alex Certify ʼದೇಣಿಗೆʼ ನೀಡಿದವರಿಗೆ ಸಿಗುತ್ತಾ ತೆರಿಗೆ ವಿನಾಯಿತಿ…? ಇಲ್ಲಿದೆ ಈ ಕುರಿತ ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼದೇಣಿಗೆʼ ನೀಡಿದವರಿಗೆ ಸಿಗುತ್ತಾ ತೆರಿಗೆ ವಿನಾಯಿತಿ…? ಇಲ್ಲಿದೆ ಈ ಕುರಿತ ಬಹುಮುಖ್ಯ ಮಾಹಿತಿ

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಅನೇಕರು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಸೇರಿದಂತೆ ಇನ್ನೂ ಅನೇಕ ಸಂಘ ಸಂಸ್ಥೆಗಳಿಗೆ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನೀವು ಕೂಡ ಈ ರೀತಿ ಸಹಾಯವನ್ನ ಮಾಡಿದ್ದರೆ ಈ ದೇಣಿಗೆಗಳ ದಾಖಲೆಯನ್ನ ತೆರಿಗೆ ಪಾವತಿ ವೇಳೆ ನೀಡೋದನ್ನ ಮರೆಯಬೇಡಿ. ಈ ದಾಖಲೆಯನ್ನ ಸಲ್ಲಿಸುವ ಮೂಲಕ ತೆರಿಗೆಯಲ್ಲಿ ವಿನಾಯ್ತಿ ಪಡೆಯಬಹುದಾಗಿದೆ.

ತೆರಿಗೆ ಪಾವತಿ ಆ್ಯಕ್ಟ್​​ನ ಸೆಕ್ಷನ್​ 80 ಜಿಯ ಪ್ರಕಾರ ಪರಿಹಾರ ನಿಧಿಗೆ ಹಾಗೂ ಚ್ಯಾರಿಟಿಗಳಿಗೆ ದೇಣಿಗೆ ರೂಪದಲ್ಲಿ ನೀಡುವ ಹಣದ ದಾಖಲೆಯನ್ನ ತೆರಿಗೆಯಿಂದ ವಿನಾಯಿತಿ ಪಡೆಯಲು ಬಳಸಿಕೊಳ್ಳಬಹುದಾಗಿದೆ. ಎಲ್ಲಾ ಕಡಿತಗಳು ಸೆಕ್ಷನ್​​ 80 ಜಿ ಅಡಿಯಲ್ಲಿ ಮಾನ್ಯವಾಗಿಲ್ಲ. ಹಳೆಯ ತೆರಿಗೆ ನಿಯಮವನ್ನ ಆರಿಸಿಕೊಂಡವರು ಈ ಕಡಿತವನ್ನ ಪಡೆಯಬಹುದಾಗಿದೆ.

ಆದರೆ ರಾಜಕೀಯ ಪಕ್ಷ ಅಥವಾ ವಿದೇಶಿ ಟ್ರಸ್ಟ್​​ಗೆ ನೀಡಿದ ಹಣವು ತೆರಿಗೆ ವಿನಾಯ್ತಿ ಪಡೆಯುವ ಅರ್ಹತೆ ಹೊಂದಿರೋದಿಲ್ಲ. ಆದರೆ ಪಿಎಂ ಕೇರ್ಸ್​ ಫಂಡ್​​ಗೆ ನೀಡುವ ದೇಣಿಗೆಯು ಸೆಕ್ಷನ್​ 80 ಜಿ ಅಡಿಯಲ್ಲಿ 100 ಪ್ರತಿಶತ ವಿನಾಯ್ತಿ ನೀಡುತ್ತದೆ.

2000 ರೂಪಾಯಿವರೆಗೆ ನಗದು ರೂಪದಲ್ಲಿ ದೇಣಿಗೆ ನೀಡಬಹುದು. ಆದರೆ ಇದಕ್ಕೂ ಹೆಚ್ಚಿನ ಮೊತ್ತವನ್ನ ಬ್ಯಾಂಕ್​ ಖಾತೆ ವರ್ಗಾವಣೆ, ಚೆಕ್​ ರೂಪದಲ್ಲಿಯೇ ನೀಡತಕ್ಕದ್ದು. ಆಹಾರ, ಬಟ್ಟೆ, ಔಷಧಿ ಈ ರೂಪಗಳಲ್ಲಿ ದೇಣಿಗೆ ನೀಡಿದ್ದರೆ ಇವುಗಳು ತೆರಿಗೆ ವಿನಾಯ್ತಿ ಪಡೆಯಲು ಅರ್ಹವಾಗೋದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...