alex Certify ಒತ್ತಡದ ಮಧ್ಯೆ ಖುಷಿಯಾಗಿರುವುದು ಹೇಗೆ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒತ್ತಡದ ಮಧ್ಯೆ ಖುಷಿಯಾಗಿರುವುದು ಹೇಗೆ……?

ಕೆಲಸದ ಅತೀವ ಒತ್ತಡದಿಂದ ಮನೆಮಂದಿಗೆ ಸಮಯ ಮೀಸಲಿಡುವುದು ಬಿಡಿ, ಸರಿಯಾಗಿ ನಿದ್ದೆ ಮಾಡಲೂ ಆಗುತ್ತಿಲ್ಲ ಎಂದು ದೂಷಿಸುತ್ತಿದ್ದೀರಾ, ಹಾಗಿದ್ದರೆ ಸರಿಯಾದ ಕ್ರಮದಲ್ಲಿ ಸಮಯವನ್ನು ಹೊಂದಿಸಿಕೊಳ್ಳುವುದನ್ನು ಕಲಿಯಿರಿ.

ರಾತ್ರಿ ನಿಗದಿತ ಸಮಯದ ಬಳಿಕ ಮೇಲ್ ಅಥವಾ ಮೊಬೈಲ್ ವಾಟ್ಸಾಪ್ ನೋಡುವುದನ್ನು ಹಾಗೂ ಅದಕ್ಕೆ ಪ್ರತಿಕ್ರಿಯೆ ಕೊಡುವುದನ್ನು ನಿಲ್ಲಿಸಿ. ಇದರಿಂದ ನಿಮಗೆ ರಾತ್ರಿ ಅರಾಮಾದಾಯಕ ನಿದ್ದೆ ಮಾಡಬಹುದು ಮಾತ್ರವಲ್ಲ ಹಲವು ವಿಧದ ಒತ್ತಡಗಳಿಂದ ಮುಕ್ತಿ ಪಡೆಯಬಹುದು.

ಬೆಳಗಿನ ಕೆಲಸಗಳು ಆರಂಭವಾಗುವ ಮುನ್ನ ಧ್ಯಾನ ಹಾಗೂ ವ್ಯಾಯಾಮಗಳಿಗೆಂದು ಕೊಂಚ ಹೊತ್ತನ್ನು ಮೀಸಲಿಡಿ. ನಿತ್ಯ ಜಿಮ್ ಗೆ ಹೋಗಲು ಸಾಧ್ಯವಾಗದಿದ್ದರೆ ವಾರಕ್ಕೆರಡು ಬಾರಿ ತೆರಳಿ.

ಕನಿಷ್ಠ ವಾರಾಂತ್ಯದಲ್ಲಿ ಮಕ್ಕಳೊಂದಿಗೆ ಖುಷಿಯಾಗಿ ಕಾಲ ಕಳೆಯಿರಿ. ಆ ಹೊತ್ತಿನಲ್ಲಿ ಫೋನ್ ಸ್ವಿಚ್ ಆಫ್ ಮಾಡಿಡಿ. ಸಂಗಾತಿಯೊಂದಿಗೆ ಶಾಪಿಂಗ್ ತೆರಳಲು ತಿಂಗಳಲ್ಲಿ ಒಂದು ದಿನವನ್ನಾದರೂ ಮೀಸಲಿಡಿ.

ನಿಮ್ಮ ಆತ್ಮೀಯರನ್ನು ಖುಷಿ ಪಡಿಸದೆ ಹೋದಲ್ಲಿ ನೀವು ಕಷ್ಟಪಟ್ಟರೂ ಪ್ರಯೋಜನವಿಲ್ಲ ಎಂಬುದನ್ನು ಅರಿತುಕೊಳ್ಳಿ. ಹಾಗಾಗಿ ಕುಟುಂಬಕ್ಕೆ ಮೊದಲ ಆದ್ಯತೆ ಕೊಡಿ. ಮೊಬೈಲ್ ನಿಂದ ದೂರ ಉಳಿದಷ್ಟೂ ನೀವು ಹೆಚ್ಚು ಖುಷಿಯಾಗಿರುತ್ತೀರಿ ಎಂಬುದು ನೆನಪಿರಲಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...