alex Certify ನೀವೂ ಬಳಸ್ತಿದ್ದೀರಾ ಹಲವು ಸಿಮ್‌ ಕಾರ್ಡ್..? ಬಹು ʼಸಿಮ್‌ʼ ಖರೀದಿ ಕುರಿತು ಕೇಂದ್ರದಿಂದ ಹೊಸ ನಿಯಮ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವೂ ಬಳಸ್ತಿದ್ದೀರಾ ಹಲವು ಸಿಮ್‌ ಕಾರ್ಡ್..? ಬಹು ʼಸಿಮ್‌ʼ ಖರೀದಿ ಕುರಿತು ಕೇಂದ್ರದಿಂದ ಹೊಸ ನಿಯಮ ಜಾರಿ

ಒಂಬತ್ತಕ್ಕಿಂತ ಹೆಚ್ಚು ಸಿಮ್​ ಕಾರ್ಡ್ ಹೊಂದಿದವರ ಫೋನ್​ ಸಂಪರ್ಕ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ದೂರಸಂಪರ್ಕ ಇಲಾಖೆಯು ಇತ್ತೀಚಿಗೆ ಹೊರಡಿಸಿರುವ ಆದೇಶದ ಪ್ರಕಾರ, ಅಧಿಕಾರಿಗಳು ಮೊದಲು ಸಿಮ್​ಗಳನ್ನು ಪರಿಶೀಲಿಸುತ್ತಾರೆ.

ಒಂಬತ್ತಕ್ಕಿಂತ ಹೆಚ್ಚು ಸಿಮ್​ಗಳಿರೋದು ಗಮನಕ್ಕೆ ಬಂದಲ್ಲಿ ಒಂದು ಸಿಮ್​ ಹೊರತುಪಡಿಸಿ ಮಿಕ್ಕೆಲ್ಲ ಸಿಮ್​ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾಗಗಳಲ್ಲಿ ವಾಸಿಸುವ ಜನರಿಗೆ ಆರು ಸಿಮ್​ಗಳನ್ನು ಮರುಪರಿಶೀಲನೆ ಮಾಡಲಾಗುತ್ತದೆ.

ಕೇಂದ್ರ ಸರ್ಕಾರದ ಇತ್ತೀಚಿನ ಆದೇಶದ ಪ್ರಕಾರ ಗ್ರಾಹಕರಿಗೆ ಅವರು ಉಳಿಸಿಕೊಳ್ಳಲು ಬಯಸುವ ಸಿಮ್​ನ್ನು ಆಯ್ಕೆ ಮಾಡಲು ಹಾಗೂ ಉಳಿದ ಸಿಮ್​ಗಳನ್ನು ನಿಷ್ಕ್ರಿಯಗೊಳಿಸಲು ಆಯ್ಕೆ ನೀಡಲಾಗುತ್ತದೆ.

ಒಬ್ಬ ಚಂದಾದಾರನು ವೈಯಕ್ತಿಕವಾಗಿ ಒಂಬತ್ತಕ್ಕಿಂತ ಹೆಚ್ಚು ಮೊಬೈಲ್​ ಸಂಪರ್ಕಗಳನ್ನು ಹೊಂದಿದ್ದಲ್ಲಿ ( ಜಮ್ಮು & ಕಾಶ್ಮೀರ, ಆಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಆರು ಸಿಮ್​) ಮರುಪರಿಶೀಲನೆಗಾಗಿ ಮೊಬೈಲ್​ ಸಂಪರ್ಕಗಳನ್ನು ಫ್ಲ್ಯಾಗ್​ ಮಾಡಲಾಗುತ್ತದೆ ಎಂದು ದೂರ ಸಂಪರ್ಕ ಇಲಾಖೆ ಹೇಳಿದೆ.

ದೇಶದಲ್ಲಿ ಸೈಬರ್​ ಅಪರಾಧಗಳು, ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ನಿಯಮಗಳ ಪ್ರಕಾರ ಬಳಕೆಯಲ್ಲಿ ಇಲ್ಲದ ಎಲ್ಲಾ ಫ್ಲ್ಯಾಗ್​ ಮಾಡಲಾದ ಮೊಬೈಲ್​ ಸಂಪರ್ಕಗಳನ್ನು ಡೇಟಾಬೇಸ್​ನಿಂದ ತೆಗೆದು ಹಾಕುವಂತೆ ಟೆಲಿಕಾಂ ಆಪರೇಟರ್​ಗಳಿಗೆ ಡಿಓಟಿ ಸೂಚನೆ ನೀಡಿದೆ.

ಹಣಕಾಸಿನ ಅಪರಾಧಗಳು, ತೊಂದರೆದಾಯಕ ಕರೆಗಳು, ಸ್ವಯಂಚಾಲಿತ ಕರೆಗಳು ಮತ್ತು ಮೋಸದ ಚಟುವಟಿಕೆಗಳ ಘಟನೆಗಳನ್ನು ಪರಿಶೀಲಿಸಲು ಈ ಕ್ರಮವು ಬಂದಿದೆ. ನಿಯಮದ ಪ್ರಕಾರ ಬಳಕೆಯಲ್ಲಿಲ್ಲದ ಎಲ್ಲಾ ಫ್ಲ್ಯಾಗ್ ಮಾಡಲಾದ ಮೊಬೈಲ್ ಸಂಪರ್ಕಗಳನ್ನು ಡೇಟಾಬೇಸ್‌ನಿಂದ ತೆಗೆದುಹಾಕಲು ಟೆಲಿಕಾಂ ಆಪರೇಟರ್‌ಗಳಿಗೆ DoT ಕೇಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...