
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಎಂಬಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಗೋಪಾಲ ಕೃಷ್ಣ ಭಟ್ ಎಂಬವರ ಮನೆಯ ಸ್ನಾನಗೃಹದಲ್ಲಿ ನಾಗರ ಹಾವು ಸೇರಿಕೊಂಡಿತ್ತು. ಈ ಹಾವನ್ನು ರಕ್ಷಣೆ ಮಾಡಲು ಉರಗ ತಜ್ಞ ಅಶೋಕ್ ಎಂಬವರು ಬಂದಿದ್ದರು.
ಹಾವಿನ ಬಾಲವನ್ನು ಹಿಡಿದು ಅದನ್ನು ಹೊರಗೆ ಎಳೆಯುವುದು ಅಶೋಕ್ರ ಪ್ಲಾನ್ ಆಗಿತ್ತು. ಆದರೆ ಬರೋಬ್ಬರಿ 14 ಅಡಿ ಉದ್ದ ಇದ್ದ ಈ ಕಾಳಿಂಗ ಸರ್ಪ ಬಾಲ ಎಳೆಯುತ್ತಿದ್ದಂತೆಯೇ ಬುಸ್ ಎಂದು ಹೆಡೆಯೆತ್ತಿ ನಿಂತಿದೆ. ಗಾಬರಿಗೊಂಡ ಅಶೋಕ್ ಅದೃಷ್ಟವಶಾತ್ ಹಾವಿನಿಂದ ಕಚ್ಚಿಸಿಕೊಳ್ಳದೇ ಪಾರಾಗಿದ್ದಾರೆ.
ಹಾವನ್ನು ಈ ರೀತಿಯೆಲ್ಲ ಹಿಡಿಯಲೇಬಾರದು….. ಅದರಲ್ಲೂ ಕಾಳಿಂಗ ಸರ್ಪವನ್ನು ಎಂದು ಈ ವಿಡಿಯೋಗೆ ಅರಣ್ಯ ಸೇವಾ ಅಧಿಕಾರ್ ಪರ್ವೀನ್ ಕಸ್ವಾನ್ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ಇನ್ನೊಬ್ಬರು ಬಾಲ ನೋಡಿ ಎಂದಿಗೂ ಹಾವನ್ನು ಅಳೆಯಬೇಡಿ ಎಂದು ಟ್ವಿಟರ್ನಲ್ಲಿ ಶೀರ್ಷಿಕೆ ನೀಡಿದ್ದಾರೆ.