ಆಧಾರ್ ದಾಖಲೆ ಇಂದು ಎಲ್ಲೆಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಗೌಪ್ಯತೆ ಉಳಿಸಿಕೊಳ್ಳುವ ಸವಾಲು ವ್ಯಾಪಕವಾಗುತ್ತಿದೆ. ಹೆಚ್ಚಿನ ಬಳಕೆಯೊಂದಿಗೆ ಆಧಾರ್ ವಂಚನೆಗೆ ಸಂಬಂಧಿಸಿದ ಅಪಾಯ ಸಹ ಹೆಚ್ಚುತ್ತಿವೆ.
ಆದರೆ, ಪೋಟೋ ಮಸುಕಾಗಿರುವ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಯುಐಡಿಎಐ ಮಾಡಿಕೊಟ್ಟಿದೆ.
ಹೆಚ್ಚುತ್ತಿರುವ ಅಪಾಯಗಳನ್ನು ಗಮನಿಸಿ ಯುಐಡಿಎಐ Masked ಆಧಾರ್ ಐಡಿ ಅಥವಾ ವರ್ಚುವಲ್ ಐಡಿ ಆಯ್ಕೆಯನ್ನು ನೀಡಿದೆ. ಹೆಸರೇ ಸೂಚಿಸುವಂತೆ, Masked ಆಧಾರ್ ವೈಯಕ್ತಿಕ ಮಾಹಿತಿಯ ಕುರಿತು ಯಾವುದೇ ಪ್ರಮುಖವಾದ ಸಂಗತಿಯನ್ನು ಬಹಿರಂಗಪಡಿಸದೆ ಹಂಚಿಕೊಳ್ಳಬಹುದು.
ಆಧಾರ್‌ನ Masked ವರ್ಷನ್ 12-ಅಂಕಿಯ ಆಧಾರ್ ಸಂಖ್ಯೆಯ ಮೊದಲ ಎಂಟು ಅಂಕೆ ಮರೆಮಾಡುವ ಮೂಲಕ ಪೂರ್ಣ ಗುರುತನ್ನು ರಕ್ಷಿಸುತ್ತದೆ, ಕೊನೆಯ ನಾಲ್ಕು ಅಂಕೆಗಳು ಮಾತ್ರ ಗೋಚರಿಸುತ್ತವೆ. ಇದರಿಂದ ಕಾರ್ಡ್ ಕಳೆದು ಹೋದರೂ ದುರುಪಯೋಗವಾಗದಂತೆ ತಡೆಯಬಹುದು. ಹಾಗೆಯೇ ಡೌನ್‌ಲೋಡ್ ಮಾಡಿದಾಗ, ಫೋಟೋ, ಕ್ಯೂಆರ್ ಕೋಡ್, ಭೌಗೋಳಿಕ ಮಾಹಿತಿ ಮತ್ತು ಇತರ ವಿವರ ಇರುತ್ತವೆ.
‘ಬೀಸ್ಟ್’ ದೃಶ್ಯ ಮರುಸೃಷ್ಟಿ ಮಾಡಿದ ಕಿಲಿ ಪೌಲ್; ತಾಂಜಾನಿಯಾ ಯುವಕನ ಕ್ರಿಯಾಶೀಲತೆಗೆ ವಿಜಯ್ ಅಭಿಮಾನಿಗಳ ಮೆಚ್ಚುಗೆ
Masked ಆಧಾರ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ….?
1. ಅಧಿಕೃತ UIDAI ವೆಬ್‌ಸೈಟ್‌ಗೆ ಭೇಟಿ ನೀಡುವುದು- https://uidai.gov.in/
2. ಹೋಮ್ ಪೇಜ್‌ನಲ್ಲಿ ‘ಡೌನ್‌ಲೋಡ್ ಆಧಾರ್’ ಮೇಲೆ ಕ್ಲಿಕ್ ಮಾಡುವುದು
3. 12-ಅಂಕಿಯ ಸಂಖ್ಯೆಯನ್ನು ನಮೂದಿಸಿ ಮತ್ತು ‘ಐ ವಾಂಟ್ Masked ಆಧಾರ್ ಎಂಬ ಬಾಕ್ಸ್ ಮೇಲೆ ಕ್ಲಿಕ್ ಮಾಡುವುದು
4. ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ‘ಒಟಿಪಿ ಕಳುಹಿಸಿ’ ಕ್ಲಿಕ್ ಮಾಡುವುದು
5. ಡಾಕ್ಯುಮೆಂಟ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಒಂದು ಬಾರಿಯ ಪಾಸ್‌ವರ್ಡ್ ಕಳುಹಿಸಲಾಗುತ್ತದೆ
6. ಒಟಿಪಿ ನಮೂದಿಸಿ ಮತ್ತು ‘ಡೌನ್‌ಲೋಡ್ ಆಧಾರ್’ ಮೇಲೆ ಕ್ಲಿಕ್ ಮಾಡುವುದು
ಇದರ ನಂತರ Masked ಆಧಾರ್ ಅನ್ನು ಡೌನ್‌ಲೋಡ್ ಮಾಡಬಹುದು. ಇದು ಪಿಡಿಎಫ್ ಸ್ವರೂಪದಲ್ಲಿರುತ್ತದೆ ಮತ್ತು ಪಾಸ್‌ವರ್ಡ್‌ನಿಂದ ಸುರಕ್ಷಿತವಾಗಿರುತ್ತದೆ.