ಒಂಬತ್ತಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಹೊಂದಿದವರ ಫೋನ್ ಸಂಪರ್ಕ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ದೂರಸಂಪರ್ಕ ಇಲಾಖೆಯು ಇತ್ತೀಚಿಗೆ ಹೊರಡಿಸಿರುವ ಆದೇಶದ ಪ್ರಕಾರ, ಅಧಿಕಾರಿಗಳು ಮೊದಲು ಸಿಮ್ಗಳನ್ನು ಪರಿಶೀಲಿಸುತ್ತಾರೆ.
ಒಂಬತ್ತಕ್ಕಿಂತ ಹೆಚ್ಚು ಸಿಮ್ಗಳಿರೋದು ಗಮನಕ್ಕೆ ಬಂದಲ್ಲಿ ಒಂದು ಸಿಮ್ ಹೊರತುಪಡಿಸಿ ಮಿಕ್ಕೆಲ್ಲ ಸಿಮ್ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾಗಗಳಲ್ಲಿ ವಾಸಿಸುವ ಜನರಿಗೆ ಆರು ಸಿಮ್ಗಳನ್ನು ಮರುಪರಿಶೀಲನೆ ಮಾಡಲಾಗುತ್ತದೆ.
ಕೇಂದ್ರ ಸರ್ಕಾರದ ಇತ್ತೀಚಿನ ಆದೇಶದ ಪ್ರಕಾರ ಗ್ರಾಹಕರಿಗೆ ಅವರು ಉಳಿಸಿಕೊಳ್ಳಲು ಬಯಸುವ ಸಿಮ್ನ್ನು ಆಯ್ಕೆ ಮಾಡಲು ಹಾಗೂ ಉಳಿದ ಸಿಮ್ಗಳನ್ನು ನಿಷ್ಕ್ರಿಯಗೊಳಿಸಲು ಆಯ್ಕೆ ನೀಡಲಾಗುತ್ತದೆ.
ಒಬ್ಬ ಚಂದಾದಾರನು ವೈಯಕ್ತಿಕವಾಗಿ ಒಂಬತ್ತಕ್ಕಿಂತ ಹೆಚ್ಚು ಮೊಬೈಲ್ ಸಂಪರ್ಕಗಳನ್ನು ಹೊಂದಿದ್ದಲ್ಲಿ ( ಜಮ್ಮು & ಕಾಶ್ಮೀರ, ಆಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಆರು ಸಿಮ್) ಮರುಪರಿಶೀಲನೆಗಾಗಿ ಮೊಬೈಲ್ ಸಂಪರ್ಕಗಳನ್ನು ಫ್ಲ್ಯಾಗ್ ಮಾಡಲಾಗುತ್ತದೆ ಎಂದು ದೂರ ಸಂಪರ್ಕ ಇಲಾಖೆ ಹೇಳಿದೆ.
ದೇಶದಲ್ಲಿ ಸೈಬರ್ ಅಪರಾಧಗಳು, ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ನಿಯಮಗಳ ಪ್ರಕಾರ ಬಳಕೆಯಲ್ಲಿ ಇಲ್ಲದ ಎಲ್ಲಾ ಫ್ಲ್ಯಾಗ್ ಮಾಡಲಾದ ಮೊಬೈಲ್ ಸಂಪರ್ಕಗಳನ್ನು ಡೇಟಾಬೇಸ್‌ನಿಂದ ತೆಗೆದು ಹಾಕುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ಡಿಓಟಿ ಸೂಚನೆ ನೀಡಿದೆ.
ಹಣಕಾಸಿನ ಅಪರಾಧಗಳು, ತೊಂದರೆದಾಯಕ ಕರೆಗಳು, ಸ್ವಯಂಚಾಲಿತ ಕರೆಗಳು ಮತ್ತು ಮೋಸದ ಚಟುವಟಿಕೆಗಳ ಘಟನೆಗಳನ್ನು ಪರಿಶೀಲಿಸಲು ಈ ಕ್ರಮವು ಬಂದಿದೆ. ನಿಯಮದ ಪ್ರಕಾರ ಬಳಕೆಯಲ್ಲಿಲ್ಲದ ಎಲ್ಲಾ ಫ್ಲ್ಯಾಗ್ ಮಾಡಲಾದ ಮೊಬೈಲ್ ಸಂಪರ್ಕಗಳನ್ನು ಡೇಟಾಬೇಸ್‌ನಿಂದ ತೆಗೆದುಹಾಕಲು ಟೆಲಿಕಾಂ ಆಪರೇಟರ್‌ಗಳಿಗೆ DoT ಕೇಳಿದೆ.