಆಧಾರ್​ ಕಾರ್ಡ್ ನ ಪ್ರತಿ ಡೌನ್​ಲೋಡ್​ ಆಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...