ಆಧಾರ್ ಈಗ ದೇಶದ ಪ್ರಮುಖ ಗುರುತಿನ ದಾಖಲೆ ಎಂದು ಪರಿಗಣಿತವಾಗುತ್ತಿದೆ. ಇದು ವಿಳಾಸದ ಪುರಾವೆಯಾಗಿ, ಸರ್ಕಾರವು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅನಿವಾರ್ಯವಾಗುತ್ತಿದೆ. ಇದರ ಜೊತೆಗೆ ಪಾಸ್ ಪೋರ್ಟ್ ಮತ್ತು ಬ್ಯಾಂಕ್ ಲಾಕರ್ ನಂತಹ ಇತರ ದಾಖಲೆಗಳು ಮತ್ತು ಸೇವೆಗಳನ್ನು ಪಡೆಯಲೂ ಸಹ ಅಗತ್ಯವಾಗಿದೆ.
ಇ -ಆಧಾರ್ ಕಾರ್ಡ್, ಆಧಾರ್ ನ ಪಾಸ್ವರ್ಡ್ ಸಂರಕ್ಷಿತ ಎಲೆಕ್ಟ್ರಾನಿಕ್ ಪ್ರತಿಯಾಗಿದ್ದು ಅದು ಯುಐಡಿಐನಿಂದ ಡಿಜಿಟಲ್ ಸಹಿ ಮಾಡಲ್ಪಟ್ಟಿದೆ, ಇದು ಕಾರ್ಡ್ನ ದೃಢೀಕರಣವನ್ನು ಖಚಿತಪಡಿಸುತ್ತದೆ. ಇದನ್ನು ಯುಐಡಿಎಐ ಅಧಿಕೃತ ವೆಬ್ಸೈಟ್ನಿಂದ ಮೂರು ವಿಧಾನಗಳ ಮೂಲಕ ಡೌನ್ಲೋಡ್ ಮಾಡಬಹುದು. ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿ, ನಿಮ್ಮ ನೋಂದಣಿ ಸಂಖ್ಯೆ ಬಳಸಿ ಅಥವಾ ಜನ್ಮ ದಿನಾಂಕವನ್ನು ಬಳಸಿ ಡೌನ್ಲೋಡ್ ಮಾಡಬಹುದು. ಹಾಗಿದ್ದರೆ ಡೌನ್ಲೋಡ್ ಮಾಡುವ ವಿಧಾನ ಹೇಗೆಂದು ತಿಳಿಯೋಣ ಬನ್ನಿ.
ಆಧಾರ್ ಸಂಖ್ಯೆಯನ್ನು ಬಳಸಿ ಇ&-ಆಧಾರ್ ಕಾರ್ಡ್ಅನ್ನು ಡೌನ್ಲೋಡ್ ಮಾಡುವುದು ಹೇಗೆ ?
ಹಂತ 1: ಆಧಾರ್ ಅಧಿಕೃತ ವೆಬ್ಸೈಟ್ ಅಥವಾ https://myaadhaar.uidai.gov.in/genricDownloadAadhaar ಲಿಂಕ್ ಪ್ರವೇಶ ಮಾಡುವುದು.
ಹಂತ 2: ಆಧಾರ್ ಸಂಖ್ಯೆ ಆಯ್ಕೆಯನ್ನು ಕ್ಲಿಕ್ಕಿಸುವುದು.
ಹಂತ 3: ಮುಂದೆ, 12-ಅಂಕಿಯ ಆಧಾರ್ ಸಂಖ್ಯೆ, ಭದ್ರತಾ ಕೋಡ್ ಅನ್ನು ನಮೂದಿಸಿ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒನ್ ಟೈಮ್ ಪಾಸ್ವರ್ಡ್ ಪಡೆಯಲು ‘ಸೆಂಡ್ ಒಟಿಪಿ’ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 4: ಸ್ವೀಕರಿಸಿದ ಒಟಿಪಿ ನಮೂದಿಸಿ ಮತ್ತು ನಂತರ ‘ಪರಿಶೀಲಿಸಿ ಮತ್ತು ಡೌನ್ಲೋಡ್ʼ ಆಯ್ಕೆಯನ್ನು ಕ್ಲಿಕ್ ಮಾಡುವುದು.
ಹಂತ 5: ಪರಿಶೀಲನೆ ಮುಗಿದ ನಂತರ, ಡೌನ್ಲೋಡ್ ಫೋಲ್ಡರ್ನಲ್ಲಿ ಆಧಾರ್ ಕಾರ್ಡ್ನ ಪಾಸ್ವರ್ಡ್-ರಕ್ಷಿತ ಪಿಡಿಎ ಫೈಲ್ ಸಿಗಲಿದೆ. ಫೈಲ್ ತೆರೆಯಲು, ಎಂಟು ಅಕ್ಷರಗಳ ಪಾಸ್ವರ್ಡ್ ಅನ್ನು ನಮೂದಿಸಬೇಕಾಗುತ್ತದೆ. ಪಾಸ್ವರ್ಡ್ ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ದೊಡ್ಡ ಅಕ್ಷರಗಳಲ್ಲಿ ಮತ್ತು ಹುಟ್ಟಿದ ವರ್ಷ ನಮೂದಿಸಬೇಕು.
ಹುಟ್ಟಿದ ದಿನಾಂಕವನ್ನು ಬಳಸಿಕೊಂಡು ಇ& -ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ ?
ಹಂತ 1: ಆಧಾರ್ ವೆಬ್ಸೈಟ್ ಅಥವಾ https://myaadhaar.uidai.gov.in/retrieve-eid-uid ಗೆ ಭೇಟಿ ನೀಡಿ.
ಹಂತ 2: ರ್ಪೂಣ ಹೆಸರು ನಮೂದಿಸಿ. ನಂತರ ನೋಂದಾಯಿತ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಯನ್ನು ಸೇರಿಸಿ. ನಂತರ ಭದ್ರತಾ ಕೋಡ್ ಸೇರಿಸಿ.
ಹಂತ 3: ಸೆಂಡ್ ಒಟಿಪಿ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 4: ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿಯನ್ನು ನಮೂದಿಸಿ ಮತ್ತು ವೆರಿಫೈ ಒಟಿಪಿ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 5: ಆಧಾರ್ ಸಂಖ್ಯೆಯನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗಿದೆ ಎಂದು ತಿಳಿಸುವ ಸಂದೇಶವನ್ನು ಪಡೆಯುತ್ತೀರಿ.
ಹಂತ 6: ಅಧಿಕೃತ ಯುಐಡಿಐ ವೆಬ್ಸೈಟ್ನಲ್ಲಿ ಇ – ಆಧಾರ್ ಪುಟವನ್ನು ತೆರೆಯಿರಿ.
ಹಂತ 7: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ, ನಿಮ್ಮ 28-ಅಂಕಿಯ ದಾಖಲಾತಿ ಐಡಿ ಅಥವಾ 12-ಅಂಕಿಯ ಆಧಾರ್ ಸಂಖ್ಯೆ, ಭದ್ರತಾ ಕೋಡ್ ಅನ್ನು ನಮೂದಿಸಿ ಮತ್ತು ‘ಒಟಿಪಿ ಕಳುಹಿಸಿ’ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 8: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ ಮತ್ತು ನಿಮ್ಮ ಇ-ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಲು ವೆರಿಫೈ ಮತ್ತು ಡೌನ್ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ.
ನೋಂದಣಿ ಸಂಖ್ಯೆಯನ್ನು ಬಳಸಿ ಇ- ಆಧಾರ್ ಕಾರ್ಡ್ಡೌನ್ಲೋಡ್ ಮಾಡುವುದು ಹೇಗೆ ?
ಹಂತ 1: ಅಧಿಕೃತ ಯುಐಡಿಐ ವೆಬ್ಸೈಟ್ ಅಥವಾ https://myaadhaar.uidai.gov.in/retrieve-eid-uidಗೆ ಭೇಟಿ ನೀಡಿ.
ಹಂತ 2: ಈಗ ಡೌನ್ಲೋಡ್ ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ.
ಹಂತ 3: ಇಲ್ಲಿ ನಿಮ್ಮ 28-ಅಂಕಿಯ ದಾಖಲಾತಿ ಐಡಿ ಮತ್ತು ಭದ್ರತಾ ಕೋಡ್ ಅನ್ನು ನಮೂದಿಸಿ. ಮತ್ತು ಒಟಿಪಿ ಅನ್ನು ರಚಿಸಲು ‘ಸೆಂಡ್ ಒಟಿಪಿ’ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 4: ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ ಮತ್ತು ‘ವೆರಿಫೈ ಮತ್ತು ಡೌನ್ಲೋಡ್’ ಆಯ್ಕೆಯನ್ನು ಕ್ಲಿಕ್ ಮಾಡಿ. ಇ- ಆಧಾರ್ ಕಾರ್ಡ್ ನ ಪ್ರತಿ ಡೌನ್ಲೋಡ್ ಆಗಲಿದೆ.