alex Certify ಟೀಂ ಇಂಡಿಯಾ ಕೋಚ್‌ ಹುದ್ದೆಗೆ ದ್ರಾವಿಡ್‌ ರನ್ನು ಒಪ್ಪಿಸಲು ಪಟ್ಟ ಕಷ್ಟವನ್ನು ಬಿಚ್ಚಿಟ್ಟ ಗಂಗೂಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾ ಕೋಚ್‌ ಹುದ್ದೆಗೆ ದ್ರಾವಿಡ್‌ ರನ್ನು ಒಪ್ಪಿಸಲು ಪಟ್ಟ ಕಷ್ಟವನ್ನು ಬಿಚ್ಚಿಟ್ಟ ಗಂಗೂಲಿ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್‌ ರನ್ನು ಹಾಲಿ ತಂಡದ ಪ್ರಧಾನ ಕೋಚ್‌ ಹುದ್ದೆಗೆ ಬರುವಂತೆ ಮನವೊಲಿಸಲು ತಾವು ಮಾಡಿದ ಪ್ರಯತ್ನಗಳ ಕುರಿತಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿವರಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021ರ ಬಳಿಕ ಕೋಚ್‌ ಹುದ್ದೆಯಿಂದ ಕೆಳಗಿಳಿದ ರವಿಶಾಸ್ತ್ರಿ ಜಾಗಕ್ಕೆ ದ್ರಾವಿಡ್‌ರನ್ನು ಕರೆತರಲು ಗಂಗೂಲಿಗೆ ಸ್ವಲ್ಪ ಶ್ರಮ ಹಾಕಬೇಕಾಗಿ ಬಂದಿದೆ.

“ಬಹಳ ದಿನಗಳಿಂದ ದ್ರಾವಿಡ್‌ರ ಹೆಸರು ನನ್ನ ಮನಸ್ಸಿನಲ್ಲಿತ್ತು. ಈ ಬಗ್ಗೆ ಜಯ್ ಶಾ ಜೊತೆಗೂ ಮಾತನಾಡಿದ್ದೆ. ಆದರೆ ತಂಡದ ಕೋಚ್‌ ಹುದ್ದೆಗೆ ಒಪ್ಪಿಸುವ ಸಂಬಂಧ ನಮ್ಮ ಮಾತಿಗೆ ರಾಹುಲ್ ಸಮ್ಮತಿ ನೀಡಿರಲಿಲ್ಲ. ಇಬ್ಬರು ಗಂಡುಮಕ್ಕಳು ಇರುವ ದ್ರಾವಿಡ್‌ಗೆ ಕೋಚ್‌ ಹುದ್ದೆಗೆ ಬಂದರೆ ಮನೆಯಿಂದ 8-10 ತಿಂಗಳ ಮಟ್ಟಿಗೆ ಆಚೆ ಇರಬೇಕಾದ ಕಾರಣ ಅವರು ಹೀಗೆ ಮಾಡಿದ್ದರು. ಹಾಗಾಗಿ ಸಹಜವಾಗಿಯೇ, ಒಂದು ಸಮಯದಲ್ಲಿ ನಾವೆಲ್ಲಾ ಭರವಸೆ ಕಳೆದುಕೊಂಡಿದ್ದೆವು,” ಎಂದು ಸಮಾರಂಭವೊಂದರಲ್ಲಿ ಈ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಗಂಗೂಲಿ ಹೇಳಿದ್ದರು.

ರಕ್ತ ಹೀನತೆಗೆ ಕಾರಣವಾಗ್ತಿದೆ ಇದರ ಕೊರತೆ

“ರಾಹುಲ್‌ರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಆಯ್ಕೆ ಮಾಡಿದಾಗ ನಾವು ಅವರ ಸಂದರ್ಶನ ಪಡೆದಿದ್ದೆವು. ಕ್ರಿಕೆಟ್ ಮುಖ್ಯಸ್ಥರಾಗಿ ಅವರನ್ನು ನೇಮಕ ಮಾಡಿದಾಗಿನಿಂದ, ನಾವು ಅವರ ಬೆನ್ನಿಗೆ ಬಿದ್ದು, ಟೀಂ ಇಂಡಿಯಾದಲ್ಲಿ ಅವರ ಪಾತ್ರದ ಕುರಿತು ಮನವೊಲಿಸುವ ಯತ್ನಕ್ಕೆ ಮುಂದಾದೆವು,” ಎಂದು ಬಿಸಿಸಿಐ ಅಧ್ಯಕ್ಷ ತಿಳಿಸಿದ್ದಾರೆ.

“ತಂಡದ ಮುಖ್ಯ ಕೋಚ್‌ ಹುದ್ದೆಗೆ ಯಾರನ್ನು ಆರಿಸಬೇಕೆಂದು ನಾವು ಆಟಗಾರರನ್ನೂ ಕೇಳಿದೆವು. ಅವರೆಲ್ಲರೂ ದ್ರಾವಿಡ್ ಪರವಾಗಿದ್ದು, ಈ ಬಗ್ಗೆ ದ್ರಾವಿಡ್‌ಗೂ ನಾವು ತಿಳಿಸಿದ್ದೆವು. ಈ ಆಫರ್‌ ಬಗ್ಗೆ ಯೋಚಿಸಲು ನಾನು ಖುದ್ದು ಅವರನ್ನು ಮನವಿ ಮಾಡಿಕೊಂಡೆ. ಕಡೇ ಪಕ್ಷ ಎರಡು ವರ್ಷಗಳ ಮಟ್ಟಿಗಾದರೂ ಪ್ರಯತ್ನಿಸಿ ನೋಡಲು ನಾನು ಅವರಲ್ಲಿ ಕೇಳಿಕೊಂಡ ಬಳಿಕ ಅವರು ಈ ಆಫರ್‌ ಅನ್ನು ಒಪ್ಪಿಕೊಂಡರು,” ಎಂದು ಗಂಗೂಲಿ ತಿಳಿಸಿದ್ದಾರೆ.

ಶಾಸ್ತ್ರಿ ನಿರ್ಗಮನದ ಬಳಿಕ ದ್ರಾವಿಡ್‌ರನ್ನು ಕೋಚ್‌ ಹುದ್ದೆಗೆ ಆಯ್ಕೆ ಮಾಡಿದ್ದು, ನಾನು ಕಂಡ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ಗಂಗೂಲಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...